For Quick Alerts
ALLOW NOTIFICATIONS  
For Daily Alerts
 

ಡಿ ವಿಲಿಯರ್ಸ್ ಬ್ಯಾಟಿಂಗ್ ಅಬ್ಬರ, ಡೆಲ್ಲಿಗೆ ಸವಾಲಿನ ಗುರಿಯಿತ್ತ ಬೆಂಗಳೂರು

IPL 2021: Royal Challengers Bangalore vs Delhi Capitals, 22nd Match, After 1st innings Updates

ಅಹ್ಮದಾಬಾದ್: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಬ್ಯಾಟಿಂಗ್‌ ಅಬ್ಬರದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 171 ರನ್ ಗಳಿಸಿ 172 ರನ್ ಗುರಿ ನೀಡಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಾಯಕ ವಿರಾಟ್ ಕೊಹ್ಲಿ 12, ದೇವದತ್ ಪಡಿಕ್ಕಲ್ 17, ರಜತ್ ಪಟಿದಾರ್ 31, ಗ್ಲೆನ್ ಮ್ಯಾಕ್ಸ್‌ವೆಲ್ 25, ಎಬಿ ಡಿ ವಿಲಿಯರ್ಸ್ 75 (42 ಎಸೆತ), ವಾಷಿಂಗ್ಟನ್ ಸುಂದರ್ 6 ರನ್‌ನೊಂದಿಗೆ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು 171 ರನ್ ಗಳಿಸಿತು.

175ನೇ ಐಪಿಎಲ್ ಪಂದ್ಯ ಆಡುತ್ತಿರುವ ಎಬಿ ಡಿ ವಿಲಿಯರ್ಸ್ ಇದೇ ಪಂದ್ಯದಲ್ಲಿ 5000 ರನ್ ಮೈಲಿಗಲ್ಲು ಕೂಡ ಸ್ಥಾಪಿಸಿದ್ದಾರೆ. ಒಟ್ಟು ಎಬಿಡಿ ಐಪಿಎಲ್‌ನಲ್ಲಿ 5053 ರನ್ ಬಾರಿಸಿದಂತಾಗಿದೆ. ಡೆಲ್ಲಿ ವಿರುದ್ಧ ಎಬಿಡಿ 3 ಫೋರ್ಸ್, 5 ಸಿಕ್ಸರ್‌ನೊಂದಿಗೆ 75 ರನ್ ಸೇರಿಸಿದ ತಂಡಕ್ಕೆ ರನ್ ಬಲ ತುಂಬಿದರು.

ಬೆಂಗಳೂರು ಇನ್ನಿಂಗ್ಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಇಶಾಂತ್ ಶರ್ಮಾ, ಕಾಗಿಸೊ ರಬಾಡ, ಆವೇಶ್ ಖಾನ್, ಅಮಿತ್ ಮಿಶ್ರಾ, ಅಕ್ಷರ್ ಪಟೇಲ್ 1 ವಿಕೆಟ್‌ ಪಡೆದರು.

Story first published: Tuesday, April 27, 2021, 21:30 [IST]
Other articles published on Apr 27, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+