ಐಪಿಎಲ್ 2021: ಭಾರತದಿಂದ ತವರಿಗೆ ಮರಳಿದ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು

ಐಪಿಎಲ್ 14ನೇ ಆವೃತ್ತಿ ಕೊರೊನಾ ವೈರಸ್‌ನ ಕಾರಣದಿಮದಾಗಿ ಸ್ಥಗಿತವಾಗಿರುವ ಕಾರಣ ಎಲ್ಲಾ ಕ್ರಿಕೆಟಿಗರು ಕೂಡ ಈಗ ತವರಿಗೆ ವಾಪಾಸಾಗುತ್ತಿದ್ದಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾ ನಂತರ ಈಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಟಗಾರರು ಕೂಡ ಭಾರತದಿಂದ ತವರಿಗೆ ಪ್ರಯಾಣವನ್ನು ಬೆಳೆಸಿದ್ದಾರೆ.
ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಭಾರತದಿಂದ ತವರಿಗೆ ಮರಳಿದ ವಿಚಾರವಾಗಿ ಆರ್‌ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ದಕ್ಷಿಣ ಆಫ್ರಿಕಾದ ಕ್ರಿಕೆಟಿಗರು ಜೋಹಾನ್ಸ್‌ಬರ್ಗ್‌ಗೆ ಮುಂಬೈ ದೋಹಾ ಮಾರ್ಗವಾಗಿ ಪ್ರಯಾಣವನ್ನು ಬೆಳೆಸಿದ್ದಾರೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ ಜೊತೆಗೆ ನಾವು ಸಂಪರ್ಕದಲ್ಲಿದ್ದೇವೆ. ಈ ಐಪಿಎಲ್‌ನಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಸುರಕ್ಷತೆಯೂ ನಮ್ಮ ಮೊದಲ ಆದ್ಯತೆ ಎಂದು ಪ್ರಕಟಣೆಯಲ್ಲಿ ತಿಳಸಿದೆ.
ಇನ್ನು ಆಸ್ಟ್ರೇಲಿಯಾ ಆಟಗಾರರು ಹಾಗೂ ಸಿಬ್ಬಂದಿಗಳು ಮಾಲ್ಡೀವ್ಸ್‌ಗೆ ಪ್ರಯಾಣಿಸಿ ಕ್ವಾರಂಟೈನ್ ಪೂರೈಸುತ್ತಿರುವ ವಿಚಾರವಾಗಿಯೂ ಆರ್‌ಸಿಬಿ ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿದೆ. ವಿಶೇಷ ವಿಮಾನದಲ್ಲಿ ನ್ಯೂಜಿಲೆಂಡ್ ಆಟಗಾರರು ಆಕ್ಲಂಡ್‌ಗೆ ಪ್ರಯಾಣಿಸಿರುವ ಬಗ್ಗೆಯೂ ಅಧಿಕೃತವಾಗಿ ಆರ್‌ಸಿಬಿ ಮಾಹಿತಿಯನ್ನು ಹಂಚಿಕೊಂಡಿದೆ.
ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸಾಕಷ್ಟು ಕಠಿಣ ಬಯೋಬಬಲ್ ನಿರ್ಮಾಣದ ನಂತರವೂ ಬಬಲ್‌ನ ಒಳಗೆ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ನಾಲ್ವರು ಕ್ರಿಕೆಟಿಗರು ಸೋಕಿಗೆ ತುತ್ತಾದ ಬಳಿಕ ಟೂರ್ನಿಯನ್ನು ಮುಂದೂಡುವ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications