For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಈ ಮೈಲಿಗಲ್ಲುಗಳ ಮೇಲೆ ರೋಹಿತ್, ಮನೀಷ್ ಪಾಂಡೆ ಮತ್ತು ಪಾಂಡ್ಯ ಕಣ್ಣು

IPL 2021, SRH vs MI : Player Records and Approaching Milestones

14ನೇ ಐಪಿಎಲ್ ಆವೃತ್ತಿಯ 31ನೇ ಪಂದ್ಯ ಮಂಗಳವಾರ (ಮೇ 4) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆಯಲಿದೆ. ಪ್ರಸ್ತುತ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಗೆದ್ದು 3 ಪಂದ್ಯಗಳನ್ನು ಸೋತಿರುವ ಮುಂಬೈ ಇಂಡಿಯನ್ಸ್ ತಂಡವನ್ನು 7 ಪಂದ್ಯಗಳನ್ನಾಡಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಜಯಗಳಿಸಿ ಉಳಿದ 6 ಪಂದ್ಯಗಳನ್ನೂ ಸೋತಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಎದುರಿಸಲಿದೆ.

ಮುಂಬೈ ಇಂಡಿಯನ್ಸ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯಗಳಿಸುವುದರ ಮೂಲಕ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇತ್ತ ಸನ್ ರೈಸರ್ಸ್ ಹೈದರಾಬಾದ್ ತಂಡ ನಾಯಕನ ಬದಲಾವಣೆಯ ನಂತರವೂ ಸಹ ತನ್ನ ಸೋಲಿನ ಯಾನವನ್ನು ಮುಂದುವರಿಸಿದ್ದು ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೀನಾಯವಾಗಿ ಸೋಲನ್ನು ಕಂಡಿದೆ.

ಈ ಎರಡೂ ತಂಡಗಳು ಮಂಗಳವಾರ ಮುಖಾಮುಖಿಯಾಗಲಿದ್ದು ಇತ್ತಂಡಗಳ ಆಟಗಾರರು ಕೆಲವೊಂದಿಷ್ಟು ಮೈಲಿಗಲ್ಲುಗಳನ್ನು ಮುಟ್ಟುವ ಸನಿಹದಲ್ಲಿದ್ದಾರೆ ಹಾಗೂ ಈಗಾಗಲೇ ಕೆಲವೊಂದಿಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಂತಹ ಮೈಲಿಗಲ್ಲುಗಳು ಮತ್ತು ದಾಖಲೆಗಳ ವಿವರ ಮುಂದೆ ಇದೆ ಓದಿ.

ರೋಹಿತ್ ಶರ್ಮಾ :

ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರನ್ನು ಸರಿಗಟ್ಟುವ ಸನಿಹದಲ್ಲಿದ್ದಾರೆ. ಸುರೇಶ್ ರೈನಾ ಅವರನ್ನು ಸರಿಗಟ್ಟಿ ಮೂರನೇ ಸ್ಥಾನಕ್ಕೇರಲು 12 ರನ್ ಮತ್ತು ಶಿಖರ್ ಧವನ್ ಅವರನ್ನು ಸರಿಗಟ್ಟಿ ಎರಡನೇ ಸ್ಥಾನಕ್ಕೇರಲು 98 ರನ್‌ಗಳ ಅಗತ್ಯತೆ ರೋಹಿತ್ ಶರ್ಮಾಗೆ ಇದೆ.

ಜಸ್ಪ್ರೀತ್ ಬುಮ್ರಾ :

ಮಂಗಳವಾರ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಆಡಲಿರುವ ಪಂದ್ಯ ಜಸ್ಪ್ರೀತ್ ಬುಮ್ರಾ ಪಾಲಿಗೆ 100ನೇ ಐಪಿಎಲ್ ಪಂದ್ಯವಾಗಲಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಪರ 100 ಅಥವಾ 100ಕ್ಕಿಂತ ಹೆಚ್ಚು ಪಂದ್ಯಗಳನ್ನಾಡಿದ 6ನೇ ಆಟಗಾರ ಎಂಬ ಕೀರ್ತಿಗೆ ಜಸ್ಪ್ರೀತ್ ಬುಮ್ರಾ ಪಾತ್ರರಾಗಲಿದ್ದಾರೆ.

ಮನೀಷ್ ಪಾಂಡೆ :

ಮನೀಷ್ ಪಾಂಡೆ ಒಟ್ಟಾರೆ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 6000 ರನ್ ಪೂರೈಸಲು 56 ರನ್‌ಗಳ ಅಗತ್ಯತೆಯಿದ್ದು, ಮುಂಬೈ ವಿರುದ್ಧದ ಪಂದ್ಯದಲ್ಲಿ 56 ರನ್ ಬಾರಿಸಿದರೆ ಈ ಮೈಲಿಗಲ್ಲನ್ನು ಮುಟ್ಟಿದ್ದಾರೆ.

ಕೃನಾಲ್ ಪಾಂಡ್ಯ :

ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಕೃನಾಲ್ ಪಾಂಡ್ಯ 49 ವಿಕೆಟ್‍ಗಳನ್ನು ಪಡೆದುಕೊಂಡಿದ್ದು 50 ವಿಕೆಟ್‍ಗಳ ಮೈಲಿಗಲ್ಲನ್ನು ಮುಟ್ಟಲು 1 ವಿಕೆಟ್‌ನ ಅಗತ್ಯತೆಯಿದೆ.

ಇಶಾನ್ ಕಿಶನ್ :

ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಇಶಾನ್ ಕಿಶನ್ 965 ರನ್ ಗಳಿಸಿದ್ದು 1000 ರನ್ ಪೂರೈಸಲು 35 ರನ್‌ಗಳ ಅಗತ್ಯತೆಯಿದೆ.

ಕೀರನ್ ಪೊಲಾರ್ಡ್ :

ಪ್ರಸ್ತುತ ಮುಂಬೈ ತಂಡದಲ್ಲಿರುವ ಆಟಗಾರರ ಪೈಕಿ ಕೀರನ್ ಪೊಲಾರ್ಡ್ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅತಿಹೆಚ್ಚು ರನ್ ಬಾರಿಸಿರುವ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 15 ಇನ್ನಿಂಗ್ಸ್ ಆಡಿರುವ ಪೊಲಾರ್ಡ್ 418 ರನ್ ಬಾರಿಸಿದ್ದಾರೆ.

Story first published: Tuesday, May 4, 2021, 13:05 [IST]
Other articles published on May 4, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+