
ಐಪಿಎಲ್ 2021ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಮಡದ ಪರವಾಗಿ ಆಡುವ ಅವಕಾಶ ಪಡೆದುಕೊಂಡ ಶೆರ್ಫೇನ್ ರುದರ್‌ಫೋರ್ಡ್ ವೈಯಕ್ತಿಕ ಜೀವನದಲ್ಲಿ ಆಘಾತಕ್ಕೆ ಒಳಗಾಗಿದ್ದಾರೆ. ಗುರುವಾರ ರುದರ್‌ಫೋರ್ಡ್ ತಂದೆ ಮೃತಪಟ್ಟಿದ್ದಾರೆ. ಹೀಗಾಗಿ ಐಪಿಎಲ್ ತೊರೆದಿರುವ ಶೆರ್ಫೇನ್ ರುದರ್‌ಫೋರ್ಡ್ ತವರಿಗೆ ಮರಳುತ್ತಿದ್ದಾರೆ. ಗುರುವಾರ ಸಂಜೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಟ್ವಿಟ್ಟರ್ ಖಾತೆಯಲ್ಲಿ ಫ್ರಾಚೈಸಿ ಈ ಸುದ್ದಿಯನ್ನು ಖಚಿತಪಡಿಸಿದೆ.
ರುದರ್‌ಫೋರ್ಡ್ ಎರಡನೇ ಚರಣದ ಐಪಿಎಲ್‌ಗೆ ಬದಲಿ ಆಟಗಾರನಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡಿದ್ದರು. ಹೈದರಾನಾದ್ ತಮಡದ ಪ್ರಮುಳ ಆಟಗಾರನಾಗುದ್ದ ಜಾನಿ ಬೈರ್‌ಸ್ಟೋವ್ ಎರಡನೇ ಚರಣದ ಪಂದ್ಯಗಳಿಂದ ಹಿಂದಕ್ಕೆ ಸರಿದಿದ್ದರು. ಹೀಗಾಗಿ ಆ ಸ್ಥಾನಕ್ಕೆ ಫ್ರಾಂಚೈಸಿ ರುದರ್‌ಫೋರ್ಡ್‌ಗೆ ಮಣೆ ಹಾಕಿತ್ತು.
14ನೇ ಆವೃತ್ತಿ ಎರಡನೇ ಚರಣದ ಪಂದ್ಯಗಳ ಪೈಕಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಈವರೆಗೆ ಒಂದು ಪಂದ್ಯವನ್ನು ಮಾತ್ರವೇ ಆಡಿದೆ. ಇದರಲ್ಲಿ ಶೆರ್ಫೇನ್ ರುದರ್‌ಫೋರ್ಡ್ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದುಕೊಂಡಿರಲಿಲ್ಲ. ಹೀಗಾಗಿ ಟೂರ್ನಿಯಲ್ಲಿ ಒಂದೂ ಪಂದ್ಯಗಳನ್ನಾಡದೆ ರುದ್‌ಫೋರ್ಡ್ ತವರಿಗೆ ಮರಳುತ್ತಿದ್ದಾರೆ.
ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ಈ ಯುವ ಆಟಗಾರ ತವರಿಗೆ ವಾಪಾಸಾದ ಬಳಿಕ ಮತ್ತೆ ಟೂರ್ನಿಗೆ ಮರಳುತ್ತಾರಾ ಎಂಬ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡಿಲ್ಲ. ಆದರೆ ಕ್ವಾರಂಟೈನ್‌ನ ಕಾರಣದಿಂದಾಗಿ ರುದರ್‌ಫೋರ್ಡ್ ಮತ್ತೆ ಟೂರ್ನಿಗೆ ಮರಳುವುದು ಅಸಾಧ್ಯ ಎನ್ನಲಾಗುತ್ತಿದೆ. ಅಲ್ಲದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನೀರಸ ಪ್ರದರ್ಶನದ ಕಾರಣದಿಂದಾಗಿ ಟೂರ್ನಿಯಿಮದ ಹೊರಬೀಳುವುದು ಬಹುತೇಕ ಖಾತ್ರಿಯಾಗಿದೆ. ಹೀಗಾಗಿ ತಂಡಕ್ಕೆ ವಾಪಾಸಾಗುವ ಸಾಧ್ಯತೆಗಳು ಇಲ್ಲ ಎನ್ನಲಾಗಿದೆ.
ರುದರ್‌ಫೋರ್ಡ್ ಈ ಬಾರಿಯ ಕೆರೀಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸಿದ್ದರು. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಆಡುವ ಬಳಗದಲ್ಲಿ ರುದರ್‌ಫೋರ್ಡ್ ಸ್ಥಾನ ಪಡೆಯುವ ಸಾಧ್ಯತೆಯಿತ್ತು. ಇದಕ್ಕೂ ಮುನ್ನ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ರುದರ್‌ಫೋರ್ಡ್ ಆಡಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರದರ್ಶನ ಎರಡನೇ ಚರಣದಲ್ಲಿಯೂ ಕೆಟ್ಟ ಸ್ಥಿತಿಯಲ್ಲಿಯೇ ಮುಂದುವರಿದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೀನಾಯವಾಗಿ ಸೋಲು ಕಂಡಿತು. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಆಡಿದ 8 ಪಂದ್ಯಗಳ ಪೈಕಿ 7 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಎಸ್‌ಆರ್‌ಹೆಚ್ ತಂಡದ ಪ್ಲೇಆಪ್ ಅವಕಾಶ ಬಹುತೇಕ ಮುಚ್ಚಿದೆ.