ಐಪಿಎಲ್: ತಂಡ ಸೇರಲು ಮುಂಬೈಗೆ ಬಂದ ಹಿಟ್‌ಮ್ಯಾನ್ ರೋಹಿತ್ ಶರ್ಮಾ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿ ಸಲುವಾಗಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮುಂಬೈಗೆ ಬಂದಿದ್ದಾರೆ. ಸೋಮವಾರ ಮುಂಬೈಗೆ ಬಂದಿಳಿದಿರುವ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್, ಶೀಘ್ರ ತಂಡ ಸೆರಿಕೊಳ್ಳಲಿದ್ದಾರೆ.
ಭಾರತ-ಇಂಗ್ಲೆಂಡ್ ತೃತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ 7 ರನ್‌ಗಳ ರೋಚಕ ಜಯ ಗಳಿಸಿತ್ತು. ಅಲ್ಲದೆ ಮೂರು ಪಂದ್ಯಗಳ ಸರಣಿಯನ್ನೂ 2-1ರಿಂದ ಗೆದ್ದಿತ್ತು. ಆಂಗ್ಲರೆದುರು ಟೆಸ್ಟ್, ಏಕದಿನ, ಟಿ20ಐ ಸರಣಿ ಗೆದ್ದಿರುವ ಭಾರತದ ಪರ ರೋಹಿತ್ ಬಲ ತುಂಬಿದ್ದರು.
ರೋಹಿತ್ ಮುಂಬೈಗೆ ಬಂದಿರುವ ವಿಡಿಯೋವನ್ನು ಮುಂಬೈ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. 'ರೋಹಿತ್ ಎಲ್ಲಿದ್ದಾರೆ ಎಂದು ಕೆಲವರು ಹುಡುಕುತ್ತಿರಬಹುದು, ರೋಹಿತ್ ಇಲ್ಲಿದ್ದಾರೆ' ಎಂದು ಟ್ವೀಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಇಂಗ್ಲೆಂಡ್ ಸರಣಿ ಮುಗಿಸಿರುವ ರೋಹಿತ್ ಮುಂಬೈಗೆ ಬಂದಿದ್ದಾರೆ.
ರೋಹಿತ್ ಜೊತೆಗೆ ಮುಂಬೈ ಇಂಡಿಯನ್ಸ್ ಇತರ ಆಟಗಾರರಾದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಇಶಾನ್ ಕಿಶಾನ್ ಮೊದಲಾದವರೂ ತಂಡ ಸೇರಿಕೊಂಡಿದ್ದಾರೆ. ಏಪ್ರಿಲ್ 9ರಂದು ನಡೆಯಲಿರುವ 14ನೇ ಆವೃತ್ತಿಯ ಐಪಿಎಲ್ ಆಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಕಾದಾಡಲಿವೆ. ಚೆನ್ನೈನಲ್ಲಿ ಈ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications