For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಮೈದಾನದಲ್ಲಿ ರಿಷಭ್ ಪಂತ್ ಹುಡುಗಾಟಕ್ಕೆ ಅಂಪಾಯರ್ ತಬ್ಬಿಬ್ಬು: ತಮಾಷೆಯ ವಿಡಿಯೋ!

IPL 2021: Rishabh Pant hilarious prank on umpire Anil Chaudhary; watch

ಫೈನಲ್ ಪಂದ್ಯದಕ್ಕಾಗಿ ಸೆಣೆಸಾಡುವ ಈ ಪಂದ್ಯದಲ್ಲಿ ಎರಡು ತಂಡಗಳ ಆಟಗಾರರು ಕೂಡ ಸಾಕಷ್ಟು ಗಂಭೀರವಾಗಿ ಆಟದಲ್ಲಿ ಮಗ್ನವಾಗಿರುವುದು ಸಾಮಾನ್ಯ. ಇಂತಾ ಒತ್ತಡದ ಪರಿಸ್ಥಿತಿಯಲ್ಲಿ ಶಾಂತಚಿತ್ತದಿಂದ ಇರುವುದು ಸುಲಭವಲ್ಲ. ಆದರೆ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದರೂ ಈ ಒತ್ತಡದ ಸಂದರ್ಭದಲ್ಲಿಯೂ ತಮ್ಮ ತಮಾಷೆಯ ಮನೋವೃತ್ತಿಯನ್ನು ಮೆರೆದಿದ್ದಾರೆ. ಅಂಪಾಯರ್ ಅನಿಲ್ ಚೌಧರಿ ಒಂದರೆ ಕ್ಷಣ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದಾರೆ.

ಅಂಪಾಯರ್ ಅನಿಲ್ ಚೌಧರಿ ಫೀಲ್ಡ್‌ನಲ್ಲಿ ಚೆಂಡನ್ನು ಬದಲಾಯಿಸುವುದರಲ್ಲಿ ಮಗ್ನವಾಗಿದ್ದರು. ಚೌಧರಿ ಚೆಂಡಿನ ಬಾಕ್ಸ್ ಹಿಡಿದುಕೊಂಡಿದ್ದರೆ ಆರ್ ಅಶ್ವಿನ್ ಚೆಂಡನ್ನು ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಪಂತ್ ಅನಿಲ್ ಚೌಧರಿಯ ಬಲಗೈಗೆ ಸವರ ಎಡಭಾಗಕ್ಕೆ ಬಂದು ನಿಂತರು. ಅನಿಲ್ ಚೌಧರಿ ಹಿಂದಿರುಗಿ ನೋಡಿದಾಗ ಅಲ್ಲಿ ಯಾರೂ ಇರಲಿಲ್ಲ. ಪಂತ್ ಅದಾಗಲೇ ಎಡಭಾಗಕ್ಕೆ ಬಂದು ನಿಂತಿದ್ದರು. ನಂತರ ಪಂತ್ ತಮಾಷೆಯಾಗಿ ಅನಿಲ್ ಚೌಧರಿ ಮುಖ ನೋಡಿ ನಗುತ್ತಾ ನಿಂತಿದ್ದರು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಿಷಭ್ ಪಂತ್ ಅವರ ಈ ವರ್ತನೆ ಅಭಿಮಾನಿಗಳ ಹೃಯದ ಗೆದ್ದಿದೆ. 24ರ ಹರೆಯದ ಮಗು ಎಂದು ಪಂತ್‌ ಹುಡುಗಾಟಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ರಿಷಬ್ ಪಂತ್ ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಐಪಿಎಲ್ 14ನೇ ಆವೃತ್ತಿಯ ಪ್ಲೇ ಆಫ್‌ನ ಕೊನೆಯ ಪಂದ್ಯ ನಡೆಯುತ್ತಿದೆ. ಎರಡನೇ ಕ್ವಾಲಿಫೈಯರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದೆ. ಫೈನಲ್ ಪ್ರವೇಶಕ್ಕೆ ನಡೆಯುತ್ತಿರುವ ಈ ಸೆಣೆಸಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ ತಂಡ ಕೊಲ್ಕತ್ತಾ ನೈಟ್ ರೈಡರ್ಸ್‌ಗೆ 136 ರನ್‌ಗಳ ಗುರಿ ನೀಡಿದೆ.

ಈ ಮಹತ್ವದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಶಾರ್ಜಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೆಕೆಆರ್ ತಂಡದ ಬೌಲರ್‌ಗಳ ಮುಂದೆ ಸಾಕಷ್ಟು ತಿಣುಕಾಡಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಡೆಲ್ಲಿ 5 ವಿಕೆಟ್ ಕಳೆದುಕೊಂಡು 135 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ / ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯಿನಿಸ್, ಶಿಮ್ರಾನ್ ಹೆಟ್ಮೀರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಚ್ ನಾರ್ಕಿಯಾ
ಬೆಂಚ್: ಟಾಮ್ ಕುರ್ರನ್, ಇಶಾಂತ್ ಶರ್ಮಾ, ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಉಮೇಶ್ ಯಾದವ್, ಸ್ಟೀವನ್ ಸ್ಮಿತ್, ಸ್ಯಾಮ್ ಬಿಲ್ಲಿಂಗ್ಸ್, ಲುಕ್ಮನ್ ಮೇರಿವಾಲಾ, ಬೆನ್ ದ್ವಾರಶುಯಿಸ್, ಪ್ರವೀಣ್ ದುಬೆ, ವಿಷ್ಣು ವಿನೋದ್, ಕುಲ್ವಂತ್ ಖೇಜ್ರೋಲಿಯಾ, ಲಲಿತ್ ಯಾದವ್, ರಿಪಾಲ್ ಪಟೇಲ್

KKR ತಂಡ ಕಡೆಗೆ 6 ಹೊಡೆದು ಗೆದ್ದು ಬೀಗಿದರು | Oneindia Kannada

ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ: ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುನಿಲ್ ನರೈನ್, ಶಕೀಬ್ ಅಲ್ ಹಸನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ
ಬೆಂಚ್: ಹರ್ಭಜನ್ ಸಿಂಗ್, ಟಿಮ್ ಸೌಥಿ, ಆಂಡ್ರೆ ರಸೆಲ್, ಬೆನ್ ಕಟ್ಟಿಂಗ್, ಕರುಣ್ ನಾಯರ್, ಪವನ್ ನೇಗಿ, ಕುಲದೀಪ್ ಯಾದವ್, ಗುರ್ಕೀರತ್ ಸಿಂಗ್ ಮಾನ್, ಶೆಲ್ಡನ್ ಜಾಕ್ಸನ್, ಸಂದೀಪ್ ವಾರಿಯರ್, ಟಿಮ್ ಸೀಫೆರ್ಟ್, ಪ್ರಸಿದ್ ಕೃಷ್ಣ, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ವೈಭವ್ ಅರೋರಾ

Story first published: Thursday, October 14, 2021, 10:00 [IST]
Other articles published on Oct 14, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+