ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಮ್ಸ್ ಮುಲಾನಿ, ಅನಿರುದ್ಧ್ ಜೋಶಿ ಸೇರ್ಪಡೆ

ನವದೆಹಲಿ: ಭಾರತದ ಕ್ರಿಕೆಟರ್ ಶಮ್ಸ್ ಮುಲಾನಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡಿದ್ದಾರೆ. ಕೋವಿಡ್-19 ನಿಯಮದ ಪ್ರಕಾರ ಮುಲಾನಿ ಅವರನ್ನು ಡಿಸಿಗೆ ಕರೆತರಲಾಗಿದೆ. ಡೆಲ್ಲಿ ತಂಡದಿಂದ ಅಕ್ಷರ್ ಪಟೇಲ್ ಬದಲಿಗೆ ಮುಲಾನಿಯನ್ನು ಮತ್ತು ಶ್ರೇಯಸ್ ಐಯ್ಯರ್ ಬದಲಿಗೆ ಅನಿರುದ್ಧ್ ಜೋಶಿ ಅವರನ್ನು ಕರೆತರಲಾಗಿದೆ. ಕೋವಿಡ್-19 ಬ್ಯಾಕ್‌ಅಪ್ ಪ್ಲೇಯರ್ ಆಗಿ ಆಯ್ಕೆಯಾದ ಮೊದಲ ಆಟಗಾರನಾಗಿ ಮುಲಾನಿ ಗುರುತಿಸಿಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಅಕ್ಷರ್ ಪಟೇಲ್ ಕೊರೊನಾ ಸೋಂಕಿಗೆ ತುತ್ತಾಗಿ ಸದ್ಯ ತಂಡದಿಂದ ಹೊರಗಿದ್ದಾರೆ. ಹೀಗಾಗಿ ಎಡಗೈ ಬ್ಯಾಟ್ಸ್‌ಮನ್ ಮತ್ತು ಎಡಗೈ ಬೌಲರ್ ಮುಲಾನಿ ಜೊತೆಗೆ ಡೆಲ್ಲಿ ಒಪ್ಪಂದ ಮಾಡಿಕೊಂಡಿದೆ. ಈ ಸೀಸನ್ ಇನ್ನುಳಿದ ಪಂದ್ಯಗಳಲ್ಲಿ ಸ್ವಲ್ಪ ಕಾಲ ಮುಲಾನಿ ಡಿಸಿ ಪರ ಆಡಲಿದ್ದಾರೆ.
ಭುಜಕ್ಕೆ ತೀವ್ರ ಗಾಯ ಮಾಡಿಕೊಂಡಿದ್ದ ನಾಯಕ ಶ್ರೇಯಸ್ ಐಯ್ಯರ್ ಕೂಡ ತಂಡದಿಂದ ಹೊರ ಬಿದ್ದಿದ್ದರು. ಅವರ ಬದಲಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಸ್ಪಿನ್ನರ್ ಆಗಿರುವ ಅನಿರುದ್ಧ್ ಜೋಶಿ ಡಿಸಿ ತಂಡ ಸೇರಿಕೊಂಡಿದ್ದಾರೆ. ಜೋಶಿ ಈ ಮೊದಲು ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು.
'ಬಯೋ ಬಬಲ್‌ಗೆ ಪ್ರವೇಶಿಸಲು ತಂಡದ ನಿಜವಾದ ಆಟಗಾರನಿಗೆ ಅನುಮತಿ ದೊರೆಯುವವರೆಗೆ ಅಲ್ಪಾವಧಿಗಾಗಿ ಫ್ರಾಂಚೈಸಿಗಳಿಗೆ ಆಟಗಾರರನ್ನು ಬದಲಿಸಲು ಅನುಮತಿಸಲಾಗಿದೆ. ಹೀಗಾಗಿ ಅಕ್ಷರ್ ಚೇತರಿಸಿಕೊಳ್ಳುವವರೆಗೆ ಮುಲಾನಿ ತಂಡದಲ್ಲಿರಲಿದ್ದಾರೆ,' ಎಂದು ಡೆಲ್ಲಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications