ಆರ್‌ಸಿಬಿ ಮುಕುಟಕ್ಕೆ 3ನೇ ಗೆಲುವು, ಕೊಲ್ಕತ್ತಾ ವಿರುದ್ಧ 38 ರನ್‌ಗಳ ಭರ್ಜರಿ ಗೆಲುವು: ಹೈಲೈಟ್ಸ್

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ 38 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 14ನೇ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಸತತ ಮೂರನೇ ಗೆಲುವು ಸಾಧಿಸಿ ಮುನ್ನುಗ್ಗಿದೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸರ್ವಾಂಗೀಣ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದು ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದುಕೊಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಆರ್‌ಸಿಬಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಬೃಹತ್ ಮೊತ್ತ ದಾಖಲಿಸಿದ ಆರ್‌ಸಿಬಿ
ಟಾಸ್ ಗೆದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮೊದಲಿಗೆ ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ಆದರೆ ಎರಡನೇ ಓವರ್‌ನಲ್ಲಿ ಸ್ವತಃ ನಾಯಕ ವಿರಾಟ್ ಹಾಗೂ ರಜತ್ ಪಾಟೀದಾರ್ ವಿಕೆಟ್ ಕಳೆದುಕಳ್ಳುವ ಮೂಲಕ ಆಘಾತ ಅನುಭವಿಸಿತು. ಆದರೆ ಈ ಆರಂಭಿಕ ಯಶಸ್ಸನ್ನು ಹೆಚ್ಚು ಕಾಯ್ದುಕೊಳ್ಳುವಲ್ಲಿ ಕೆಕೆಆರ್ ವಿಫಲವಾಯಿತು. ನಂತರ ಮ್ಯಾಕ್ಸ್‌ವೆಲ್ ಅಬ್ಬರ ಆರಂಭವಾದರೆ ಬಳಿಕ ಎಬಿ ಡಿವಿಲಿಯರ್ಸ್ ರನ್ ಮಳೆ ಸುರಿಸಿದರು.

ಕೆಕೆಆರ್‌ಗೆ ಕಾಡಿದ ಮ್ಯಾಕ್ಸ್‌ವೆಲ್-ಎಬಿ ಡಿವಿಲಿಯರ್ಸ್
ಮೊದಲಿಗೆ ಗ್ಲೆನ್ ಮ್ಯಾಕ್ಸ್‌ವೆನ್ ಸ್ಪೋಟಕ ಆಟವನ್ನು ಪ್ರದರ್ಶಿಸುತ್ತಾ ತಂಡದ ಮೊತ್ತವನ್ನು ಏರಿಸುತ್ತಾ ಸಾಗಿದರು. ಆರಂಭದಲ್ಲಿ ದೇವದತ್ ಪಡಿಕ್ಕಲ್ ಉತ್ತಮ ಸಾಥ್ ನೀಡಿದರೆ ನಂತರ ಎಬಿ ಡಿವಿಲಿಯರ್ಸ್ ಜೊತೆಯಾದರು. ಮ್ಯಾಕ್ಸ್‌ವೆಲ್ 49 ಎಸೆತಗಳಲ್ಲಿ 78 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ನಂತರ ಎಬಿ ಡಿವಲಿಯರ್ಸ್ ತಮ್ಮ ರನ್‌ಗಳಿಕೆಯ ವೇಗವನ್ನು ಮತ್ತಷ್ಟು ವೃದ್ಧಿಸಿಕೊಂಡರು. ಕೊನೆಯವರೆಗೂ ಅಜೇಯವಾಗುಳಿದ ಎಬಿ ಡಿವಿಲಿಯರ್ಸ್ 76 ರನ್‌ಗಳಿಸಿದರು. ಈ ಸಾಹಸದಿಂದ ಆರ್‌ಸಿಬಿ 204 ರನ್‌ಗಳನ್ನು ಗಳಿಸಿತು.

ಬೌಲಿಂಗ್‌ನಲ್ಲೂ ಆರ್‌ಸಿಬಿ ಬೆಸ್ಟ್
ಆರ್‌ಸಿಬಿ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಕೆಕೆಆರ್‌ಗೆ ಶುಬ್ಮನ್ ಗಿಲ್ ಭರ್ಜರಿ ಆಟ ಪ್ರದರ್ಶಿಸುವ ಮುನ್ಸೂಚನೆ ನೀಡಿದರು. ಎರಡು ಸಿಕ್ಸರ್ ಎರಡು ಬೌಂಡರಿ ಸಿಡಿಸಿದ ಗಿಲ್ ಅವರನ್ನು ಜ್ಯಾಮಿಸನ್ ಔಟ್ ಮಾಡಿದರು. ಈ ಮೂಲಕ ಕೆಕೆಆರ್ ಮೊದಲ ಆಘಾತವನ್ನು ಅನುಭವಿಸಿತು. ನಂತರ ರಾಹುಲ್ ತ್ರಿಪಾಠಿ 25 ರನ್‌ಗಳಿಸಿ ಔಟಾದರೆ ನಿತೀಶ್ ರಾಣಾ 18 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಇಯಾನ್ ಮಾರ್ಗನ್ ಆಟವೂ 29 ರನ್‌ಗಳಿಗೆ ಅಂತ್ಯವಾಯಿತು. ಉಪ ನಾಯಕ ದಿನೇಶ್ ಕಾರ್ತಿಕ್ ಕೇವಲ 2 ರನ್‌ಗಳಿಸಲಷ್ಟೇ ಶಕ್ತರಾದರು.

ರಸ್ಸೆಲ್ ಆಟವೂ ನಡೆಯಲಿಲ್ಲ
ಅಂತೊಮ ಹಂತದಲ್ಲಿ ಆಂಡ್ರೆ ರಸೆಲ್ ಸ್ಪೋಟಕ ಆಟವನ್ನು ಪ್ರದರ್ಶಿಸುವ ಪ್ರಯತ್ನ ನಡೆಸಿದರಾದರೂ ಅದರಿಂದ ಹೆಚ್ಚಿನ ಯಶಸ್ಸು ದೊರೆಯಲಿಲ್ಲ. ಅವರು ಕೂಡ 20 ಓವರ್‌ಗಳನ್ನಿ 31 ರನ್‌ಗಳಿಸಿ ಔಟಾದರು. ಅಂತಿಮವಾಗಿ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 166 ರನ್‌ಗಳಿಸಲಷ್ಟೇ ಶಕ್ತವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications