ಐಪಿಎಲ್‌ನಲ್ಲಿ ಯಶಸ್ವಿ ನಾಯಕ ದಾಖಲೆ ಯಾರ ಹೆಸರಲ್ಲಿದೆ ಗೊತ್ತಾ?!

ಮುಂಬೈ: 14ನೇ ಆವೃತ್ತಿಯ ಮುಂಬೈ ಇಂಡಿಯನ್ಸ್ ಲೀಗ್ (ಐಪಿಎಲ್) ಈಗಾಗಲೇ ಶುರುವಾಗಿದೆ. ಎಲ್ಲಾ ತಂಡಗಳಿಗೂ ತಲಾ ಒಂದೊಂದು ಪಂದ್ಯ ಮುಗಿದಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿದ್ದ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದು ಮತ್ತೆ ಜಯದ ಲಯಕ್ಕೆ ಬಂದಿದೆ.
ಈವರೆಗೆ ಒಟ್ಟು 13 ಐಪಿಎಲ್ ಸೀಸನ್ ಮುಗಿದಿದೆ. ಇಷ್ಟು ಸೀಸನ್‌ಗಳಲ್ಲಿ ಅತೀ ಯಶಸ್ವಿ ತಂಡ ಯಾವುದು ಅಂತ ನೀವು ಕೋಳೋದಾದ್ರೆ ಅದು ಮುಂಬೈ ಇಂಡಿಯನ್ಸ್. ಚೆನ್ನೈ ಸೂಪರ್ ಕಿಂಗ್ಸ್ ಹೆಸರಿನಲ್ಲಿ ದ್ವಿತೀಯ ಯಶಸ್ವಿ ತಂಡ ಎಂಬ ದಾಖಲೆಯಿದೆ. ಆದರೆ ಐಪಿಎಲ್‌ನಲ್ಲಿ ಯಶಸ್ವಿ ನಾಯಕ ಯಾರು ಗೊತ್ತಾ?

ಐಪಿಎಲ್‌ನಲ್ಲಿ ಅತೀ ಯಶಸ್ವಿ ನಾಯಕನೆಂಬ ದಾಖಲೆಯೂ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಒಟ್ಟು 5 ಬಾರಿ ಟ್ರೋಫಿ ಗೆದ್ದಿದೆ. ಒಟ್ಟು 118 ಪಂದ್ಯಗಳಿಗೆ ಶರ್ಮಾ ನಾಯಕತ್ವ ವಹಿಸಿಕೊಂಡಿದ್ದರು. ಇದರಲ್ಲಿ 69 ಪಂದ್ಯಗಳಲ್ಲಿ ಎಂಐ ಗೆದ್ದಿದೆ, 45ರಲ್ಲಿ ಸೋತಿದೆ, 4 ಪಂದ್ಯ ಟೈ ಎನಿಸಿದೆ.
ಐಪಿಎಲ್ ಇತಿಹಾಸದಲ್ಲಿ ತಂಡಗಳ ನಾಯಕತ್ವ ವಹಿಸಿದವರ ವಿನ್ನಿಂಗ್ ಪರ್ಸೆಂಟೇಜ್ ಗಮನಿಸಿದರೆ, ಅದರಲ್ಲೂ ರೋಹಿತ್ ಅಗ್ರ ಸ್ಥಾನದಲ್ಲಿದ್ದಾರೆ. ಶರ್ಮಾ 60.16 ಜಯದ ಶೇಕಡಾ ಹೊಂದಿದ್ದಾರೆ. ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ (189 ಪಂದ್ಯ, 110 ಗೆಲುವು) 58.51 ವಿನ್ನಿಂಗ್ಸ್ ಪರ್ಸೆಂಟೇಜ್ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications