For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಆರ್‌ಸಿಬಿ vs ಪಿಸಿಬಿಕೆ; ಪಂಜಾಬ್‌ಗೆ ಸವಾಲಿನ ಗುರಿ ನೀಡಿದ ಆರ್‌ಸಿಬಿ ಕೊಹ್ಲಿ ಪಡೆ

IPL 2021, RCB vs PBKS, match 48, Punjab kings need 165 runs to win

ಶಾರ್ಜಾ, ಅಕ್ಟೋಬರ್ 3: ಶಾರ್ಜಾ ಅಂಗಳದಲ್ಲಿ ನಡೆಯುತ್ತಿರುವ ಐಪಿಎಲ್ 14ನೇ ಆವೃತ್ತಿಯ 48ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿರುವ ಆರ್‌ಸಿಬಿ ಪಂಜಾಬ್ ತಂಡಕ್ಕೆ 165 ರನ್‌ಗಳ ಸವಾಲಿನ ಗುರಿ ನೀಡಿದೆ.

ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಮೊದಲ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಜೋಡಿ 68 ರನ್‌ಗಳ ಕೊಡುಗೆ ನೀಡಿದರು. ವಿರಾಟ್ ಕೊಹ್ಲಿ 25 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡ ಮುಂದಿನ ಎಸೆತದಲ್ಲಿಯೇ ಆರ್‌ಸಿಬಿ ತಂಡಕ್ಕೆ ಮತ್ತೊಂದು ಆಘಾತ ಉಂಟಾಯಿತು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡೇನಿಯಲ್ ಕ್ರಿಶ್ಚಿಯನ್ ಮೊದಲ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡರು. ಅದಾದ ಬಳಿಕ ತಂಡದ ಮೊತ್ತ 73 ಆಗುವಷ್ಟರಲ್ಲಿ ಆರ್‌ಸಿಬಿಯ ಮೂರನೇ ವಿಕೆಟ್ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ರೂಪದಲ್ಲಿ ಕಳೆದುಕೊಂಡಿತು. ಪಡಿಕ್ಕಲ್ ಈ ಪಂದ್ಯದಲ್ಲಿ 38 ಎಸೆತಗಳನ್ನು ಎದುರಿಸಿ 40 ರನ್‌ಗಳಿಸಿದರು. ಪಡಿಕ್ಕಲ್ ಅವರ ಈ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿತ್ತು.

ಮತ್ತೆ ಮಿಂಚಿದ ಮ್ಯಾಕ್ಸ್‌ವೆಲ್: ಆರ್‌ಸಿಬಿ ತಂಡದ ಪರವಾಗಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನಿಡುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಈ ಪಂದ್ಯದಲ್ಲಿಯೂ ಆರ್‌ಸಿಬಿಗೆ ಆಧಾರವಾದರು. ಕೊನೆಯ ಓವರ್‌ನಲ್ಲಿ ವಿಕೆಟ್ ಕಳೆದುಕೊಳ್ಳುವ ಮುನ್ನ ಮ್ಯಾಕ್ಸ್‌ವೆಲ್ ಭರ್ಜರಿ ಅರ್ಧ ಶತಕವನ್ನು ಸಿಡಿಸಿದರು. 33 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಮೂರು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್ ಸಿಡಿಸಿ 57 ರನ್‌ಗಳ ನಿರ್ಣಾಯಕ ಕೊಡುಗೆ ನೀಡಿದರು. ಮ್ಯಾಕ್ಸ್‌ವೆಲ್ 172.73ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ಗಳಿಸಿದ್ದಾರೆ.

ಇನ್ನು ಈ ಐಪಿಎಲ್‌ ಆವೃತ್ತಿಯ ಎರಡನೇ ಚರಣದಲ್ಲಿ ಉತ್ತಮ ಪ್ರದರ್ಶನ ನಿಡಲು ವಿಫಲವಾಗಿರುವ ಎಬಿ ಡಿವಿಲಿಯರ್ಸ್ ಈ ಪಂದ್ಯದಲ್ಲಿ ನಿರ್ಣಾಯಕ ಕೊಡುಗೆ ನೀಡಿದರು. ಆರಂಭದಲ್ಲಿ ನಿಧಾನಗತಿಯಲ್ಲಿ ರನ್‌ಗಳಿಸಿದರಾದರೂ ನಂತರ ಎಸರು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದರು. ಈ ಮೂಲಕ 18 ಎಸೆತ ಎದುರಿಸಿದ ಡಿವಿಲಿಯರ್ಸ್ 23 ರನ್‌ಗಳಿಸಿದರು. ಒಂಟಿ ರನ್‌ ಕದಿಯುವ ಪ್ರಯತ್ನದಲ್ಲಿ ಎಬಿಡಿ ವಿಲಿಯರ್ಸ್ ರನೌಟ್ ಆಗಿ ಫೆವಿಲಿಯನ್ ಸೇರಿದರು.

ಅಂತಿಮ ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡ ಆರ್‌ಸಿಬಿ: 20ನೇ ಓವರ್‌ನಲ್ಲಿ ಆರ್‌ಸಿಬಿ ಅರ್ಧ ಶತಕ ಗಳಿಸಿ ಅಬ್ಬರಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಸಹಿತ ಮೂರು ವಿಕೆಟ್ ಕಳೆದುಕೊಂಡಿತು. ಆದರೆ ಶಹ್ಬಾಜ್ ಅಹ್ಮದ್ ಒಂದು ಸಿಕ್ಸರ್ ಸಿಡಿಸುವ ಮೂಲಕ ತಂಡದ ಮೊತ್ತ 164ಕ್ಕೆ ಏರಿಸುವಲ್ಲಿ ಯಶಸ್ವಿಯಾದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಶಹಬಾಜ್ ಅಹಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್
ಬೆಂಚ್: ದುಷ್ಮಂತ ಚಮೀರಾ, ಸಚಿನ್ ಬೇಬಿ, ಕೈಲ್ ಜೇಮೀಸನ್, ನವದೀಪ್ ಸೈನಿ, ಪವನ್ ದೇಶಪಾಂಡೆ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ವಾನಿಂದು ಹಸರಂಗ, ಟಿಮ್ ಡೇವಿಡ್, ಆಕಾಶ್ ದೀಪ್, ಸುಯಾಶ್ ಪ್ರಭುದೇಸಾಯಿ

ಪಂಜಾಬ್ ಕಿಂಗ್ಸ್ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ/ ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಹರಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್
ಬೆಂಚ್: ಆದಿಲ್ ರಶೀದ್, ಮನ್ ದೀಪ್ ಸಿಂಗ್, ಕ್ರಿಸ್ ಜೋರ್ಡಾನ್, ಜಲಜ್ ಸಕ್ಸೇನಾ, ಮುರುಗನ್ ಅಶ್ವಿನ್, ಸೌರಭ್ ಕುಮಾರ್, ಇಶಾನ್ ಪೊರೆಲ್, ಉತ್ಕರ್ಶ್ ಸಿಂಗ್, ದರ್ಶನ್ ನಲ್ಕಂಡೆ, ಪ್ರಭಸಿಮ್ರಾನ್ ಸಿಂಗ್, ನಾಥನ್ ಎಲ್ಲಿಸ್, ಫ್ಯಾಬಿಯನ್ ಅಲೆನ್, ದೀಪಕ್ ಹೂಡಾ

Story first published: Sunday, October 3, 2021, 17:57 [IST]
Other articles published on Oct 3, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+