For Quick Alerts
ALLOW NOTIFICATIONS  
For Daily Alerts
 

ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಶಾರೂಖ್ ಖಾನ್ ಬಗ್ಗೆ ಸ್ಟೈರಿಸ್ ಮೆಚ್ಚುಗೆಯ ಮಾತು

IPL 2021, scott styris praises young cricketer shahrukh khan

ಈ ಬಾರಿಯ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿ ಐಪಿಎಲ್‌ಗೆ ಆಯ್ಕೆಯಾದ ಆಟಗಾರಲ್ಲಿ ಶಾರೂಖ್ ಖಾನ್ ಪ್ರಮುಖ ಕ್ರಿಕೆಟಿಗ. ಅದ್ಭುತವಾದ ಪ್ರದರ್ಶನದಿಂದಾಗಿ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದ್ದಾರೆ. ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತಾ ಪ್ರದರ್ಶನ ಶಾರೂಖ್ ಖಾನ್ ಕಡೆಯಿಂದ ಬಾರದಿದ್ದರೂ ಭರವಸೆ ಮೂಡಿಸುವಂತಾ ಆಟವನ್ನು ಯುವ ಆಟಗಾರ ಪ್ರದರ್ಶಿಸಿದ್ದಾರೆ.

ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಲಿ ಕಾಮೆಂಟೇಟರ್ ಸ್ಕಾಟ್ ಸ್ಟೈರಿಸ್ ಶಾರೂಖ್ ಖಾನ್ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಯುವ ಆಟಗಾರನ ಮೇಲೆ ಹೆಚ್ಚಿನ ಒತ್ತಡವನ್ನು ಹಾಕದೆ ಆತನ ಆಟವನ್ನು ಅನುಭವಿಸಲು ಬಿಡಬೇಕು ಎಂದು ಸ್ಟೈರಿಸ್ ಅಭಿಪ್ರಾಯಪಟ್ಟಿದ್ದಾರೆ.

"ನನ್ನ ಪ್ರಕಾರ ಆತನ ಮೇಲೆ ಸಾಕಷ್ಟು ಒತ್ತಡಗಳು ಬೀಳುತ್ತಿದೆ. ನಾನು ಆತನನ್ನು ಬೆಂಬಲಿಸಲು ಬಯಸುತ್ತೇನೆ. ಆತನನ್ನು ಕೇವಲ ಆಟವಾಡಲು ಬಿಡಬೇಕು ಹಾಗೂ ಬೆಳವಣಿಗೆಗೆ ಸಹಕರಿಸಬೇಕು" ಎಂದು ಸ್ಕಾಟ್ ಸ್ಟೈರಿರ್ ಶಾರೂಖ್ ಖಾನ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

"ಆತ ಮುಂದಿನ ದಿನಗಳಲ್ಲಿ ಅತ್ಯುತ್ತಮ ರೀತಿಯಲ್ಲಿ ವೇಗವನ್ನು ಪಡೆದುಕೊಳ್ಳಲಿದ್ದಾನೆ. ಮುಂದಿನ ಎರಡು ಮೂರು ಅಥವಾ ನಾಲ್ಕನೇ ಆವೃತ್ತಿಯಲ್ಲಿ ಆತ ಅತ್ಯಂತ ಅಮೂಲ್ಯವಾದ ಫಿನಿಷರ್ ಎನಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾನೆ ಎಂದು ಸ್ಟೈರಿಸ್ ಶಾರೂಖ್ ಖಾನ್ ಬಗ್ಗೆ ಭರವಸೆಯ ಮಾತುಗಳನ್ನು ಆಡಿದ್ದಾರೆ.

Story first published: Friday, April 30, 2021, 15:47 [IST]
Other articles published on Apr 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+