Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಐಗೆ ಚಿಯರ್ ಮಾಡಿದ ರೋಹಿತ್ ಪುಟಾಣಿ ಪುತ್ರಿ ಸಮೈರಾ: ವಿಡಿಯೋ

IPL 2021: Rohit Sharmas Daughter Samaira Cheers For Mumbai Indians

ಚೆನ್ನೈ: ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ಗಾಗಿ ರೋಹಿತ್ ಶರ್ಮಾ ಸಿದ್ಧತೆ ನಡೆಸುತ್ತಿದ್ದಾರೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ನಾಯಕರಾಗಿರುವ ರೋಹಿತ್, ಈ ಬಾರಿಯೂ ಮತ್ತೊಂದು ಐಪಿಎಲ್ ಟ್ರೋಫಿ ಗೆಲ್ಲುವತ್ತ ಚಿತ್ತ ಹರಿಸಿದ್ದಾರೆ.

ಈ ಬಾರಿಯೂ ಐಪಿಎಲ್ ಟ್ರೋಫಿ ಮುಂಬೈ ಇಂಡಿಯನ್ಸ್ ಪಾಲಾದರೆ, ಐಪಿಎಲ್ ಇತಿಹಾಸದಲ್ಲಿ ಸತತ 3 ಐಪಿಎಲ್ ಟ್ರೋಫಿಗಳನ್ನು ಗೆದ್ದ ಚೊಚ್ಚಲ ಫ್ರಾಂಚೈಸಿಯಾಗಿ ಮುಂಬೈ ಗುರುತಿಸಿಕೊಳ್ಳಲಿದೆ. ಸತತ ಮೂರು ಐಪಿಎಲ್ ಟ್ರೋಫಿಗಳನ್ನು ಗೆದ್ದ ನಾಯಕರಾಗಿಯೂ ರೋಹಿತ್ ದಾಖಲೆ ನಿರ್ಮಿಸಲಿದ್ದಾರೆ. ಈಗಾಗಲೇ ಎಂಐ ಒಟ್ಟಿಗೆ 5 ಬಾರಿ ಟ್ರೋಫಿ ಜಯಿಸಿದೆ.

ಮುಂಬೈ ಇಂಡಿಯನ್ಸ್‌ಗೆ, ರೋಹಿತ್‌ಗೆ ವಿಶ್ವದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈ ಬಾರಿ ಮುಂಬೈ ಇಂಡಿಯನ್ಸ್‌ಗೆ ಚಿಯರ್ ಮಾಡಲು ಬಯೋ ಬಬಲ್‌ನಲ್ಲಿ ರೋಹಿತ್ ಕುಟುಂಬವೂ ಇದೆ. ಮುಖ್ಯವಾಗಿ ರೋಹಿತ್ ಅವರ ಪುಟಾಣಿ ಪುತ್ರಿ ಸಮೈರಾ ಎಂಐಗೆ ಚಿಯರ್ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್ ಬುಧವಾರ (ಮಾರ್ಚ್ 31) ಒಂದು ಟ್ವಿಟರ್ ವಿಡಿಯೋ ಹಂಚಿಕೊಂಡಿತ್ತು. ಇದರಲ್ಲಿ ಶರ್ಮಾರ ಪುತ್ರಿ ಸಮೈರಾ ಮುಂಬೈ ಇಂಡಿಯನ್ಸ್‌ ಹೆಲ್ಮೆಟ್ ಧರಿಸಿ ರೋಹಿತ್ ಶರ್ಮಾರ ಪುಲ್‌ಶಾಟ್‌ ಅನ್ನು ಮಿಮಿಕ್ ಮಾಡಿದ್ದಾರೆ. ಜೊತೆಗೆ ಮುಂಬೈ ಇಂಡಿಯನ್ಸ್‌ ಲೋಗೋ ಗುರುತಿಸಿ ಅದರ ಹೆಸರೆತ್ತಿ ಕೂಗಿದ್ದಾರೆ. ಈ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Story first published: Wednesday, March 31, 2021, 15:25 [IST]
Other articles published on Mar 31, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+