ಐಪಿಎಲ್‌ನಲ್ಲಿ 1000 ರನ್ ಬಾರಿಸಿದ ಅತೀ ಕಿರಿಯ ಆಟಗಾರರ ಪಟ್ಟಿ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕ, ವಿಕೆಟ್ ಕೀಪರ್ ರಿಷಭ್ ಪಂತ್ ವಿಶೇಷ ದಾಖಲೆ ಪಟ್ಟಿಯಲ್ಲಿದ್ದಾರೆ. ಐಪಿಎಲ್‌ನಲ್ಲಿ 1000 ರನ್ ಪೂರೈಸಿದ ಅತೀ ಕಿರಿಯ ಬ್ಯಾಟ್ಸ್‌ಮನ್ ದಾಖಲೆ ಪಟ್ಟಿಯಲ್ಲಿ ಪಂತ್ ಮೊದಲ ಸ್ಥಾನದಲ್ಲಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೂಡ ಇದ್ದಾರೆ.
ಭಾನುವಾರ (ಏಪ್ರಿಲ್ 18) ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 11ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂತ್ 15 ರನ್ ಬಾರಿಸಿ ಜಾಯೆ ರಿಚರ್ಡ್ಸನ್ ಓವರ್‌ನಲ್ಲಿ ದೀಪ್ ಹೂಡಾಗೆ ಕ್ಯಾಚಿತ್ತು ಔಟಾಗಿದ್ದರು.
ಭಾನುವಾರದ ಪಂದ್ಯಕ್ಕೂ ಮುನ್ನವೇ ಅಂದರೆ 3 ವರ್ಷಕ್ಕೆ ಮೊದಲೇ ಪಂತ್ ಈ ದಾಖಲೆ ಪಟ್ಟಿಯಲ್ಲಿದ್ದರು. ಐಪಿಎಲ್‌ನಲ್ಲಿ 1000 ರನ್ ಬಾರಿಸಿದ ಭಾರತೀಯ ಅತೀ ಕಿರಿಯ ಬ್ಯಾಟ್ಸ್‌ಮನ್‌ಗಳಲ್ಲಿ ಪಂತ್ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಸಂಜು ಸ್ಯಾಮ್ಸನ್, ತೃತೀಯ ಸ್ಥಾನದಲ್ಲಿ ಶುಬ್ಮನ್ ಗಿಲ್ ಇದ್ದಾರೆ. ಈಗ 23ರ ಹರೆಯದ ಪಂತ್ 71 ಐಪಿಎಲ್ ಪಂದ್ಯಗಳಲ್ಲಿ 2160 ರನ್ ಬಾರಿಸಿದ್ದಾರೆ.
ಐಪಿಎಲ್‌ನಲ್ಲಿ 1000 ರನ್ ಪೂರೈಸಿದ ಅತೀ ಕಿರಿಯ ಆಟಗಾರರು
* ರಿಷಭ್ ಪಂತ್, 20 ವರ್ಷ, 218 ದಿನಗಳು
* ಸಂಜು ಸ್ಯಾಮ್ಸನ್, 21 ವರ್ಷ, 183 ದಿನಗಳು
* ಶುಬ್ಮನ್ ಗಿಲ್, 21 ವರ್ಷ, 222 ದಿನಗಳು
* ವಿರಾಟ್ ಕೊಹ್ಲಿ, 22 ವರ್ಷ, 175 ದಿನಗಳು
* ರೋಹಿತ್ ಶರ್ಮಾ, 22 ವರ್ಷ, 340 ದಿನಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications