Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾಗೆ 12 ಲಕ್ಷ ರೂ. ದಂಡ

IPL 2021: Rohit Sharma has been fined 12 Lakhs for maintaining slow overrate against Delhi Capitals
Rohit Sharmaಗೆ ಸೋತ ನಂತರ‌ಮತ್ತೋಂದು ಶಾಕ್ | Oneindia Kannada

ಚೆನ್ನೈ: ಮಂಗಳವಾರದ (ಏಪ್ರಿಲ್ 20) ಇಂಡಿಯನ್ ಪ್ರೀಮಿಯರ್ ಲೀಗ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್‌ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಮುಂಬೈ ನಾಯಕ ರೋಹಿತ್ ಶರ್ಮಾಗೆ ಬರೋಬ್ಬರಿ 12 ಲಕ್ಷ ರೂ. ದಂಡದ ಬರೆಯೂ ಬಿದ್ದಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಲೋ ಓವರ್‌ರೇಟ್‌ ನಿರ್ವಹಿಸಿದ್ದಕ್ಕಾಗಿ ರೋಹಿತ್ ಶರ್ಮಾಗೆ 12 ಲಕ್ಷ ರೂ.ಗೆ ದಂಡ ವಿಧಿಸಲಾಗಿದೆ. ಇದೇ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಎಂಎಸ್ ಧೋನಿಗೂ ಸ್ಲೋ ಓವರ್‌ರೇಟ್‌ಗಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು.

ಐಸಿಸಿ ನಿಯಮದ ಪ್ರಕಾರ ಟೆಸ್ಟ್‌ ಕ್ರಿಕೆಟ್‌ನಲ್ಲಾದರೆ ಫೀಲ್ಡಿಂಗ್ ಮಾಡುವ ತಂಡ ಗಂಟೆಗೆ 15ರಂತೆ ಓವರ್‌ ಮುಗಿಸಿರಬೇಕಾಗುತ್ತದೆ. ಅದೇ ಏಕದಿನದಲ್ಲಾದರೆ ಗಂಟೆಗೆ 14.28 ಓವರ್‌, ಟಿ20ಐನಲ್ಲಾದರೆ ಗಂಟೆಗೆ 14.11 ಓವರ್‌ ಮುಗಿಸಿರಬೇಕಾಗುತ್ತದೆ. ಐಪಿಎಲ್‌ನಲ್ಲಿ 90 ನಿಮಿಷಗಳ ಒಳಗಾಗಿ ಇನ್ನಿಂಗ್ಸ್‌ ಮುಗಿಸಬೇಕಾಗುತ್ತದೆ. ಈ ಕಾಲಾವಧಿ ಮೀರಿದರೆ ಫೀಲ್ಡಿಂಗ್ ತಂಡಕ್ಕೆ ದಂಡ ವಿಧಿಸಲಾಗುತ್ತದೆ.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಮುಂಬೈ ಇಂಡಿಯನ್ಸ್, ನಾಯಕ ರೋಹಿತ್ ಶರ್ಮಾ 44, ಸೂರ್ಯಕುಮಾರ್ ಯಾದವ್ 24, ಇಶಾನ್ ಕಿಶನ್ 26 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 137 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಶಿಖರ್ ಧವನ್ 45, ಸ್ಟೀವ್ ಸ್ಮಿತ್ 33 ರನ್‌ನೊಂದಿಗೆ 19.1 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 138 ರನ್ ಗಳಿಸಿತ್ತು.

Story first published: Wednesday, April 21, 2021, 17:34 [IST]
Other articles published on Apr 21, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+