ಐಪಿಎಲ್ 2021: ಹಳೆಯ ತಂಡದ ವಿರುದ್ಧ ತಿರುಗಿ ಬಿದ್ದ ಶಿವಂ ದುಬೆ

ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಆಲ್‌ರೌಂಡರ್ ಶಿವಂ ದುಬೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ತನ್ನ ಮಾಜಿ ತಂಡದ ವಿರುದ್ಧ ಶಿವಂ ದುಬೆ ಬತ್ತಳಿಕೆಯಲ್ಲಿದ್ದ ಎಲ್ಲಾ ಬಾಣಗಳನ್ನು ಪ್ರಯೋಗಿಸುವ ಮೂಲಕ ವಿರಾಟ್ ಪಡೆಗೆ ಸವಾಲಾದರು.
ಈ ಹಿಂದಿನ ಆವೃತ್ತಿಯಲ್ಲಿ ಆರ್‌ಸಿಬಿ ಪರವಾಗಿಯೇ ಕಣಕ್ಕಿಳಿದಿದ್ದ ದುಬೆ ಈ ಆವೃತ್ತಿಯಲ್ಲಿ ತಂಡದಿಂದ ಬಿಡುಗಡೆಯಾಗಿ ರಾಜಸ್ಥಾನ್ ಪಾಲಾಗಿದ್ದರು. ಈ ಹಿಂದಿನ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ದುಬೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಐಪಿಎಲ್‌ನಲ್ಲಿ ತಮ್ಮ ಅತ್ಯುತ್ತಮ ಇನ್ನಿಂಗ್ಸ್‌ಅನ್ನು ಆಡಿದರು.
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ದುಬೆ ನಿರ್ಣಾಯಕ 46 ರನ್‌ಗಳನ್ನು ಬಾರಿಸಿದರು. ರಾಜಸ್ಥಾನ್ 18 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಕಣಕ್ಕಿಳಿದ ಶಿವಂ ದುಬೆ 32 ಎಸೆತಗಳನ್ನು ಎದುರಿಸಿ ಐದು ಬೌಂಡರಿ ಹಾಗು ಎರಡು ಭರ್ಜರಿ ಸಿಕ್ಸರ್ ಬಾರಿಸಿದರು.
27ರ ಹರೆಯದ ಈ ಆಲ್‌ರೌಂಡರ್ ಈ ಇನ್ನಿಂಗ್ಸ್ ಮೂಲಕ ಫಾರ್ಮ್ ಕಂಡುಕೊಂಡಿದ್ದಾರೆ. ಈ ಹಿಂದಿನ ಮೂರು ಪಂದ್ಯಗಳಲ್ಲಿ ದುಬೆ 14, 9, 12 ರನ್‌ಗಳನ್ನಷ್ಟೇ ಗಳಿಸಿದ್ದರು. ಆದರೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ತನ್ನ ಹಿಂದಿನ ಆವೃತ್ತಿಯಲ್ಲಿ ನೆಟ್ಸ್‌ನಲ್ಲಿ ಆಡಿದ ಅನುಭವವನ್ನು ಸೂಕ್ತವಾಗಿ ಬಳಸಿಕೊಂಡು ಉತ್ತಮ ಕೊಡುಗೆ ನೀಡುವಲ್ಲಿ ಯಶಸ್ವಿಯಾದರು.
ಶಿವಂ ದುಬೆ ಅವರ ಈ ಪ್ರದರ್ಶನದಿಂದಾಗಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ರಾಜಸ್ಥಾನ್ ರಾಯಲ್ಸ್ ಉತ್ತಮ ಮೊತ್ತ ಗಳಿಸುವಲ್ಲಿ ಶಕ್ತವಾಯಿತು. ರಿಯಾನ್ ಪರಾಗ್ ಹಾಗೂ ರಾಹುಲ್ ತೆವಾಟಿಯಾ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಸವಾಲಿನ ಮೊತ್ತ ಪೇರಿಸಲು ಕಾರಣರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications