ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುಎಇ, ಆಸ್ಟ್ರೇಲಿಯಾ ಅಲ್ಲ ಈ ದೇಶದಲ್ಲಿ ಐಪಿಎಲ್ ನಡೆಯುವ ಸಾಧ್ಯತೆಯಿದೆ!

IPL 2021: Sri Lanka Cricket offers to host remaining 31 matches in September

ಏಪ್ರಿಲ್ 9ರಂದು ಭಾರತದಲ್ಲಿ ಆರಂಭವಾದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮೇ 4ರವರೆಗೂ ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿಯೇ ನಡೆದುಕೊಂಡುಬಂದಿತ್ತು. ತದನಂತರ ಐಪಿಎಲ್ ಬಯೋ-ಬಬಲ್ ಒಳಗೂ ಕೊರೊನಾ ಪ್ರವೇಶಿಸಿ ಕೆಲ ಆಟಗಾರರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಪ್ರಸ್ತುತ ಐಪಿಎಲ್ ಟೂರ್ನಿಯ 29 ಪಂದ್ಯಗಳು ಈಗಾಗಲೇ ಮುಗಿದಿದ್ದು ಉಳಿದ 31 ಪಂದ್ಯಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಸುವ ಚಿಂತನೆಯಲ್ಲಿದೆ ಬಿಸಿಸಿಐ.

ಕಳೆದ ಬಾರಿ ಕೂಡ ಕೊರೊನಾವೈರಸ್ ಕಾರಣದಿಂದ ಭಾರತದಲ್ಲಿ ಐಪಿಎಲ್ ಟೂರ್ನಿಯನ್ನು ನಡೆಸದೆ ಯುಎಇಯಲ್ಲಿ ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿ ನಡೆಸಲಾಗಿತ್ತು. ಹೀಗಾಗಿ ಈ ಬಾರಿ ಅರ್ಧಕ್ಕೆ ನಿಂತಿರುವ ಐಪಿಎಲ್ ಟೂರ್ನಿಯನ್ನು ಕೂಡ ಸೆಪ್ಟೆಂಬರ್ ತಿಂಗಳಿನಲ್ಲಿ ಯುಎಇಯಲ್ಲಿ ನಡೆಸುವುದು ಬಿಸಿಸಿಐ ಯೋಜನೆ ಎನ್ನಲಾಗುತ್ತಿದೆ. ಹಾಗೂ ಆಸ್ಟ್ರೇಲಿಯಾದಲ್ಲಿ ಉಳಿದ ಐಪಿಎಲ್ ಪಂದ್ಯಗಳನ್ನು ನಡೆಸುವ ಆಯ್ಕೆಯನ್ನು ಕೂಡ ಬಿಸಿಸಿಐ ಹೊಂದಿದೆ ಎಂಬ ಸುದ್ದಿ ಇದೆ. ಇದರ ನಡುವೆ ಇತ್ತೀಚೆಗಷ್ಟೇ ಇಂಗ್ಲೆಂಡ್ ಕ್ರಿಕೆಟ್ ಕೌಂಟಿಗಳು ಕೂಡ ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಇಂಗ್ಲೆಂಡ್‌ನಲ್ಲಿ ಮುಂದುವರಿಸುವಂತೆ ಬಿಸಿಸಿಐಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ಇದೀಗ ಇಂಗ್ಲೆಂಡ್ ಕ್ರಿಕೆಟ್ ಕೌಂಟಿಗಳ ನಂತರ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಪ್ರಸ್ತುತ ಐಪಿಎಲ್ ಟೂರ್ನಿಯ ಉಳಿದ 31 ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸುವಂತೆ ಬಿಸಿಸಿಐಗೆ ಪ್ರಸ್ತಾಪಿಸಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳ ಆತಿಥ್ಯವನ್ನು ವಹಿಸಲು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಿದ್ಧವಿದೆ, ಜುಲೈ - ಆಗಸ್ಟ್ ತಿಂಗಳಿನಲ್ಲಿ ಲಂಕಾ ಪ್ರೀಮಿಯರ್ ಲೀಗ್ ನಡೆಯಲಿದ್ದು ಅದು ಮುಗಿದ ನಂತರ ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಐಪಿಎಲ್ ನಡೆಸಲು ಕ್ರೀಡಾಂಗಣ ಮತ್ತು ಬೇಕಾದ ಸವಲತ್ತುಗಳನ್ನು ಸಿದ್ಧಪಡಿಸುತ್ತೇವೆ' ಎಂದು ಪ್ರೊ. ಅರ್ಜುನ್ ಡಿ ಸಿಲ್ವಾ ತಿಳಿಸಿದರು.

Story first published: Friday, May 7, 2021, 19:05 [IST]
Other articles published on May 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X