For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಚೊಚ್ಚಲ ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್!

IPL 2021: Rohit Sharma creates special record against Kolkata Knight Riders

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಒಂದೇ ತಂಡದ ವಿರುದ್ಧ 1000+ ರನ್ ಬಾರಿಸಿದ ಮೊದಲ ಆಟಗಾರನಾಗಿ ಹಿಟ್‌ಮ್ಯಾನ್ ರೋಹಿತ್ ಗುರುತಿಸಿಕೊಂಡಿದ್ದಾರೆ.

ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಗುರುವಾರ (ಸೆಪ್ಟೆಂಬರ್‌ 23) ನಡೆದ ಐಪಿಎಲ್ 34ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 30 ಎಸೆತಗಳಲ್ಲಿ 33 ರನ್ ಬಾರಿಸಿದ್ದರು. ಈ ರನ್‌ನೊಂದಿಗೆ ಶರ್ಮಾ ಹೊಸ ದಾಖಲೆ ನಿರ್ಮಿಸಿದ್ದಾರೆ.

ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, Live ಸ್ಕೋರ್‌ಕಾರ್ಡ್

1
50842

ಅಷ್ಟೇ ಅಲ್ಲ, ರೋಹಿತ್ ಐಪಿಎಲ್‌ನಲ್ಲಿ 5500 ರನ್ ಕೂಡ ಶರ್ಮಾ ಪೂರೈಸಿದ್ದಾರೆ. 34ರ ಹರೆಯದ ರೋಹಿತ್ 208 ಐಪಿಎಲ್ ಪಂದ್ಯಗಳಲ್ಲಿ 5513 ರನ್ ಬಾರಿಸಿದ್ದಾರೆ. 43 ಟೆಸ್ಟ್‌ ಪಂದ್ಯಗಳಲ್ಲಿ 3047 ರನ್, 227 ಏಕದಿನ ಪಂದ್ಯಗಳಲ್ಲಿ 9205 ರನ್, 111 ಟಿ20ಐ ಪಂದ್ಯಗಳಲ್ಲಿ 2864 ರನ್ ಗಳಿಸಿದ್ದಾರೆ.

ಗುರುವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ಪರ ರೋಹಿತ್ 33 ರನ್ ಬಾರಿಸಿ ಸುನಿಲ್ ನರೈನ್ ಅವರ 9.2ನೇ ಓವರ್‌ನಲ್ಲಿ ಶುಬ್ಮನ್ ಗಿಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 14ನೇ ಓವರ್‌ ಮುಕ್ತಾಯದ ವೇಳೆಗೆ ಮುಂಬೈ 2 ವಿಕೆಟ್ ಕಳೆದು 101 ರನ್ ಗಳಿಸಿತ್ತು.

Story first published: Thursday, September 23, 2021, 20:56 [IST]
Other articles published on Sep 23, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+