ಐಪಿಎಲ್ 2021: ತಿರುಗಿಬಿದ್ದ ರಾಜಸ್ಥಾನ್, ವಿರಾಟ್ ಪಡೆಗೆ 178 ರನ್‌ಗಳ ಸವಾಲು

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ್ ಉತ್ತಮ ಮೊತ್ತವನ್ನು ಪೇರಿಸಿದೆ. ಆರಂಭದಲ್ಲಿ ಉಂಟಾದ ದೊಡ್ಡ ಕುಸಿತದ ಬಳಿಕ ಅದ್ಭುತ ರೀತಿಯಲ್ಲಿ ತಿರುಗಿ ಬೀಳುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್ 177 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು
ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ಅದ್ಭುತ ಆರಂಭವನ್ನು ಪಡೆಯಿತು. ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಅಗ್ಗಕ್ಕೆ ಪಡಿಯಿತು. 45 ರನ್‌ಗಳಾಗುವಷ್ಟರಲ್ಲಿ ರಾಜಸ್ಥಾನ್ ರಾಯಲ್ಸ್‌ನ ಪ್ರಮುಖ ನಾಲ್ಕು ವಿಕೆಟ್‌ಗಳು ಉದುರಿತ್ತು. ಆದರೆ ನಂತರ ಬಂದ ರಿಯಾನ್ ಪರಾಗ್ ಹಾಗೂ ಶಿವಂ ದುಬೆ ತಂಡಕ್ಕೆ ಅಗತ್ಯ ಚೇತರಿಕೆಯನ್ನು ನೀಡುವಲ್ಲಿ ಯಶಸ್ವಿಯಾದರು.
ಆದರೆ ನಂತರ ಬಂದ ರಿಯಾನ್ ಪರಾಗ್ ಹಾಗೂ ಶಿವಂ ದುಬೆ ತಂಡಕ್ಕೆ ಅಗತ್ಯ ಚೇತರಿಕೆಯನ್ನು ನೀಡುವಲ್ಲಿ ಯಶಸ್ವಿಯಾದರು. ಶಿವಂ ದುಬೆ 32 ಎಸೆತಗಳಲ್ಲಿ 46 ರನ್‌ಗಳಿಸಿದರೆ ರಿಯಾನ್ 25 ರನ್‌ಗಳ ಕೊಡುಗೆ ನೀಡಿದರು. ನಂತರ ಬಂದ ರಾಹುಲ್ ತೆವಾಟಿಯಾ ರನ್‌ವೇಗವನ್ನು ಮತ್ತಷ್ಟು ಹೆಚ್ಚಿಸಿದರು. ಕೇವಲ 23 ಎಸೆತಗಳಲ್ಲಿ ತೆವಾಟಿಯಾ 40 ರನ್ ಬಾರಿಸಿ ಮಿಂಚಿದರು. ಇದರಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಸೇರಿತ್ತು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 177 ರನ್ ಗಳಿಸಿ ಸವಾಲಿನ ಮೊತ್ತ ಪೇರಿಸಿದೆ.
ಆರ್‌ಸಿಬಿ ಪರವಾಗಿ ಮೊಹಮ್ಮದ್ ಸಿರಾಜ್ ಅದ್ಭುತ ದಾಳಿ ಸಂಘಟಿಸಿ 3 ವಿಕೆಟ್ ಪಡೆದರು. ಇನ್ನೋರ್ವ ವೇಗಿ ಹರ್ಶಲ್ ಪಟೇಲ್ ಕೂಡ ಮೂರು ವಿಕೆಟ್ ಪಡೆದು ಮಿಂಚಿದರಾದರೂ ದುಬಾರಿಯಾದರು. ಜ್ಯಾಮಿಸನ್, ರಿಚರ್ಡ್ಸನ್ ಹಾಗೂ ಸುಂದರ್ ತಲಾ 1 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications