ಐಪಿಎಲ್ 2021 ದ್ವಿತೀಯ ಹಂತ: ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಆಡಲ್ಲ

ನವದೆಹಲಿ: ಇಂಗ್ಲೆಂಡ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಲ್ಲ. ತನ್ನ ದ್ವಿತೀಯ ಮಗುವಿನ ನಿರೀಕ್ಷೆಯಲ್ಲಿರುವ ಬಟ್ಲರ್, ಐಪಿಎಲ್‌ನಿಂದ ದೂರವಿರಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಐಪಿಎಲ್ 2021ರ ದ್ವಿತೀಯ ಹಂತದ ಪಂದ್ಯಗಳು ಶುರುವಾಗಲಿವೆ.
ಭಾರತದಲ್ಲಿ ಏಪ್ರಿಲ್ 9ರಿಂದ ನಡೆದಿದ್ದ ಐಪಿಎಲ್ 2021ರ ಮೊದಲ ಹಂತದ ಪಂದ್ಯಗಳು ಕೋವಿಡ್ ಭೀತಿಯಿಂದಾಗಿ ಅರ್ಧಕ್ಕೆ ನಿಲ್ಲಿಸಲ್ಪಟ್ಟವು. ಐಪಿಎಲ್ ಫ್ರಾಂಚೈಸಿಗಳಲ್ಲೂ ಕೋವಿಡ್ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸುವ ನಿರ್ಧಾರಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಬಂದಿತ್ತು.
"ಐಪಿಎಲ್ 2021ರ ಇನ್ನುಳಿದ ಪಂದ್ಯಗಳಿಗೆ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಲಭ್ಯರಿರುವುದಿಲ್ಲ. ಬಟ್ಲರ್ ಮತ್ತು ಅವರ ಪತ್ನಿ ಲೂಯಿಸ್ ಬಟ್ಲರ್ ಶೀಘ್ರ ಅವರ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ನಾವವರಿಗೆ ಶುಭ ಕೋರುತ್ತಿದ್ದೇವೆ. ಜೊತೆಗೆ ನಮ್ಮ ರಾಜಸ್ಥಾನ್ ರಾಯಲ್ಸ್ ಕುಟುಂಬದ ಹೊಸ ಸದಸ್ಯರನ್ನು ನೋಡಲು ಬಹಳ ಕಾತರರಾಗಿದ್ದೇವೆ," ಎಂದು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.
ಐಪಿಎಲ್ ಆರಂಭಿಕ ಆವೃತ್ತಿಯ ಚಾಂಪಿಯನ್ಸ್ ಆಗಿರುವ ರಾಜಸ್ಥಾನ್ ತಂಡದಲ್ಲಿ ದ್ವಿತೀಯ ಹಂತದಲ್ಲಿ ಇಂಗ್ಲೆಂಡ್‌ನ ಇಬ್ಬರು ಪ್ರಮುಖ ಆಟಗಾರರು ಮಿಸ್ ಆದಂತಾಗುತ್ತದೆ. ಒಂದು ಜೋಸ್ ಬಟ್ಲರ್ ಆದರೆ ಇನ್ನೊಂದು ವೇಗಿ ಜೋಫ್ರಾ ಆರ್ಚರ್. ಆರ್ಚರ್ ಗಾಯಗೊಂಡಿರುವುದರಿಂದ ಅವರೂ ಆಡುತ್ತಿಲ್ಲ. ಬಲ ಮೊಣಕೈಗೆ ಆರ್ಚರ್ ಗಾಯ ಮಾಡಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications