Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021ರಲ್ಲಿ ಸೆಣಸಲಿರುವ ಆರ್‌ಸಿಬಿ ತಂಡದ ಸಂಪೂರ್ಣ ಮಾಹಿತಿ

IPL 2021: Royal Challengers Bangalore-Team profile and complete squad

ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುವತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಚಿತ್ತ ನೆಟ್ಟಿದೆ. ಹಿಂದಿನ ಸೀಸನ್‌ಗಳಲ್ಲಿ ಒಟ್ಟು ಮೂರು ಬಾರಿ ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ, ಕಳೆದ ಸೀಸನ್‌ನಲ್ಲಿ ಪ್ಲೇಆಫ್‌ಗೆ ಪ್ರವೇಶಿಸಿ ಟ್ರೋಫಿ ಗೆಲ್ಲುವ ಆಸೆ ಮೂಡಿಸಿತ್ತು. ಆದರೆ ಫೈನಲ್‌ಗೇರಲು ಆರ್‌ಸಿಬಿಯಿಂದ ಸಾಧ್ಯವಾಗಿರಲಿಲ್ಲ.

ಈ ಬಾರಿ ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುವ ಯೋಜನೆಯಲ್ಲಿರುವ ವಿರಾಟ್ ಕೊಹ್ಲಿ ಪಡೆ, ತಂಡದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದೆ. ಆರ್‌ಸಿಬಿ ಪ್ಲೇಯಿಂಗ್ XI ಇನ್ನೂ ಬಲಿಷ್ಠ ಅನ್ನಿಸಿಕೊಳ್ಳಬೇಕಾದರೆ ಇನ್ನೂ ಎಚ್ಚರಿಕೆಯಿಂದ ಆಡಬೇಕಿದೆ, ಮುನ್ನಡೆಯಬೇಕಾಗಿದೆ.

ಐಪಿಎಲ್‌ನ ಆಕರ್ಷಣೀಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರಿನ ಪ್ರಮುಖ ಮಾಹಿತಿಗಳು ಈ ಕೆಳಗಿವೆ.

ಮೊದಲ ಪಂದ್ಯದಲ್ಲೇ ಮುಂಬೈ ಎದುರಾಳಿ

ಮೊದಲ ಪಂದ್ಯದಲ್ಲೇ ಮುಂಬೈ ಎದುರಾಳಿ

ಕಪ್‌ ಗೆಲ್ಲದ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಸಾಲಿನಲ್ಲಿರುವ ಆರ್‌ಸಿಬಿ ಈ ಬಾರಿ ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಅನ್ನು ಎದುರುಗೊಳ್ಳಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಏಪ್ರಿಲ್ 9ರಂದು 7.30 PMಗೆ ಐಪಿಎಲ್ 2021ರ ಚೊಚ್ಚಲ ಪಂದ್ಯ ನಡೆಯಲಿದೆ.

ಆರ್‌ಸಿಬಿಯಲ್ಲಿ ಬಲಿಷ್ಠ ಆಟಗಾರರು

ಆರ್‌ಸಿಬಿಯಲ್ಲಿ ಬಲಿಷ್ಠ ಆಟಗಾರರು

ಈ ಬಾರಿ ಆರ್‌ಸಿಬಿಗೆ ಉತ್ತಮ ಆಲ್‌ರೌಂಡರ್‌ಗಳು ಸೇರ್ಪಡೆಯಾಗಿದ್ದಾರೆ. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಡೇನಿಯಮ್ ಸ್ಯಾಮ್ಸ್, ನ್ಯೂಜಿಲೆಂಡ್‌ನ ಕೈಲ್ ಜೇಮಿಸನ್ ಈ ಬಾರಿ ಆರ್‌ಸಿಬಿಗೆ ಬಲ ತುಂಬಲಿದ್ದಾರೆ. ಇನ್ನು ನ್ಯೂಜಿಲೆಂಡ್‌ ಫಿನ್ ಅಲೆನ್, ಭಾರತದ ಯುವ ಬ್ಯಾಟ್ಸ್‌ಮನ್‌ ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್ ಬಗ್ಗೆಯೂ ಹೆಚ್ಚಿನ ನಿರೀಕ್ಷೆಗಳಿವೆ. ಇನ್ನು ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ವಾಷಿಂಗ್ಟನ್ ಸುಂದರ್, ದೇವದತ್ ಪಡಿಕ್ಕಲ್, ಯುಜುವೇಂದ್ರ ಚಾಹಲ್ ತಂಡದ ಜೊತೆಗಿದ್ದಾರೆ.

ಆರ್‌ಸಿಬಿ ಸಂಪೂರ್ಣ ತಂಡ

ಆರ್‌ಸಿಬಿ ಸಂಪೂರ್ಣ ತಂಡ

ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ವಾಷಿಂಗ್ಟನ್ ಸುಂದರ್, ಪವನ್ ದೇಶಪಾಂಡೆ, ಫಿನ್ ಅಲೆನ್, ಶಹಬಾಜ್ ಅಹಮದ್, ನವದೀಪ್ ಸೈನಿ, ಆ್ಯಡಂ ಝಂಪಾ, ಕೈಲ್ ಜೇಮಿಸನ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್, ಡೇನಿಯಲ್ ಕ್ರಿಶ್ಚಿಯನ್, ಕೆ.ಎಸ್.ಭರತ್, ಸುಯಶ್ ಪ್ರಭುದೇಸಾಯಿ, ಡೇನಿಯಲ್ ಸ್ಯಾಮ್ಸ್, ಹರ್ಷಲ್ ಪಟೇಲ್.

Story first published: Wednesday, April 7, 2021, 9:49 [IST]
Other articles published on Apr 7, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+