ಐಪಿಎಲ್ 2021: 20ನೇ ಅರ್ಧ ಶತಕ ಚಚ್ಚಿದ ಕನ್ನಡಿಗ ಮನೀಶ್ ಪಾಂಡೆ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕನ್ನಡಿಗ ಮನೀಶ್ ಪಾಂಡೆ 20ನೇ ಅರ್ಧ ಶತಕ ಬಾರಿಸಿದ್ದಾರೆ. ಬುಧವಾರ (ಏಪ್ರಿಲ್ 28) ನಡೆದ ಐಪಿಎಲ್ 23ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದಿದ್ದ ಪಾಂಡೆ ಅರ್ಧ ಶತಕ ಬಾರಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಸನ್ ರೈಸರ್ಸ್ ಹೈದರಾಬಾದ್‌ನಿಂದ 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಮನೀಶ್ ಪಾಂಡೆ 46 ಎಸೆತಗಳಿಗೆ 61 ರನ್ ಸೇರಿಸಿದರು. 150ನೇ ಐಪಿಎಲ್ ಪಂದ್ಯದಲ್ಲಿ ಪಾಂಡೆ ಈ ಸಾಧನೆ ಮಾಡಿರುವುದು ವಿಶೇಷ
31ರ ಹರೆಯದ ಮನೀಶ್ 150 ಐಪಿಎಲ್ ಪಂದ್ಯಗಳಲ್ಲಿ 3421* ರನ್ ಬಾರಿಸಿದ್ದಾರೆ. ಇದರಲ್ಲಿ 20 ಅರ್ಧ ಶತಕ, 1 ಶತಕ ಸೇರಿದೆ. ಇನ್ನು 26 ಏಕದಿನ ಪಂದ್ಯಗಳಲ್ಲಿ 492 ರನ್, 39 ಟಿ20ಐ ಪಂದ್ಯಗಳಲ್ಲಿ 709 ರನ್ ಬಾರಿಸಿದ್ದಾರೆ.
ಬುಧವಾರದ ಪಂದ್ಯದಲ್ಲಿ ಮನೀಶ್ 35 ಎಸೆತಗಳಲ್ಲಿ 50 ರನ್ ಪೂರೈಸಿದರು. 4 ಫೋರ್ಸ್, 1 ಸಿಕ್ಸರ್‌ನೊಂದಿಗೆ ಮನೀಶ್ 50* ರನ್ ಕಲೆ ಹಾಕಿದ್ದರು. 61 ರನ್ ಕೊಡುಗೆ ನೀಡಿದ್ದ ಪಾಂಡೆ, 17.5ನೇ ಓವರ್‌ನಲ್ಲಿ ವೇಗಿ ಲುಂಗಿ ಎನ್‌ಗಿಡಿ ಓವರ್‌ನಲ್ಲಿ ಫಾಫ್ ಡು ಪ್ಲೆಸಿಸ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications