5 ವರ್ಷಗಳ ಬಳಿಕ ಚೊಚ್ಚಲ ಅರ್ಧ ಶತಕ ಚಚ್ಚಿದ ಗ್ಲೆನ್ ಮ್ಯಾಕ್ಸ್‌ವೆಲ್!

ಚೆನ್ನೈ: ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 5 ವರ್ಷಗಳ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮ್ಯಾಕ್ಸ್‌ವೆಲ್ ಮೊದಲ ಅರ್ಧ ಶತಕ ಬಾರಿಸಿದ್ದಾರೆ.
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 14) ನಡೆದ ಐಪಿಎಲ್ 6ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾದಾಡಿದ್ದವು. ಈ ವೇಳೆ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ 41 ಎಸೆತಗಳಲ್ಲಿ 59 ರನ್ ಸಿಡಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್
5 ಫೋರ್ಸ್, 3 ಸಿಕ್ಸರ್‌ನೊಂದಿಗೆ ಮ್ಯಾಕ್ಸ್‌ವೆಲ್ ಅರ್ಧಶತಕ ಪೂರೈಸಿದರು. ಗ್ಲೆನ್ ಬ್ಯಾಟಿಂದ ಈ 50+ ಸ್ಕೋರ್ ಬಂದಿದ್ದು 5 ವರ್ಷಗಳ ಬಳಿಕ ಮತ್ತು ಬರೋಬ್ಬರಿ 40 ಇನ್ನಿಂಗ್ಸ್‌ಗಳ ಬಳಿಕ. ಇದಕ್ಕೂ ಮುನ್ನ ಮ್ಯಾಕ್ಸ್‌ವೆಲ್ 2016ರಲ್ಲಿ ಕೊನೇಯ ಅರ್ಧಶತಕ ಬಾರಿಸಿದ್ದರು.
ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ಬ್ಯಾಟಿಂದ ಬಂದ 7ನೇ ಅರ್ಧ ಶತಕವಿದು. ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ನೀರಸ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರಿಂದಲೇ ಪಂಜಾಬ್ ಕಿಂಗ್ಸ್ ಅವರನ್ನು ಈ ಬಾರಿ ತಂಡದಿಂದ ರಿಲೀಸ್ ಮಾಡಿತ್ತು. 84 ಐಪಿಎಲ್ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ 1603 ರನ್ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications