IPL 2021: ಮಾರ್ಚ್ 29ರಿಂದ ಆರ್‌ಸಿಬಿ ಆಟಗಾರರ ಅಭ್ಯಾಸ ಶುರು

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಆಕರ್ಷಣೀಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರ್ಚ್ 29ರಿಂದ ಅಭ್ಯಾಸ ಆರಂಭಿಸಲಿದೆ. ಆರ್‌ಸಿಬಿಯ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸನ್ ಈ ಸಂಗತಿಯನ್ನು ಬುಧವಾರ (ಮಾರ್ಚ್ 24) ತಿಳಿಸಿದ್ದಾರೆ.
ಬುಧವಾರ ಆರ್‌ಸಿಬಿ ಒಂದು ವಿಡಿಯೋ ಬಿಡುಗಡೆ ಮಾಡಿತ್ತು. ಈ ವಿಡಿಯೋದಲ್ಲಿ ಮೈಕ್ ಹೆಸನ್ ಅವರು ಆರ್‌ಸಿಬಿ ಅಭ್ಯಾಸ ಆರಂಭಿಸುವ ಬಗ್ಗೆ ಮಾಹಿತಿ ನೀಡಿದ್ದರು. ಜೊತೆಗೆ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿಯ ಪ್ರಮುಖ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ ಆಡುತ್ತಿಲ್ಲ ಎಂದೂ ಹೇಳಿದ್ದಾರೆ.
ಮದುವೆಗೆ ಸಿದ್ಧತೆ ನಡೆಸುತ್ತಿರುವ ಆಸ್ಟ್ರೇಲಿಯಾ ಆಟಗಾರ ಜಂಪಾ ಐಪಿಎಲ್ ಆರಂಭದ ಕೆಲ ಪಂದ್ಯಗಳಲ್ಲಿ ಆಡುತ್ತಿಲ್ಲ ಎಂದು ತಿಳಿದು ಬಂದಿದೆ. ಏಪ್ರಿಲ್ 29ರಿಂದ ಮೇ 30ರ ವರೆಗೆ ಐಪಿಎಲ್ 2021ರ ಆವೃತ್ತಿ ನಡೆಯಲಿದೆ. ಮುಂಬೈ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ, ನವದೆಹಲಿ ಮತ್ತು ಅಹ್ಮದಾಬಾದ್ ತಾಣಗಳಲ್ಲಿ ಈ ಬಾರಿಯ ಐಪಿಎಲ್ ಪಂದ್ಯಗಳು ನಡೆಯಲಿವೆ.
ವಿಡಿಯೋದಲ್ಲಿ ಮಾತನಾಡಿದ ಹೆಸನ್, 'ನ್ಯೂಜಿಲೆಂಡ್ ಆಟಗಾರ ಫಿನ್ ಅಲೆನ್‌ಗೆ ಟಿ20ಐ ಪಂದ್ಯವಿದೆ. ಆ ಬಳಿಕ ಅಲೆನ್ ತಂಡ ಸೇರಿಕೊಳ್ಳಲಿದ್ದಾರೆ. ಎಬಿ ಡಿ ವಿಲಿಯರ್ಸ್ ಮಾರ್ಚ್ 28ರಂದು ಅಭ್ಯಾಸದಲ್ಲಿಗೆ ಬಂದಿಳಿಯಲಿದ್ದಾರೆ,' ಎಂದು ಮಾಹಿತಿ ನೀಡಿದ್ದಾರೆ. ಏಪ್ರಿಲ್ 9ರಂದು ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications