For Quick Alerts
ALLOW NOTIFICATIONS  
For Daily Alerts
 

ಶುಬ್ಮನ್ ಗಿಲ್, ನಿತೀಶ್ ರಾಣ ಜಗತ್ತನ್ನೇ ಬೆರಗಾಗಿಸಲಿದ್ದಾರೆ: ಡೇವಿಡ್ ಹಸ್ಸಿ

IPL 2021: Shubman Gill, Nitish Rana are about to shock the world, says KKR David Hussey

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆರಂಭಿಕರಾಗಿ ಆಡುವ ಶುಬ್ಮನ್ ಗಿಲ್ ಮತ್ತು ನಿತೀಶ್ ರಾಣಾ 2021ರ ಐಪಿಎಲ್ ಆರಂಭಿಕ ಹಂತದಲ್ಲಿ ಅಂಥ ಸ್ಫೋಟಕ ಬ್ಯಾಟಿಂಗ್ ಏನೂ ಪ್ರದರ್ಶಿಸಿಲ್ಲ. ಆದರೆ ದ್ವಿತೀಯ ಹಂತದಲ್ಲಿ ಇವರಿಬ್ಬರೂ ಜಗತ್ತನ್ನೇ ಬೆರಗಾಗಿಸಬಲ್ಲ ಬ್ಯಾಟಿಂಗ್‌ ನಡೆಸಲಿದ್ದಾರೆ ಎಂದು ಕೆಕೆಆರ್ ಚೀಫ್ ಮೆಂಟರ್ ಡೇವಿಡ್ ಹಸ್ಸಿ ಹೇಳಿದ್ದಾರೆ.

ಭಾರತದಲ್ಲಿ ಆರಂಭಗೊಂಡು ಕೋವಿಡ್-19 ಕಾರಣದಿಂದಾಗಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿದ್ದ ಐಪಿಎಲ್ 2021ರ ಆವೃತ್ತಿ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ಯಲ್ಲಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರಗೆ ನಡೆಯಲಿದೆ. ದ್ವಿತೀಯ ಹಂತದಲ್ಲಿ ಕೆಕೆಆರ್ ಉತ್ತಮ ಪ್ರದರ್ಶನ ನೀಡಿ ಪ್ಲೇಆಫ್ಸ್‌ಗೆ ಪ್ರವೇಶಿಸಲು ಎದುರು ನೋಡುತ್ತಿದೆ.

ಆರಂಭಿಕ ಹಂತದ ಐಪಿಎಲ್‌ನಲ್ಲಿ ಶುಬ್ಮನ್ ಗಿಲ್ 7 ಪಂದ್ಯಗಳಲ್ಲಿ 132 ರನ್ ಬಾರಿಸಿದ್ದರು. ನಿತೀಶ್ ರಾಣಾ 201 ರನ್ ಗಳಿಸಿದ್ದರು. ಒಟ್ಟಾರೆ ಕೆಕೆಆರ್ ಆರಂಭಿಕ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆಡಿರುವ 7 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದು 7ನೇ ಸ್ಥಾನಕ್ಕೆ ಕುಸಿದಿತ್ತು. ಸೆಪ್ಟೆಂಬರ್‌ 20ರಂದು ದ್ವಿತೀಯ ಹಂತದ ಮೊದಲ ಪಂದ್ಯವಾಗಿ ಕೆಕೆಆರ್ ತಂಡ ಆರ್‌ಸಿಬಿ ಸವಾಲು ಸ್ವೀಕರಿಸಲಿದೆ.

ಗಿಲ್ ಮತ್ತು ರಾಣಾ ಬಗ್ಗೆ ಡೇವಿಡ್ ಹಸ್ಸಿ ಮಾತನಾಡಿದ್ದಾರೆ. "ಗಿಲ್ ಮತ್ತು ರಾಣಾ ಇಬ್ಬರೂ ಗುಣಮಟ್ಟದ ಆಟಗಾರರು. ಅವರ ಬದ್ದತೆ ತಂಡಕ್ಕೆ ಉತ್ತಮ ರೀತಿಯಲ್ಲಿದೆ. ಅವರಿಗೆ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನ ರುಚಿಯೂ ಇದೆ," ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ಜೊತೆ ಹಸ್ಸಿ ಹೇಳಿಕೊಂಡಿದ್ದಾರೆ.

Story first published: Sunday, September 19, 2021, 19:16 [IST]
Other articles published on Sep 19, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+