ಐಪಿಎಲ್ 2021: 14ನೇ ಆವೃತ್ತಿಗೆ ಅಧಿಕೃತ ಆಂಥೆಮ್ ಬಿಡುಗಡೆ ಮಾಡಿದ ಸ್ಟಾರ್ ಸ್ಪೋರ್ಟ್ಸ್

ಐಪಿಎಲ್ ಆರಂಭಕ್ಕೆ ಈಗ ದಿನಗಣನೆ ಆರಂಭವಾಗಿದೆ. ಭಾರತೀಯ ಕ್ರೀಕೆಟ್ ಪ್ರೇಮಿಗಳು ಈ ಕ್ರಿಕೆಟ್ ಹಬ್ಬವನ್ನು ಸಂಬ್ರಮಿಸಲು ತುದಿಗಾಲಲ್ಲಿ ನಿಂತಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಲೀಗ್ ಮತ್ತಷ್ಟು ಉತ್ತುಂಗಕ್ಕೆ ಹಾಗೂ ಮತ್ತಷ್ಟು ಗುಣಮಟ್ಟವನ್ನು ಪಡೆಯುತ್ತಾ ಮುನ್ನುಗ್ಗುತ್ತಿದೆ. 2021ರ ಹೊಸ ಆವೃತ್ತಿಯೂ ಕೂಡ ಮತ್ತಷ್ಟು ನಿರೀಕ್ಷೆಯನ್ನು ಮೂಡಿಸಿದೆ.
ಐಪಿಎಲ್ ಆರಂಭಕ್ಕೆ ಕೇವಲ ಎರಡು ವಾರಗಳು ಮಾತ್ರವೇ ಬಾಕಿಯಿದ್ದು ಈ ಸಂದರ್ಭದಲ್ಲಿ ಟೂರ್ನಿಯ ಪ್ರಚಾರವನ್ನು ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ಆರಂಭಿಸಿದೆ. ಅದಕ್ಕೆ ಪೂರಕವಾಗಿ ಹೊಸ ಆವೃತ್ತಿಗೆ ಹೊಸ ಆಂಥೆಮ್ ಹಾಡನ್ನು ಸ್ಟಾರ್‌ಸ್ಪೋರ್ಟ್ಸ್ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.
ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಯಾವಾಗಲೂ ಅದರ ಸುತ್ತಲೂ ಕೆಲವು ರೋಚಕ ವಿಷಯಗಳನ್ನು ಹೊಂದಿರುವ ಆಕರ್ಷಕವಾಗಿರುವ ಗೀತೆಗಳನ್ನು ತಯಾರಿಸುವುದಕ್ಕೆ ಹೆಸರುವಾಸಿಯಾಗಿದೆ. 2021ಕ್ಕೂ ಇದೇ ರೀತಿಯಲ್ಲಿ ಆಕರ್ಷಕವಾಗಿರುವ ಆಂಥೆಮ್ ಹಾಡನ್ನು ಬಿಡುಗಡೆಗೊಳಿಸಲಾಗಿದೆ. ತರಗತಿಯಲ್ಲಿ ವಿದ್ಯಾರ್ಥಿಗೆ ಶಿಕ್ಷಕರು "ಯಶಸ್ಸಿನ ಮಂತ್ರವೇನು" ಎಂದು ಕೇಳುವ ಮೂಲಕ ಈ ವಿಡಿಯೋ ಆರಂಭವಾಗುತ್ತದೆ.
ಶಿಕ್ಷಕರು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಎದ್ದು ನಿಂತು ತನಗೆ ಗೊತ್ತಿರುವ ಮಂತ್ರಗಳನ್ನು ಹೇಳಲು ಆರಂಭಿಸುತ್ತಾನೆ. ಆದರೆ ಇದಕ್ಕೆ ಶಿಕ್ಷಕರು ಇದೆಲ್ಲಾ ಕಳೆಯ ಮಂತ್ರಗಳು ಎನ್ನುತ್ತಾರೆ. ಇದಾದ ಬಳಿಕ ತಕ್ಷಣವೇ ಸಂಗೀತ ಆರಂಭವಾಗುವ ಮೂಲಕ ಐಪಿಎಲ್ ಆಂಥೆಮ್ ಹಾಡು ಆರಂಭವಾಗುತ್ತದೆ.
"ಏ ಅಪ್ನಾ ಮಂತ್ರ ಹೇ, ಇಂಡಿಯಾ ಕಾ ಅಪ್ನಾ ಮಂತ್ರ" ಇದು ನಮ್ಮ ಮಂತ್ರ, ಭಾರತದ ಸ್ವಂತ ಮಂತ್ರ" ಎಂದು ಆಂಥಮ್ ಹಾಡು ಆರಂಭವಾಗುತ್ತದೆ. ಇದರಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಸೇರಿದಂತೆ ಕೆಲ ಕ್ರಿಕೆಟಿಗರು ಕಾಣಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications