ಭಾರತೀಯ ಯುವ ಆಟಗಾರನ ಮನಸಾರೆ ಶ್ಲಾಘಿಸಿದ ಶಾನ್ ಪೊಲಕ್

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ್ದಾರೆ. ಗುರುವಾರ ನಡೆದ ಐಪಿಎಲ್ 16ನೇ ಪಂದ್ಯದಲ್ಲಿ ಪಡಿಕ್ಕಲ್ ರಾಜಸ್ಥಾನ್ ರಾಯಲ್ಸ್ ವಿರುದ್ಧ 52 ಎಸೆತಗಳಿಗೆ 101 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ 10 ವಿಕೆಟ್‌ಗಳಿಂದ ಗೆದ್ದಿತ್ತು.
ಆರ್‌ಸಿಬಿ ಪರ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಬಲ ತುಂಬುತ್ತಿರುವ ದೇವದತ್ ಪಡಿಕ್ಕಲ್ ಅವರನ್ನು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಶಾನ್ ಪೊಲಕ್ ಶ್ಲಾಘಿಸಿದ್ದಾರೆ. ಕಳೆದ ಸಾರಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿದ್ದ ಟೂರ್ನಿಯ ವೇಳೆ ತಾನು ಪಡಿಕ್ಕಲ್ ಆಟ ಇಷ್ಟಪಟ್ಟಿದ್ದೆ ಎಂದು ಪೊಲಕ್ ಹೇಳಿದ್ದಾರೆ.
'ಯುಎಇಯಲ್ಲಿ ನಾನು ಆತನನ್ನು ಮೊದಲ ಬಾರಿಗೆ ನೋಡಿದ್ದಾಗಲೇ ಆತನ ಬ್ಯಾಟಿಂಗ್ ಇಷ್ಟಪಟ್ಟಿದ್ದೆ. ಆತ ಕ್ಲಾಸ್ ಆಗಿದ್ದಾನೆ, ಎತ್ತರವಾಗಿದ್ದಾನೆ, ಎಲ್ಲಾ ಕಡೆಗೆ ದೊಡೆತಗಳನ್ನು ನೀಡುತ್ತಾನೆ, ಸೊಗಸಾಗಿ ಬ್ಯಾಟಿಂಗ್ ಮಾಡ್ತಾನೆ. ಯುಎಇಯಲ್ಲಿ ಪಡಿಕ್ಕಲ್ ಸ್ವಲ್ಪ ಬಾಲ್ ತಿನ್ನುತ್ತಿದ್ದರು. ಅದನ್ನೀಗ ಸರಿಪಡಿಸಿಕೊಂಡಿದ್ದಾರೆ ಎಂದು ನನಗನ್ನಿಸುತ್ತದೆ,' ಎಂದು ಪೊಲಕ್ ಅಭಿಪ್ರಾಯಿಸಿದ್ದಾರೆ.
ಗುರುವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ 20 ಓವರ್‌ಗೆ 9 ವಿಕೆಟ್ ಕಳೆದು 177 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್‌ಸಿಬಿಯಿಂದ ಭರ್ಜರಿ ಬ್ಯಾಟಿಂಗ್ ಬಂತು. ನಾಯಕ ವಿರಾಟ್ ಕೊಹ್ಲಿ 72, ಪಡಿಕ್ಕಲ್ 101 ರನ್ ಸೇರಿಸಿದರು. ಆರ್‌ಸಿಬಿ ವಿಕೆಟ್ ನಷ್ಟವಿಲ್ಲದೆ 16.3 ಓವರ್‌ಗೆ 181 ರನ್ ಗಳಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications