Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಮಿಳು ಮಾತನಾಡಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ: ವಿಡಿಯೋ

IPL 2021: Rohit Sharma Announced He Reached Chennai in Tamil

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ ಇತಿಹಾಸದಲ್ಲೇ ಅತೀ ಹೆಚ್ಚು ಟ್ರೋಫಿಗಳನ್ನು (ಐದು ಬಾರಿ) ಗೆದ್ದ ದಾಖಲೆ ನಿರ್ಮಿಸಿರುವ ಮುಂಬೈ ಇಂಡಿಯನ್ಸ್ ತಂಡ 14ನೇ ಆವೃತ್ತಿಯ ಐಪಿಎಲ್‌ಗಾಗಿ ಸಿದ್ಧತೆ ನಡೆಸುತ್ತಿದೆ. ಇಡೀ ಎಂಐ ತಂಡ ಸದ್ಯ ಚೆನ್ನೈಯಲ್ಲಿ ಅಭ್ಯಾಸ ಆರಂಭಿಸಿದೆ.

ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಏಪ್ರಿಲ್ 1ರ ಗುರುವಾರ ಚೆನ್ನೈಗೆ ತಲುಪಿದೆ. ಇದನ್ನು ಶರ್ಮಾ ತಮಿಳು ಭಾಷೆಯ ಮೂಲಕವೇ ಹೇಳಿದ್ದಾರೆ. ರೋಹಿತ್ ತಮಿಳು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂಬೈ ಇಂಟಿಯನ್ಸ್ ಟ್ವೀಟ್‌ನಲ್ಲಿ ಕಾಣಿಸಿಕೊಂಡಿರುವ ರೋಹಿತ್ ಶರ್ಮಾ, 'ವಣಕ್ಕಂ ಚೆನ್ನೈ, ಮುಂಬೈ ಇಂಡಿಯನ್ಸ್ ಇಂಗೆ ವಂತಿಟ್ಟೊಂ' (ನಮಸ್ತೆ ಚೆನ್ನೈ, ಮುಂಬೈ ಇಂಡಿಯನ್ಸ್ ಇಲ್ಲಿಗೆ ಬಂದಿದೆ) ಎಂದು ಹೇಳಿದ್ದಾರೆ. ಜೊತೆಗೆ ಒನ್ ಫ್ಯಾಮಿಲಿ ಇಲ್ಲಿ ತಲುಪಿದೆ ಎಂದು ಬರೆದುಕೊಳ್ಳಲಾಗಿದೆ.

ಏಪ್ರಿಲ್ 9ರಂದು ನಡೆಯುವ 14ನೇ ಆವೃತ್ತಿಯ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪರ್ಧಿಸಲಿವೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಏಪ್ರಿಲ್ 9ಕ್ಕೆ 7:30 PM ಈ ಪಂದ್ಯ ಆರಂಭಗೊಳ್ಳಲಿದೆ.

Story first published: Thursday, April 1, 2021, 16:34 [IST]
Other articles published on Apr 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+