For Quick Alerts
ALLOW NOTIFICATIONS  
For Daily Alerts
 

ಕಿಶನ್-ಸೂರ್ಯಕುಮಾರ್ ಅಬ್ಬರ, ಹೈದರಾಬಾದ್ ವಿರುದ್ಧ ಮುಂಬೈಗೆ ಜಯ

IPL 2021: Sunrisers Hyderabad vs Mumbai Indians, 55th Match, Report

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 8) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 55ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 42 ರನ್ ಜಯ ಗಳಿಸಿದೆ. ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ಮುಂಬೈ ಸುಲಭ ಜಯ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾ 18, ಇಶಾನ್ ಕಿಶನ್ 84 (32 ಎಸೆತ), ಸೂರ್ಯಕುಮಾರ್ ಯಾದವ್ 82 (40), ಹಾರ್ದಿಕ್ ಪಾಂಡ್ಯ 10, ಕೀರನ್ ಪೊಲಾರ್ಡ್ 13, ಕೃನಾಲ್ ಪಾಂಡ್ಯ 9, ಜೇಮ್ಸ್ ನೀಶಮ್ 0, ನಾಥನ್ ಕೌಲ್ಟರ್-ನೈಲ್ 3, ಜಸ್ಪ್ರೀತ್ ಬೂಮ್ರಾ 5 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 235 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್, ಜೇಸನ್ ರಾಯ್ 34, ಅಭಿಷೇಕ್ ಶರ್ಮಾ 33, ಮನೀಶ್ ಪಾಂಡೆ 69, ಪ್ರಿಯಂ ಗಾರ್ಗ್ 29, ಅಬ್ದುಲ್ ಸಮದ್ 2, ವೃದ್ಧಿಮಾನ್ ಸಹಾ 2, ಜೇಸನ್ ಹೋಲ್ಡರ್ 1, ರಶೀದ್ ಖಾನ್ 9, ಮೊಹಮ್ಮದ್ ನಬಿ 3 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್‌ ಕಳೆದು 193 ರನ್ ಬಾರಿಸಿ ಶರಣಾಯಿತು.

ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್‌ನ ಜೈಸನ್ ಹೋಲ್ಡರ್ 4, ಉಮ್ರಾನ್ ಮಲಿಕ್ 1, ರಶೀದ್ ಖಾನ್ 2, ಅಭಿಷೇಕ್ ಶರ್ಮಾ 2 ವಿಕೆಟ್‌ನಿಂದ ಗಮನ ಸೆಳೆದರೆ, ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ಮುಂಬೈಯ ಟ್ರೆಂಟ್ ಬೌಲ್ಟ್ 1, ಜಸ್‌ಪ್ರೀತ್‌ ಬೂಮ್ರಾ 2, ಪಿಯೂಷ್ ಚಾವ್ಲಾ 1, ನೇಥನ್ ಕೌಲ್ಟರ್ ನೈಲ್ 2, ಜೇಮ್ಸ್ ನೀಶನ್ 2 ವಿಕೆಟ್ ಪಡೆದರು.

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI
ರೋಹಿತ್ ಶರ್ಮಾ (ಸಿ), ಇಶಾನ್ ಕಿಶನ್ (ವಿಕೆ), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ಜಸ್ಪ್ರೀತ್ ಬೂಮ್ರಾ, ಪಿಯೂಷ್ ಚಾವ್ಲಾ, ಟ್ರೆಂಟ್ ಬೌಲ್ಟ್.
ಬೆಂಚ್: ಕ್ವಿಂಟನ್ ಡಿ ಕಾಕ್, ಆಡಮ್ ಮಿಲ್ನೆ, ರಾಹುಲ್ ಚಹಾರ್, ಆದಿತ್ಯ ತಾರೆ, ಧವಳ್ ಕುಲಕರ್ಣಿ, ಕ್ರಿಸ್ ಲಿನ್, ರೋಶ್ ಕಲರಿಯಾ, ಅನ್ಮೋಲ್ ಪ್ರೀತ್ ಸಿಂಗ್, ಅನುಕೂಲ್ ರಾಯ್, ಮಾರ್ಕೊ ಜಾನ್ಸೆನ್, ಯುಧ್ವೀರ್ ಸಿಂಗ್, ಸೌರಭ್ ತಿವಾರಿ, ಜಯಂತ್ ಯಾದವ್.

ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI
ಜೇಸನ್ ರಾಯ್, ಅಭಿಷೇಕ್ ಶರ್ಮಾ, ಮನೀಶ್ ಪಾಂಡೆ (ಸಿ), ಪ್ರಿಯಂ ಗಾರ್ಗ್, ಅಬ್ದುಲ್ ಸಮದ್, ವೃದ್ಧಿಮಾನ್ ಸಹಾ (w), ಜೇಸನ್ ಹೋಲ್ಡರ್, ರಶೀದ್ ಖಾನ್, ಮೊಹಮ್ಮದ್ ನಬಿ, ಉಮ್ರಾನ್ ಮಲಿಕ್, ಸಿದ್ದಾರ್ಥ್ ಕೌಲ್.
ಬೆಂಚ್: ಶ್ರೀವತ್ಸ್ ಗೋಸ್ವಾಮಿ, ಕೇದಾರ್ ಜಾಧವ್, ಜಗದೀಶ ಸುಚಿತ್, ಶಹಬಾಜ್ ನದೀಮ್, ಖಲೀಲ್ ಅಹಮದ್, ಸಂದೀಪ್ ಶರ್ಮಾ, ವಿರಾಟ್ ಸಿಂಗ್, ಡೇವಿಡ್ ವಾರ್ನರ್, ಬೇಸಿಲ್ ತಂಪಿ, ಮುಜೀಬ್ ಉರ್ ರೆಹಮಾನ್, ಕೇನ್ ವಿಲಿಯಮ್ಸನ್, ಭುವನೇಶ್ವರ್ ಕುಮಾರ್.

Story first published: Saturday, October 9, 2021, 10:44 [IST]
Other articles published on Oct 9, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+