ಐಪಿಎಲ್ 2021ರ ಉಳಿದ ಪಂದ್ಯಗಳು ಭಾರತದಲ್ಲಿ ನಡೆಯದು: ಖಚಿತಪಡಿಸಿದ ಗಂಗೂಲಿ

ಕೊರೊನಾ ವೈರಸ್‌ನ ಕಾರಣದಿಂದಾಗಿ 14ನೇ ಆವೃತ್ತಿಯ ಐಪಿಎಲ್ ಪಂದ್ಯಗಳನ್ನು ಮುಂದೂಡಲಾಗಿದೆ. 29 ಪಂದ್ಯಗಳು ಈಗಾಗಲೇ ಪೂರ್ಣವಾಗಿದ್ದು ಇನ್ನು 31 ಪಂದ್ಯಗಳು ಬಾಕಿಯಿದೆ. ಹೀಗಾಗಿ ಯಾವಾಗ ಹಾಗೂ ಎಲ್ಲಿ ಮುಂದಿನ ಪಂದ್ಯಗಳು ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಉಳಿದ ಪಂದ್ಯಗಳು ಭಾರತದಲ್ಲಿ ನಡೆಯುವುದಿಲ್ಲ ಎಂಬುದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಐಪಿಎಲ್ 14ನೇ ಆವೃತ್ತಿಯ ಉಳಿದ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸದ್ಯದ ಮಟ್ಟಿಗೆ ಐಪಿಎಲ್ ಆಯೋಜನೆ ಎಲ್ಲಿ ಮಾಡಲಾಗುತ್ತದೆ ಎಂಬ ಬಗ್ಗೆಯೂ ಅಂತಿಮ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ತಿಳಿದಿದ್ದಾರೆ.
ಸದ್ಯ ಐಪಿಎಲ್ ಟೂರ್ನಿ ಆಯೋಜನೆ ಬಗ್ಗೆ ಸಾಕಷ್ಟು ಆಯ್ಕೆಗಳು ಬಿಸಿಸಿಐ ಮುಂದಿದೆ. ಇಂಗ್ಲೆಂಡ್, ಯುಎಇ, ಆಸ್ಟ್ರೇಲಿಯಾ ಈ ಮೂರು ರಾಷ್ಟ್ರಗಳು ಬಿಸಿಸಿಐ ಮುಂದಿರುವ ಪ್ರಮುಖ ಆಯ್ಕೆಗಳಾಗಿದೆ. ಈ ಮಧ್ಯೆ ಶ್ರೀಲಂಕಾ ಕೂಡ ತನ್ನಲ್ಲಿ ಐಪಿಎಲ್‌ನ ಉಳಿದ ಪಂದ್ಯಗಳನ್ನು ಆಯೋಜನೆ ಮಾಡುವಂತೆ ಪ್ರಸ್ತಾವನೆ ಕಳುಹಿಸಿದೆ.
ಈ ಮಧ್ಯೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಹತ್ವದ ಸರಣಿಯ ಬಗ್ಗೆಯೂ ಘೋಷಣೆಯೊಂದನ್ನು ಮಾಡಿದ್ದಾರೆ. ಜುಲೈ ತಿಂಗಳಿನಲ್ಲಿ ಭಾರತ ತಂಡ ಶ್ರೀಲಂಕಾಗೆ ತೆರಳಿ ಸಸೀಮಿತ ಓವರ್‌ಗಳ ಪ್ರವಾಸದಲ್ಲಿ ಭಾಗಿಯಾಗಲಿದೆ ಎಂದು ಗಂಗೂಲಿ ಮಾಹಿತಿಯನ್ನು ನೀಡಿದ್ದಾರೆ. ಆದರೆ ಈ ತಂಡದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಾ ಪ್ರಮುಖ ಆಟಗಾರರು ಭಾಗಿಯಾಗುವುದಿಲ್ಲ. ಈ ಎಲ್ಲಾ ಆಟಗಾರರು ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾರಣ ಸೀಮಿತ ಓವರ್‌ಗಳ ಸ್ಪೆಶಲಿಸ್ಟ್ ತಂಡವನ್ನು ಶ್ರೀಲಂಕಾಗೆ ಬಿಸಿಸಿಐ ಕಳುಹಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications