ಐಪಿಎಲ್ 2021: ಆರ್‌ಸಿಬಿ vs ಆರ್‌ಆರ್ ಪಂದ್ಯದಲ್ಲಿ ಯಾರಿಗೆ ಮೇಲುಗೈ? ಹೀಗಿದೆ ಸಂಭಾವ್ಯ ಆಡುವ ಬಳಗ

ಐಪಿಎಲ್‌ನಲ್ಲಿ ಇಂದು (ಬುಧವಾರ) 43ನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ ವೇದಿಕೆಯಾಗಿದೆ. ಈ ಎರಡು ತಂಡಗಳು ಐಪಿಎಲ್ ಇತಿಹಾಸದಲ್ಲಿ ಎಷ್ಟು ಬಾರಿ ಮುಖಾಮುಖಿಯಾಗಿದೆ? ಈ ಪಂದ್ಯಗಳಲ್ಲಿ ಯಾವ ತಂಡ ಮೇಲುಗೈ ಸಾಧಿಸಿದೆ ಎಂಬ ಬಗ್ಗೆ ಮುಂದೆ ಓದಿ..
ಹೆಡ್ ಟು ಹೆಡ್: ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ 21 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಆರ್‌ಸಿಬಿ ಅಲ್ಪ ಮೇಲುಗೈ ಸಾಧಿಸಿದೆ. ಆರ್‌ಸಿಬಿ ತಂಡ 11 ಬಾರಿ ಗೆದ್ದಿದ್ದರೆ 10 ಬಾರಿ ರಾಜಸ್ಥಾನ್ ರಾಯಲ್ಸ್ ಗೆಲುವು ಸಾಧಿಸಿದೆ. ಈ ಎರಡು ತಂಡಗಳ ಮುಖಾಮುಖಿಯಲ್ಲಿ ರಾಜಸ್ಥಾನ್ ಹೈಯೆಸ್ಟ್ ಸ್ಕೋರ್ ಗಳಿಸಿದ ದಾಖಲೆ ಹೊಂದಿದೆ. 217 ರನ್‌ಗಳನ್ನು ಆರ್‌ಆರ್ ಆರ್‌ಸಿಬಿ ವಿರುದ್ಧ ಗಳಿಸಿದೆ. ಇನ್ನು ಈ ಮುಖಾಮುಖಿಯಲ್ಲಿ ಕನಿಷ್ಠ ಸ್ಕೋರ್ ಗಳಿಸಿದ ಕೆಟ್ಟ ದಾಖಲೆಯೂ ರಾಜಸ್ಥಾನ್ ರಾಯಲ್ಸ್ ಹೆಸರಿನಲ್ಲಿದೆ. ಆರ್‌ಸಿಬಿ ವಿರುದ್ಧ ಆರ್‌ಆರ್ ಕೇವಲ 41 ರನ್‌ಗಳನ್ನು ಗಳಿಸಿತ್ತು. ಇನ್ನು ಈ ಎರಡು ತಂಡಗಳ ಮುಖಾಮುಖಿಯಲ್ಲಿ ಆರ್‌ಸಿಬಿ ಗಳಿಸಿದ ಹೈಯೆಸ್ಟ್ ಸ್ಕೋರ್ 200 ರನ್‌ಗಳು. ಕನಿಷ್ಠ ಸ್ಕೋರ್ 62.
ಪಂದ್ಯದ ನೇರಪ್ರಸಾರದ ಮಾಹಿತಿ: ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಈ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 HD, ಸ್ಟಾರ್ ಸ್ಪೋರ್ಟ್ಸ್ 3, ಸ್ಟಾರ್ ಸ್ಪೋರ್ಟ್ಸ್ 3 HDಯಲ್ಲಿ ನೇರಪ್ರಸಾರವಾಗಲಿದೆ. ಸಂಜೆ 7:30 ಈ ಪಂದ್ಯ ನಡೆಯಲಿದ್ದು ಹಾಟ್‌ಸ್ಟಾರ್‌ನಲ್ಲಿಯೂ ಪಂದ್ಯ ನೇರಪ್ರಸಾರವಾಗಲಿದೆ.
ಕೊನೆಯ ಆವೃತ್ತಿಯ ನಂತರ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರು: ಕಳೆದ 2020ರ ಐಪಿಎಲ್ ಆವೃತ್ತಿಯ ನಂತರ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಪೈಕಿ ಆರ್‌ಸಿಬಿಯ ಮೂವರು ಬ್ಯಾಟ್ಸ್‌ಮನ್‌ಗಳು ಅಗ್ರ ಸ್ಥಾನದಲ್ಲಿದ್ದಾರೆ. 473 ರನ್‌ಗಳಿಸಿರುವ ದೇವದತ್ ಪಡಿಕ್ಕಲ್ ಮೊದಲ ಸ್ಥಾನದಲ್ಲಿದ್ದರೆ ನಾಯಕ ವಿರಾಟ್ ಕೊಹ್ಲಿ466 ರನ್‌ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಎಬಿ ಡಿವಿಲಿಯರ್ಸ್ 454 ರನ್‌ಗಳಿಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನು ಬೌಲರ್‌ಗಳ ಪೈಕಿ 21 ವಿಕೆಟ್ ಪಡೆದಿರುವ ಯುಜುವೇಂದ್ರ ಚಾಹಲ್ 21 ವಿಕೆಟ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ ರಾಜಸ್ಥಾನ್ ರಾಯಲ್ಸ್ ತಂಡದ ಜೋಫ್ರಾ ಆರ್ಚರ್ 20 ವಿಕೆಟ್ ಸಂಪಾದಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪಾಲಾಗಿರುವ ಕ್ರಿಸ್ ಮೋರಿಸ್ 11 ವಿಕೆಟ್ ಗಳಿಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡ್ಡಿಕಲ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹಮದ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್
ರಾಜಸ್ಥಾನ ರಾಯಲ್ಸ್ ಸಂಭಾವ್ಯ ಆಡುವ ಬಳಗ: ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಚೇತನ್ ಸಕಾರಿಯಾ, ಜಯದೇವ್ ಉನಾದ್ಕಟ್, ಮುಸ್ತಫಿಜುರ್ ರಹಮಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications