Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತನ್ನ ಜೆರ್ಸಿಗೆ ರೋಹಿತ್ ಶರ್ಮಾ ಸಹಿ ಹಾಕಿಸಿಕೊಂಡ ಆವೇಶ್ ಖಾನ್

IPL 2021: Rohit Sharma Signs Fanboy Avesh Khans Jersey

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಮುಂಬೈ ನಾಯಕ ರೋಹಿತ್ ಶರ್ಮಾ ಮತ್ತು ಡೆಲ್ಲಿ ವೇಗಿ ಆವೇಶ್ ಖಾನ್ ಅಪರೂಪದ ನಡೆಗಾಗಿ ಗಮನ ಸೆಳೆದಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ ಜಯ ದಾಖಲಿಸಿತ್ತು. ಪರಸ್ಪರ ಎದುರಾಳಿಗಳಾಗಿ ಗೆದ್ದ ಬಳಿಕವೂ ಆವೇಶ್‌ ಖಾನ್‌ಗೆ ರೋಹಿತ್ ಶರ್ಮಾ ಮೇಲಿನ ಅಭಿಮಾನ ಕಡಿಮೆಯಾದಂತೆ ಕಾಣಿಸಲಿಲ್ಲ. ರೋಹಿತ್ ಬಳಿಗೆ ಬಂದ ಆವೇಶ್ ತನ್ನ ಜೆರ್ಸಿ ಮೇಲೆ ಶರ್ಮಾ ಸಹಿ ಹಾಕಿಸಿಕೊಂಡರು.

ಆವೇಶ್ ಅವರು ರೋಹಿತ್ ಅವರಿಂದ ಜೆರ್ಸಿಗೆ ಸಹಿ ಪಡೆದುಕೊಳ್ಳುತ್ತಿರುವ ಚಿತ್ರವನ್ನು ಡೆಲ್ಲಿ ಕ್ಯಾಪಿಟಲ್ಸ್ ಟ್ವಿಟರ್‌ನಲ್ಲಿ ಹಾಕಿಕೊಂದಿದೆ. 'ಡೆಲ್ಲಿ-ಪಂಜಾಬ್ ಪಂದ್ಯದ ಬಳಿಕ ಆವೇಶ್ ಒಳಗಿನ ಫ್ಯಾನ್ ಬಾಯ್ ಹೊರ ಬಂದರು,' ಎಂದು ಡಿಸಿ ಟ್ವೀಟ್‌ನಲ್ಲಿ ಬರೆದುಕೊಂಡಿದೆ.

ಮಂಗಳವಾರದ ಪಂದ್ಯದಲ್ಲಿ ರೋಹಿತ್ ಶರ್ಮಾ 44 ರನ್ ಸೇರ್ಪಡೆಯೊಂದಿಗೆ ಮುಂಬೈ 137 ರನ್ ಗಳಿಸಿದ್ದರೆ, ಶಿಖರ್ ಧವನ್ 45, ಸ್ಟೀವ್ ಸ್ಮಿತ್ 33, ಲಲಿತ್ ಯಾದವ್ 22 ರನ್‌ನೊಂದಿಗೆ ಡೆಲ್ಲಿ 138 ರನ್‌ ಗಳಿಸಿತ್ತು. ಪಂದ್ಯದಲ್ಲಿ ಆವೇಶ್ ಖಾನ್ 2, ಅಮಿತ್ ಮಿಶ್ರಾ 4 ವಿಕೆಟ್‌ನೊಂದಿಗೆ ಗಮನ ಸೆಳೆದರು.

Story first published: Wednesday, April 21, 2021, 14:40 [IST]
Other articles published on Apr 21, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+