ಐಪಿಎಲ್ 2021: ಹೈದರಾಬಾದ್ vs ರಾಜಸ್ಥಾನ್, Live ಸ್ಕೋರ್, ಪ್ಲೇಯಿಂಗ್ XI

ದುಬೈ, ಸೆಪ್ಟೆಂಬರ್ 27: ಈ ಬಾರಿಯ ಐಪಿಎಲ್‌ನ 40ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಕ್ಸ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿದೆ.

ಕೇನ್ ವಿಲಿಯಮ್ಸನ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಸತತವಾಗಿ ಸೋಲಿನ ಮೇಲೆ ಸೋಲು ಕಾಣುತ್ತಿದೆ. ಈಗಾಗಲೇ ಪ್ಲೇಆಫ್ ಸ್ಪರ್ಧೆಯಿಂದ ಹೈದರಾಬಾದ್ ಅಧಿಕೃತವಾಗಿ ಹೊರಗೆ ಬಿದ್ದಿದೆ. ಈ ಮೂಲಕ ಈ ಬಾರಿಯ ಐಪಿಎಲ್‌ನ ಫ್ಲೇಆಫ್ ಸ್ಪರ್ಧೆಯಿಂದ ಅಧಿಕೃತವಾಗಿ ಹೊರಗೆ ಬಿದ್ದ ಮೊದಲ ತಂಡ ಎನಿಸಿದೆ. ದುರಂತವೆಂದರೆ ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿ ಕೇವಲ ಒಂದು ಪಂದ್ಯವನ್ನು ಮಾತ್ರವೇ ಗೆದ್ದಿದೆ.

1
50846
1
50846

ಇನ್ನು ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹಯದರಾಬಾದ್ ತಂಡ ಪ್ರಮುಖ ಬದಲಾವಣೆಯನ್ನು ಮಾಡಿಕೊಂಡಿದೆ. ಮಾಜಿ ನಾಯಕ ಡೇವಿಡ್ ವಾರ್ನರ್ ಮತ್ತೊಮ್ಮೆ ಆಡುವ ಬಳಗದಿಂದ ಹೊರಬಿದ್ದಿದ್ದಾರೆ. ಅಲ್ಲದೆ ಮನೀಶ್ ಪಾಂಡೆ ಹಾಗೂ ಕೇದಾರ್ ಜಾಧವ್ ಕೂಡ ತಂಡದಿಂದ ಹೊರಗುಳಿದಿದ್ದಾರೆ. ಗಾಯದ ಕಾರಣದಿಂದಾಗಿ ಖಲೀಲ್ ಕೂಡ ಆಡುವ ಬಳಗದಿಮದ ಹೊರಗುಳಿದಿದ್ದಾರೆ. ಜೇಸನ್ ರಾಯ್ ಈ ಪಂದ್ಯದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರೆ ಪ್ರಿಯಂ ಗರ್ಗ್, ಅಭಿಷೇಕ್ ವರ್ಮ ಹಾಗೂ ಸಿದ್ಧಾರ್ಥ್ ಕೌಲ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

1
4-2021

ಇನ್ನು ರಾಜಸ್ಥಾನ ತಮಡದ ಯುವ ವೇಗಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಹೀರೋ ಆಗಿ ಮಿಂಚಿದ್ದ ಕಾರ್ತಿಕ್ ತ್ಯಾಗಿ ಫಿಟ್‌ನೆಸ್ ಸಮಸ್ಯೆಯಿಮದ ಹೊರಗುಳಿದಿದ್ದಾರೆ. ಕ್ರಿಸ್ ಮೋರಿಸ್ ಹಾಗೂ ಲೂಯಿಸ್ ತಂಡಕ್ಕೆ ಮರಳಿದ್ದು ಡೇವಿಡ್ ಮಿಲ್ಲರ್ ಹಾಗೂ ಶಮ್ಸಿ ತಮಡದಿಂದ ಹೊರಗುಳಿದಿದ್ದಾರೆ.

ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಚೇತನ್ ಸಕಾರಿಯಾ, ಜಯದೇವ್ ಉನಾದ್ಕಟ್, ಮುಸ್ತಫಿಜುರ್ ರೆಹಮಾನ್

ಬೆಂಚ್: ಕಾರ್ತಿಕ್ ತ್ಯಾಗಿ, ಮನನ್ ವೊಹ್ರಾ, ಶ್ರೇಯಸ್ ಗೋಪಾಲ್, ಕೆಸಿ ಕರಿಯಪ್ಪ, ಗ್ಲೆನ್ ಫಿಲಿಪ್ಸ್, ಶಿವಂ ದುಬೆ, ಓಶಾನೆ ಥಾಮಸ್, ಮಯಾಂಕ್ ಮಾರ್ಕಂಡೆ, ಅನುಜ್ ರಾವತ್, ಜೆರಾಲ್ಡ್ ಕೋಟ್ಜಿ, ಕುಲ್ದಿಪ್ ಯಾದವ್, ಆಕಾಶ್ ಸಿಂಗ್, ತಬ್ರೇಜ್ ಶಮ್ಸಿ, ಡೇವಿಡ್ ಮಿಲ್ಲರ್

ಜೇಸನ್ ರಾಯ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ

IPL 2021 Play Offs : Mumbai Indians, KKR మధ్యే పోటీ.. RCB కి ఒక్కటి చాలు ! || Oneindia Telugu

ಬೆಂಚ್: ಡೇವಿಡ್ ವಾರ್ನರ್, ಕೇದಾರ್ ಜಾಧವ್, ಖಲೀಲ್ ಅಹ್ಮದ್, ಶಹಬಾಜ್ ನದೀಮ್, ಮುಜೀಬ್ ಉರ್ ರಹಮಾನ್, ಶ್ರೀವಾತ್ ಗೋಸ್ವಾಮಿ, ಮೊಹಮ್ಮದ್ ನಬಿ, ವಿರಾಟ್ ಸಿಂಗ್, ತುಳಸಿ ತಂಪಿ, ಜಗದೀಶ ಸುಚಿತ್, ಉಮ್ರಾನ್ ಮಲಿಕ್, ಮನೀಶ್ ಪಾಂಡೆ

For Quick Alerts
ALLOW NOTIFICATIONS
For Daily Alerts
Story first published: Monday, September 27, 2021, 19:30 [IST]
Other articles published on Sep 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X