Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಕೆಟ್ಟ ದಾಖಲೆಯೊಂದರಲ್ಲಿ ಅಗ್ರಸ್ಥಾನಕ್ಕೇರಿದ ರೋಹಿತ್ ಶರ್ಮಾ

IPL 2021: Rohit Sharma tops unwanted record of run-out in IPL

ಮುಂಬೈ ಇಂಡಿಯನ್ ನಾಯಕ ರೋಹಿತ್ ಶರ್ಮಾ ಆರ್‌ಸಿಬಿ ವಿರುದ್ಧದ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ರನ್‌ಔಟ್‌ಗೆ ಬಲಿಯಾದರು. ಈ ಮೂಲಕ 14ನೇ ಆವೃತ್ತಿಯಲ್ಲಿ ಔಟಾದ ಮೊದಲ ಆಟಗಾರನಾಗಿದ್ದಾರೆ. 19 ರನ್‌ಗಳಿಸಿದ್ದಾಗ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಫಿಲ್ಡಿಂಗ್‌ಗೆ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡರು. ಈ ರನೌಟ್ ಮೂಲಕ ರೋಹಿತ್ ಶರ್ಮಾ ಕೆಟ್ಟ ದಾಖಲೆಯಿಂದರಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ರನ್‌ಔಟ್‌ನಲ್ಲಿ ಭಾಗಿಯಾದ ಆಟಗಾರ ಎನಿಸಿದ್ದಾರೆ. ಮುಂಬೈ ನಾಯಕ 36 ರನೌಟ್‌ನಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ 11 ಬಾರಿ ಸ್ವತಃ ರೋಹಿತ್ ಶರ್ಮಾ ಔಟಾಗಿದ್ದರೆ 25 ಬಾರಿ ಸಹ ಆಟಗಾರರು ವಿಕೆಟ್ ಕಳೆದುಕೊಂಡಿದ್ದಾರೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಆರ್‌ಸಿಬಿ ವಿರುದ್ಧದ ಪ್ರಥಮ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ರೋಹಿತ್ ಶರ್ಮಾ ಜೊತೆಗೆ ಕ್ರಿಸ್ ಲಿನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಕ್ರಿಸ್ ಲಿನ್ ಬಾರಿಸಿದ ಹೊಡೆತವೊಂದರಲ್ಲಿ ರೋಹಿತ್ ಶರ್ಮಾ ರನ್ ಕದಿಯಲು ಓಟಕ್ಕಿತ್ತರು. ಆದರೆ ಕ್ರಿಸ್ ಲಿನ್ ತಡೆದರು. ಅಷ್ಟರಲ್ಲಿ ಅರ್ಧ ಕ್ರೀಸ್ ತಲುಪಿದ್ದ ರೋಹಿತ್ ಶರ್ಮಾ ಮತ್ತೆ ನಾನ್‌ಸ್ಟ್ರೈಕ್‌ನತ್ತ ವಾಪಾಸಾದರು. ಆದರೆ ಅಷ್ಟರಲ್ಲಿ ಚೆಂಡು ಹಿಡಿದಿದ್ದ ನಾಯಕ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಲು ಕಾರಣರಾದರು.

ಆರ್‌ಸಿಬಿ ಪರವಾಗಿ ಈ ಪಂದ್ಯದಲ್ಲಿ ಮೂವರು ಆಟಗಾರರ ಚೊಚ್ಚಲ ಬಾರಿಗೆ ಕಣಕ್ಕಿಳಿದಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್, ಕೈಲ್ ಜ್ಯಾಮಿಸನ್ ಮತ್ತು ರಜತ್ ಪಾಟಿದಾರ್ ಆಡುವ ಆರ್‌ಸಿಬಿ ಪರವಾಗಿ ಕಣಕ್ಕಿಳಿದರು. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಕ್ರಿಸ್ ಲಿನ್ ಹಾಗೂ ಮ್ಯಾಕ್ರೋ ಜೆನ್ಸೆನ್ ಮುಂಬೈ ಇಂಡಿಯನ್ಸ್ ಕ್ಯಾಪ್ ತೊಟ್ಟರು.

ಮುಂಬೈ ಇಂಡಿಯನ್ಸ್ ಆಡುವ ಬಳಗ:
ರೋಹಿತ್ ಶರ್ಮಾ (ನಾಯಕ), ಕ್ರಿಸ್ ಲಿನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾ, ಮಾರ್ಕೊ ಜಾನ್ಸೆನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ರಜತ್ ಪಾಟಿದಾರ್, ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್ ವೆಲ್, ಮೊಹಮ್ಮದ್ ಅಜರುದ್ದೀನ್, ಡೇನಿಯಲ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಕೈಲ್ ಜಾಮಿಸನ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್

Story first published: Saturday, April 10, 2021, 10:34 [IST]
Other articles published on Apr 10, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+