ಬೌಂಡರಿ ಮೇಲೆ ಬೌಂಡರಿ ಸಿಡಿಸಿದ ಪೃಥ್ವಿ ಶಾ ಮೇಲೆ ಸೇಡು ತೀರಿಸಿದ ಮಾವಿ!: ವಿಡಿಯೋ

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪೃಥ್ವಿ ಶಾ ಸ್ಮರಣೀಯ ಪ್ರದರ್ಶನ ನೀಡಿದರು. ಆರಂಭಿಕ ಓವರ್‌ನಲ್ಲಿಯೇ ಎದುರಾಳಿಗೆ ಸಿಂಹಸ್ವಪ್ನವಾಗಲು ಆರಂಭಿಸಿದ ಶಾ ರನ್ ಮಳೆಯನ್ನೇ ಸುರಿಸಿದರು. ಯುವ ವೇಗಿ ಶಿವಂ ಮಾವಿ ಎಸೆದ ಆರಂಭಿಕ ಓವರ್‌ನ ಎಲ್ಲಾ ಎಸೆತಗಳನ್ನು ಕೂಡ ಬೌಂಡರಿಗೆ ಅಟ್ಟಿ ಶಾ ದಾಖಲೆಯನ್ನು ಬರೆದರು.

ಪೃಥ್ವಿ ಶಾ ನಿಡಿದ ಪ್ರದರ್ಶನ ಕೆಕೆಆರ್ ವಿರುದ್ಧ ಡೆಲ್ಲಿ ಸುಲಭವಾಗಿ ಗೆಲ್ಲಲು ಕಾರಣವಾಯಿತು. ಆದರೆ ಈ ಪಂದ್ಯದ ಬಳಿಕ ಕೆಕೆಆರ್ ತಂಡದ ಶಿವಂ ಮಾವಿ ಪೃಥ್ವಿ ಶಾ ವಿರುದ್ಧ ತನ್ನ ಸೇಡಲು ತೀರಿಸಿಕೊಂಡಿದ್ದಾರೆ. ಗೆಳತನದ ಸಲುಗೆಯಿಂದ ಮಾವಿ ಕೋಪ ತೋರಿಸಿಕೊಂಡಿದ್ದು ನೇರಪ್ರಸಾರದ ಸಂದರ್ಭದಲ್ಲಿಯೂ ಪ್ರಸಾರವಾಯಿತು.

ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್, ಕೋಲ್ಕತ್ತಾ ವಿರುದ್ಧ ಡೆಲ್ಲಿಗೆ ಗೆಲುವುಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್, ಕೋಲ್ಕತ್ತಾ ವಿರುದ್ಧ ಡೆಲ್ಲಿಗೆ ಗೆಲುವು

ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ ಜೊತೆಗೆ ಪೃಥ್ವಿ ಶಾ ಬರುತ್ತಿದ್ದರು. ಆಗ ಎದುರಾಳಿ ತಂಡದ ಶಿವಂ ಮಾವಿ ಮುಖಾಮುಖಿ ಬಂದು ಮೊದಲಿಗೆ ಶಿಖರ್ ಧವನ್‌ಗೆ ಅಭಿನಂದಿಸಿದರು. ಆದರೆ ನಂತರ ಪೃಥ್ವಿ ಶಾಗೆ ಅಭಿನಂದಿಸುವ ನೆಪದಲ್ಲಿ ಆಪ್ತವಾಗಿ ಶಾ ಕತ್ತನ್ನು ಹಿಡಿದು ಸಲುಗೆಯಿಂದಲೇ ನೋವು ಮಾಡಿದರು. ಇದು ಇಬ್ಬರ ನಡುವಿನ ಬಾಂಧವ್ಯವನ್ನು ಹೇಳುವಂತಿತ್ತು.

ಶಿವಂ ಮಾವಿ ಹಾಗೂ ಪೃಥ್ವಿ ಶಾ ಅಂಡರ್ 19 ತಂಡದ ಸಹ ಆಟಗಾರರಾಗಿದ್ದಾರೆ. ಇಬ್ಬರು ಕೂಡ ಉತ್ತಮ ಗೆಳೆಯರು. ಕಳೆದ ನಾಲ್ಕೈದು ವರ್ಷಗಳಿಂದ ಜೊತೆಯಾಗಿ ಆಡುತ್ತಿದ್ದೇವೆ ಎಂದು ಸ್ವತಃ ಪೃಥ್ವಿ ಶಾ ಮಾವಿ ಬಗ್ಗೆ ಹೇಳಿಕೊಂಡಿದ್ದಾರೆ. ಹೀಗಾಗಿ ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ.

For Quick Alerts
ALLOW NOTIFICATIONS
For Daily Alerts
Story first published: Friday, April 30, 2021, 11:04 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X