For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಬಯೋಬಬಲ್ ಈಗ ಮತ್ತಷ್ಟು ಕಠಿಣ, ಪಾರ್ಸಲ್ ಆಹಾರಗಳಿಗೆ ಕಡಿವಾಣ

IPL 2021: Strict dicision by BCCI,outside food not allowed in bio-bubble

ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಆಯೋಜಕರು ಐಪಿಎಲ್ ಬಯೋಬಬಲ್‌ಅನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ. ಈವರೆಗೂ ಐಪಿಎಲ್‌ನ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ತಾವು ಉಳಿದುಕೊಂಡಿದ್ದ ಹೋಟೆಲ್‌ ಅಲ್ಲದೆ ಹೊರಗಡೆಯಿಂದಲೂ ಆಹಾರಗಳನ್ನು ಪಾರ್ಸಲ್ ತರಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಈಗ ಅದಕ್ಕೆ ಕಡಿವಾಣ ಹಾಕಲಾಗಿದೆ.

"ಟೂರ್ನಿಯ ಆರಂಭದಲ್ಲಿ ಎಲ್ಲಾ ಆಟಗಾರಿಗೆ ನಿಗದಿ ಪಡಿಸಿದ ಹೋಟಲ್ ಅಲ್ಲದೆ ಬೇರೆ ಕಡೆಯಿಂದಲೂ ಆಹಾರಗಳನ್ನು ತರಿಸಿಕೊಳ್ಳಲು ಅವಕಾಶವನ್ನು ನೀಡಲಾಗಿತ್ತು. ಈ ಸೌಲಭ್ಯಗಳನ್ನು ಈಗ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ" ಎಂದು ಸೂಚಿಸಲಾಗಿದೆ.

ಬಿಸಿಸಿಐನ ಈ ನಿಯಮ ಐಪಿಎಲ್ ಪಂದ್ಯಗಳು ನಡೆಯುವ ತಾಣಗಳಲ್ಲಿ ಇರುವ ಆಟಗಾರರ ಮನೆಗಳಿಂದ ಅಥವಾ ಅವರ ಕುಟುಂಬಸ್ಥರ ಮನೆಗಳಿಂದ ಬರುವ ಆಹಾರಗಳಿಗೂ ಅನ್ವಯವಾಗುತ್ತದೆ. ಕೊರೊನಾ ವೈರಸ್‌ಅನ್ನು ಬಯೋಬಬಲ್‌ನ ಒಳಗೆ ಬಿಡದಂತೆ ತಡೆಯಲು ಬಿಸಿಸಿಐ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇದರ ಜೊತೆಗೆ ಐಪಿಎಲ್‌ ಆಟಗಾರರ ಕೊರೊನಾ ಪರೀಕ್ಷೆಗಳನ್ನು ಕೂಡ ಹೆಚ್ಚಳಗೊಳಿಸಲಾಗಿದೆ. ಈವರೆಗೆ ಐದು ದಿನಗಳಿಗೆ ಒಂದು ಕೊರೊನಾ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದರೆ ಅದನ್ನು ಈಗ ಪ್ರತಿ ಎರಡು ದಿನಗಳಿಗೊಮ್ಮೆ ನಡೆಸಲಾಗುತ್ತದೆ ಎಂಬ ಮಾಹಿತಿ ದೊರೆತಿದೆ.

Story first published: Wednesday, April 28, 2021, 17:09 [IST]
Other articles published on Apr 28, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+