Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2021 Schedule: ಆರಂಭ-ಅಂತ್ಯ, ತಾಣಗಳು ಸಂಪೂರ್ಣ ಮಾಹಿತಿ

IPL 2020: Start-End dates, Venus, Complete details

ಬೆಂಗಳೂರು: ನಗದು ಶ್ರೀಮಂತ ಕ್ರಿಕೆಟ್ ಟೂರ್ನಿ ಎಂದು ಗುರುತಿಸಿಕೊಂಡಿರುವ ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆರಂಭ ಮತ್ತು ಫೈನಲ್ ದಿನಾಂಕ ಪ್ರಕಟಗೊಂಡಿದೆ. ವರದಿಯ ಪ್ರಕಾರ ಏಪ್ರಿಲ್ 9ರಂದು ಆರಂಭಗೊಳ್ಳುವ ಟೂರ್ನಿ ಮೇ 30ರಂದು ಫೈನಲ್‌ನೊಂದಿಗೆ ಅಂತ್ಯಗೊಳ್ಳಲಿದೆ ಎಂದು ತಿಳಿದು ಬಂದಿದೆ. ಈ ಬಾರಿಯ ಟೂರ್ನಿ ಭಾರತದಲ್ಲೇ ನಡೆಯುತ್ತಿದೆ.

2021ರ ಐಪಿಎಲ್‌ಗಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತಯಾರಿಸಿದ್ದ ತಾಣಗಳ ಪಟ್ಟಿಯಿಂದ ಮುಂಬೈ ಹೊರಗಿಡಲಾಗಿತ್ತು. ಆದರೆ ಈಗ ಮತ್ತೊಂದು ತಾಣಗಳ ಪಟ್ಟಿ ಪ್ರಕಟಗೊಂಡಿದ್ದು, ಅದರಲ್ಲಿ ಮುಂಬೈ ತಾಣ ಸೇರ್ಪಡೆಗೊಂಡಿದೆ.

2021ರ ಐಪಿಎಲ್‌ಗೆ ಸಂಬಂಧಿಸಿ ಪ್ರಮುಖ ವಿಚಾರಗಳು ಕೆಳಗಿವೆ ನೋಡಿ

ಫೈನಲ್ ಪಂದ್ಯ ನಡೆಯೋದು

ಫೈನಲ್ ಪಂದ್ಯ ನಡೆಯೋದು

ಇಂಡಿಯಾ ಟುಡೇ ವರದಿಯ ಪ್ರಕಾರ ಏಪ್ರಿಲ್ 9ರಂದು ಟೂರ್ನಿ ಆರಂಭಗೊಂಡರೆ ಮೇ 30ರಂದು ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ. ಮಾಹಿತಿಯ ಪ್ರಕಾರ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ ತವರು ತಾಣವಾದ ಮುಂಬೈನಲ್ಲೇ ಅಥವಾ ವಿಶ್ವದ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

6 ತಾಣಗಳು ಯಾವುವು?

6 ತಾಣಗಳು ಯಾವುವು?

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯಗಳು ಭಾರತದ ಆರು ತಾಣಗಳಾದ ಮುಂಬೈ, ಕೋಲ್ಕತ್ತಾ ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಅಹ್ಮದಾಬಾದ್ ತಾಣಗಳಲ್ಲಿ ನಡೆಯಲಿವೆ. ಹಿಂದಿನ ಪಟ್ಟಿಯಲ್ಲಿ ಹೈದರಾಬಾದ್ ತಾಣವಿತ್ತು. ಆದರೆ ಈಗ ಹೈದರಾಬಾದ್ ತಾಣ ತೆಗೆದು ಮುಂಬೈ ತಾಣ ಸೇರಿಸಲಾಗಿದೆ.

ಎಷ್ಟು ದಿನಗಳ ಪಂದ್ಯ

ಎಷ್ಟು ದಿನಗಳ ಪಂದ್ಯ

ಈ ಬಾರಿ ಐಪಿಎಲ್ ಒಟ್ಟು 52 ದಿನಗಳ ಕಾಲ ನಡೆಯಲಿದೆ. ಒಟ್ಟು 60 ಪಂದ್ಯಗಳನ್ನು ಟೂರ್ನಿ ಒಳಗೊಂಡಿರಲಿದೆ ಎಂದು ತಿಳಿದು ಬಂದಿದೆ. ಹಿಂದಿನ ಸೀಸನ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿ, ಶಾರ್ಜಾ ಮತ್ತು ದುಬೈ ತಾಣಗಳಲ್ಲಿ ನಡೆದಿತ್ತು. ಕೊರೊನಾ ಕಾರಣ 13ರ ಸೀಸನ್ ಭಾರತದಲ್ಲಿ ನಡೆದಿರಲಿಲ್ಲ.

Story first published: Saturday, March 6, 2021, 17:40 [IST]
Other articles published on Mar 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+