
ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಶತಕ ಚಚ್ಚಿ ದಾಖಲೆ ಬರೆದಿದ್ದಾರೆ. ಇದು ಸಂಜು ಐಪಿಎಲ್‌ನಲ್ಲಿ ಬಾರಿಸಿದ 3ನೇ ಶತಕ ಮತ್ತು ನಾಯಕನಾಗಿ ಬಾರಿಸಿದ ಚೊಚ್ಚಲ ಶತಕ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಸಂಜು ಸ್ಯಾಮ್ಸನ್ 63 ಎಸೆತಗಳಲ್ಲಿ 119 ರನ್ ಚಚ್ಚಿದರು. 108ನೇ ಐಪಿಎಲ್ ಪಂದ್ಯದಲ್ಲಿ ಸ್ಯಾಮ್ಸನ್ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇದು ಈ ಐಪಿಎಲ್ ಸೀಸನ್‌ನ ಮೊದಲ ಶತಕ ದಾಖಲೆಯೂ ಹೌದು.
ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್
ನಾಯಕನಾಗಿ ಆಡಿದ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಹಿರಿಮೆ ಕೂಡ ಸ್ಯಾಮ್ಸನ್ ಅವರದ್ದಾಗಿದೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅತೀ ಹೆಚ್ಚು ಶತಕಗಳ ದಾಖಲೆ ಹೊಂದಿದ್ದಾರೆ. 193 ಐಪಿಎಲ್ ಪಂದ್ಯಗಳಲ್ಲಿ 5 ಶತಕಗಳ ದಾಖಲೆ ಹೊಂದಿದ್ದಾರೆ.
ಸೋಮವಾರ ರಾಜಸ್ಥಾನ್ vs ಪಂಜಾಬ್ ಮುಖಾಮುಖಿಯಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಪಂಜಾಬ್, ಕೆಎಲ್ ರಾಹುಲ್ 91 (50), ಕ್ರಿಸ್ ಗೇಲ್ 40 (28), ದೀಪಕ್ ಹೂಡಾ 64 (28), ಮಯಾಂಕ್ ಅಗರ್ವಾಲ್ 14 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 221 ರನ್ ಬಾರಿಸಿತ್ತು. ಪಂಜಾಬ್ ನೀಡಿದ್ದ 222 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗೆ 7 ವಿಕೆಟ್ ಕಳೆದು 217 ರನ್ ಬಾರಿಸಿ ಸೋಲೊಪ್ಪಿಕೊಂಡಿತು.