ಐಪಿಎಲ್ 2021: ಹೈದರಾಬಾದ್ vs ಕೊಲ್ಕತಾ ಮುಖಾಮುಖಿಯಲ್ಲಿ ಯಾರಿಗೆ ಮೇಲುಗೈ

ಐಪಿಎಲ್‌ನಲ್ಲಿ ಭಾನುವಾರ ಮೂರನೇ ಕದನಕ್ಕೆ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತಾ ನೈಟ್ ರೈಡರ್ಸ್ 14ನೇ ಐಪಿಎಲ್‌ನಲ್ಲಿ ಮೊದಲ ಪಂದ್ಯವನ್ನಾಡಲು ಮೈದಾನಕ್ಕೆ ಇಳಿಯುತ್ತಿದೆ. ಈ ಎರಡು ತಂಡಗಳ ನಡುವಿನ ಹೆಡ್ ಟು ಹೆಡ್ ಸೆಣೆಸಾಟ ಹೇಗಿದೆ ಎಂದು ಮುಂದೆ ಓದಿ..
ಕೊಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್‌ನಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿದ ತಂಡವಾಗಿದೆ. ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ತಂಡ 2016ರ ಆವೃತ್ತಿಯ ಚಾಂಪಿಯನ್ ತಂಡ ಎನಿಸಿಕೊಂಡಿದೆ. ಈ ಎರಡು ತಂಡಗಳ ನಡುವಿನ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.

ಹೆಡ್ ಟು ಹೆಡ್
ಐಪಿಎಲ್ ಇತಿಹಾಸದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಈವರೆಗೆ 19 ಬಾರಿ ಮುಖಾಮುಖಿಯಾಗಿದೆ. ಈ ಕಾದಾಟದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೇಲುಗೈ ಸಾಧಿಸಿದೆ. ಕೊಲ್ಕತ್ತಾ 12 ಗೆಲುವು ಕಂಡಿದ್ದರೆ ಹೈದರಾಬಾದ್ 7 ಬಾರಿ ಗೆದ್ದುಕೊಂಡಿದೆ.

ಇತ್ತೀಚಿನ ಮುಖಾಮುಖಿ
ಇನ್ನು ಇತ್ತೀಚಿನ ಐದು ಮುಖಾಮುಖಿಯಲ್ಲಿಯೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅಲ್ಪ ಮುನ್ನಡೆಯನ್ನು ಕಾಯ್ದುಕೊಂಡಿದೆ. ಕಳೆದ ಐದು ಪಂದ್ಯಗಳಲ್ಲಿ ಕೆಕೆಆರ್ 3 ಗೆಲುವು ಸಾಧಿಸಿದ್ದರೆ ಹೈದರಾಬಾದ್ ತಂಡ 2 ಬಾರಿ ಗೆದ್ದಿದೆ. ಈ ಹಿಂದಿನ ಆವೃತ್ತಿಯಲ್ಲಿ ಸನ್‌ರೈಸರ್ಸ್ ವಿರುದ್ಧ 2 ಪಂದ್ಯದಲ್ಲಿ ಮುಖಾಮುಖಿಯಾದಾಗಲೂ ಕೆಕೆಆರ್ ಗೆದ್ದುಕೊಂಡಿದೆ.

ಯಶಸ್ವಿ ಬ್ಯಾಟ್ಸ್‌ಮನ್
ಇನ್ನು ಈ ಎರಡು ತಂಡಗಳ ನಡುವಿನ ಮುಖಾಮುಖಿಯಲ್ಲಿ ಹೆಚ್ಚು ಯಶಸ್ಸು ಸಾಧಿಸಿದ ಬ್ಯಾಟ್ಸ್‌ಮನ್ ಆಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಕಾಣಿಸಿಕೊಳ್ಳುತ್ತಾರೆ. ಅವರು 616 ರನ್‌ಗಳನ್ನು ಕೆಕೆಆರ್ ವಿರುದ್ಧ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ(2014-19) ರಾಬಿನ್ ಉತ್ತಪ್ಪ ಇದ್ದು ಅವರು 426 ರನ್‌ಗಳಿಸಿದ್ದಾರೆ.

ಯಶಸ್ವಿ ಬೌಲರ್
ಇನ್ನು ಬೌಲರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಅತ್ಯುತ್ತಮ ಪ್ರದರ್ಶನ ನೀಡಿದ್ದು 19 ವಿಕೆಟ್‌ಗಳನ್ನು ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಕೆಕೆಆರ್ ಪರವಾಗಿ 2014-17ರ ವರೆಗೆ ಆಡಿದ್ದ ಉಮೇಶ್ ಯಾದವ್ ಇದ್ದಾರೆ. ಉಮೇಶ್ 11 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications