For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಶಾರುಖ್‌ ಖಾನ್‌ಗೆ ಕ್ರಿಸ್ ಗೇಲ್ ಭೇಟಿಯಾಗುವ ತವಕ

IPL 2021: Shahrukh Khan excited to meet Chris Gayle

ನವದೆಹಲಿ: ತಮಿಳುನಾಡಿನ ಆಲ್ ರೌಂಡರ್ ಶಾರುಖ್ ಖಾನ್‌ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆಟಗಾರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಗುರುವಾರ (ಫೆಬ್ರವರಿ 18) ನಡೆದ ಆಟಗಾರರ ಹರಾಜಿನಲ್ಲಿ ಶಾರುಖ್‌ ಪಂಜಾಬ್‌ ತಂಡ ಸೇರಿಕೊಂಡಿದ್ದರು.

ತಮಿಳುನಾಡು ರಾಜ್ಯ ತಂಡದ ಪರ ಆಡುವ ಶಾರುಖ್ ಖಾನ್ ಅವರನ್ನು ಪಂಜಾಬ್ ಕಿಂಗ್ಸ್ 5.25 ಕೋಟಿ ರೂ.ಗೆ ಖರೀದಿಸಿತ್ತು. ಪಂಜಾಬ್‌ನಲ್ಲಿ ಕೆಎಲ್ ರಾಹುಲ್, ಕ್ರಿಸ್ ಗೇಲ್, ಮೊಹಮ್ಮದ್ ಶಮಿ, ನಿಕೋಲಸ್ ಪೂರನ್ ಅವರಂಥ ಪ್ರತಿಭಾನ್ವಿತ ಆಟಗಾರರಿದ್ದಾರೆ. ಇವರಲ್ಲಿ ಶಾರುಖ್‌ಗೆ ಯುನಿವರ್ಸಲ್ ಬಾಸ್ ಗೇಲ್ ಭೇಟಿಯಾಗುವ ಆಸೆಯಂತೆ.

'ನನಗೆ ಕೆಎಲ್ ರಾಹುಲ್ ಪರಿಚಯವಿದ್ದಾರೆ. ಒಂದಿಷ್ಟು ಸಾರಿ ಅವರನ್ನು ನಾನು ಭೇಟಿಯಾಗಿದ್ದೇನೆ. ಆದರೆ ಕ್ರಿಸ್ ಗೇಲ್ ಅವರನ್ನು ಭೇಟಿಯಾಗಲು ತುಂಬಾ ಉತ್ಸುಕನಾಗಿದ್ದೇನೆ. ಆತ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌. ಅನುಭವಿ ಆಟಗಾರ ಗೇಲ್ ಮತ್ತು ರಾಹುಲ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಇರುವ ಅವಕಾಶ ದೊರೆತಿದ್ದಕ್ಕೆ ನನಗೆ ಖುಷಿಯಾಗಿದೆ,' ಎಂದು ಖಾರುಖ್ ಹೇಳಿದ್ದಾರೆ.

25ರ ಹರೆಯದ ಬಲಗೈ ಬ್ಯಾಟ್ಸ್‌ಮನ್‌ ಶಾರುಖ್ ಖಾನ್, ಪ್ರಥಮದರ್ಜೆ ಕ್ರಿಕೆಟ್‌ನ 9 ಇನ್ನಿಂಗ್ಸ್‌ಗಳಲ್ಲಿ 231 ರನ್ ಬಾರಿಸಿದ್ದಾರೆ. ಲಿಸ್ಟ್ ಎ 20 ಪಂದ್ಯಗಳಲ್ಲಿ 286 ರನ್ ಬಾರಿಸಿದ್ದಾರೆ. 31 ಟಿ20 ಪಂದ್ಯಗಳಲ್ಲಿ 293 ರನ್ ದಾಖಲೆ ಹೊಂದಿದ್ದಾರೆ. ಪ್ರಥಮದರ್ಜೆ ಮತ್ತು ಲಿಸ್ಟ್ ಪಂದ್ಯಗಳಲ್ಲಿ ತಲಾ 2 ಅರ್ಧ ಶತಕ ಬಾರಿಸಿದ್ದಾರೆ.

Story first published: Saturday, February 20, 2021, 9:59 [IST]
Other articles published on Feb 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+