ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗರ್ಭಗುಡಿಯಲ್ಲಿ ಆರ್‌ಸಿಬಿ ಬಾವುಟ ; ರಾಯಲ್ ಫ್ಯಾನ್ಸ್ ಕ್ರೇಜ್

IPL 2021 : Royal Challengers Bangalore fans have worshiped by putting RCB flag in sanctum

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇರುವಷ್ಟು ಅಭಿಮಾನಿ ಬಳಗ ಬಹುಶಃ ಬೇರೆ ಯಾವುದೇ ತಂಡಕ್ಕೂ ಇಲ್ಲ ಎನಿಸುತ್ತದೆ. ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲಿಯೂ ಸಹ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು. 13 ಐಪಿಎಲ್ ಆವೃತ್ತಿಗಳು ಮುಗಿದು 14ನೇ ಐಪಿಎಲ್ ಆವೃತ್ತಿ ಆರಂಭವಾಗಿದ್ದು ಇದುವರೆಗೂ ಸಹ ಆರ್‌ಸಿಬಿ ಒಂದೇ ಒಂದು ಐಪಿಎಲ್ ಟ್ರೋಫಿಯನ್ನೂ ಗೆದ್ದಿಲ್ಲ. ಆದರೂ ಸಹ ಅಭಿಮಾನಿಗಳ ಸಂಖ್ಯೆ ಕಿಂಚಿತ್ತೂ ಕಡಿಮೆಯಾಗಿಲ್ಲ.

ಕಪ್ ಗೆಲ್ಲದೇ ಇರುವ ಆರ್‌ಸಿಬಿ ತಂಡಕ್ಕೆ ಇರುವಷ್ಟು ದೊಡ್ಡ ಅಭಿಮಾನಿ ಬಳಗ ಕಪ್ ಗೆದ್ದಿರುವ ತಂಡಗಳಿಗೂ ಇಲ್ಲ ಎಂದರೆ ತಪ್ಪಾಗಲಾರದು. ಪ್ರತಿ ವರ್ಷ ಐಪಿಎಲ್ ಹತ್ತಿರ ಬಂದಾಗ ರಥೋತ್ಸವದಲ್ಲಿ ಹಣ್ಣು ಜವನದ ಮೇಲೆ ಈ ಸಲ ಕಪ್ ನಮ್ದೆ ಎಂದು ಬರಹಗಳನ್ನು ಬರೆದು ದೇವರಿಗೆ ಅರ್ಪಿಸುವ, ವಿವಿಧ ದೇವಾಲಯಗಳಲ್ಲಿ ಆರ್‌ಸಿಬಿ ಹೆಸರಿನಲ್ಲಿ ವಿಶೇಷ ಪೂಜೆ, ಅರ್ಚನೆ ಮತ್ತು ಅಭಿಷೇಕಗಳನ್ನು ಮಾಡಿಸುವ ಆರ್‌ಸಿಬಿ ಅಭಿಮಾನಿಗಳನ್ನು ನೀವು ಗಮನಿಸಿರಬಹುದು.

ಇದೀಗ ಅಂತಹದ್ದೇ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಯೊಬ್ಬರು ಆರ್‌ಸಿಬಿ ಧ್ವಜವನ್ನು ಗರ್ಭಗುಡಿಯಲ್ಲಿಟ್ಟು ಪೂಜೆ ಸಲ್ಲಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಫ್ರಾಂಚೈಸಿ ನಡೆಸುವ ಒಂದು ಕ್ರಿಕೆಟ್ ತಂಡಕ್ಕೆ ಇಷ್ಟು ದೊಡ್ಡ ಮಟ್ಟದ ಕ್ರೇಜ್ ಇದೆಯಾ ಎಂದು ಹಲವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ಏನೇ ಆಗಲಿ ಈ ಥರ ಅಪಾರ ಪ್ರೀತಿ ತೋರಿಸುವ ಅಭಿಮಾನಿ ಬಳಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಟ್ಟರೆ ಬೇರೆ ಯಾವುದೇ ತಂಡಕ್ಕೂ ಇರುವುದಿಲ್ಲ ಬಿಡಿ.

Story first published: Wednesday, April 14, 2021, 13:37 [IST]
Other articles published on Apr 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X