Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯಶಸ್ವಿ ಶಸ್ತ್ರ ಚಿಕಿತ್ಸೆಯ ಬಳಿಕ ಮನೆಗೆ ಮರಳಿದ ಶ್ರೇಯಸ್ ಐಯ್ಯರ್

IPL 2021: Shreyas Iyer returns home after successful shoulder surgery

ಮುಂಬೈ: ಭುಜದ ಗಾಯಕ್ಕೆ ತುತ್ತಾಗಿದ್ದ ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್‌ ಶ್ರೇಯಸ್ ಐಯ್ಯರ್, ಯಶಸ್ವಿ ಶಸ್ತ್ರ ಚಿಕಿತ್ಸೆಯ ಬಳಿಕ ಮನೆಗೆ ವಾಪಸ್ಸಾಗಿದ್ದಾರೆ. 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆರಂಭದ ವೇಳೆ ಆಸ್ಪತ್ರೆಯಲ್ಲಿದ್ದ ಶ್ರೇಯಸ್ ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

26ರ ಹರೆಯದ ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಶ್ರೇಯಸ್ ಐಯ್ಯರ್, ಏಪ್ರಿಲ್ 8ರ ಗುರುವಾರ ಮುಂಬೈಯಲ್ಲಿ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಶ್ರೇಯಸ್ ತನ್ನ ಮನೆಗೆ ತೆರಳಿದ್ದಾರೆ ಎಂದು ಐಯ್ಯರ್ ತಂದೆ ಸಂತೋಷ್ ಐಯ್ಯರ್ ಮಾಹಿತಿ ನೀಡಿದ್ದಾರೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

'ಭುಜದ ಶಸ್ತ್ರಚಿಕಿತ್ಸೆಗಾಗಿ ನನ್ನ ಪುತ್ರ ಮುಂಬೈಯ ಕೋಕಿಲಾಬೆನ್ ಆಸ್ಪತ್ರೆಗೆ ಬುಧವಾರ (ಏಪ್ರಿಲ್ 7) ದಾಖಲಾಗಿದ್ದರು. ಭಾರತದ ಖ್ಯಾತ ಸರ್ಜನ್ ದೀನ್‌ಶಾ ಪರ್ದಿವಾಲಾ ಅವರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆದಿದೆ,' ಎಂದು ಸಂತೋಷ್ ತಿಳಿಸಿದ್ದಾರೆ.

ಕಳೆದ ತಿಂಗಳು ಭಾರತ-ಇಂಗ್ಲೆಂಡ್‌ ಮೊದಲನೇ ಏಕದಿನ ಪಂದ್ಯದ ವೇಳೆ ಜಾನಿ ಬೇರ್ಸ್ಟೋವ್ ಬ್ಯಾಟಿಂಗ್ ಸಂದರ್ಭ ರನ್ ಉಳಿಸಲು ಯತ್ನಿಸುವಾಗ ಶ್ರೇಯಸ್ ಭುಜಕ್ಕೆ ತೀವ್ರ ಗಾಯವಾಗಿತ್ತು. ಹೀಗಾಗಿ ಆ ಪ್ರವಾಸ ಸರಣಿಯಿಂದ ಐಯ್ಯರ್ ಹೊರ ಬಿದ್ದಿದ್ದರು. 14ನೇ ಆವೃತ್ತಿಯ ಐಪಿಎಲ್‌ನಿಂದಲೂ ಐಯ್ಯರ್ ಹೊರ ಬಿದ್ದಿದ್ದರು. ಹೀಗಾಗಿ ಐಯ್ಯರ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ರಿಷಭ್ ಪಂತ್ ವಹಿಸಿಕೊಂಡಿದ್ದಾರೆ.

Story first published: Monday, April 12, 2021, 16:08 [IST]
Other articles published on Apr 12, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+