Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಮುಂಬೈಗೆ ಜಯ, ಹೈದರಾಬಾದ್‌ಗೆ ಸತತ 3ನೇ ಸೋಲು

IPL 2021: Sunrisers Hyderabad vs Mumbai Indians, 9th Match, Report

ಚೆನ್ನೈ: ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶನಿವಾರ (ಏಪ್ರಿಲ್ 17) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 9ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ 13 ರನ್ ಜಯ ಗಳಿಸಿದೆ. ರಾಹುಲ್ ಚಾಹರ್, ಟ್ರೆಂಟ್‌ ಬೌಲ್ಟ್ ಬೌಲಿಂಗ್, ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್‌ ಬಲದೊಂದಿಗೆ ಮುಂಬೈ ಟೂರ್ನಿಯ 2ನೇ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಮುಂಬೈ ಇಂಡಿಯನ್ಸ್‌ ತಂಡ, ಕ್ವಿಂಟನ್ ಡಿ ಕಾಕ್ 40 (39), ರೋಹಿತ್ ಶರ್ಮಾ 32 (25), ಸೂರ್ಯಕುಮಾರ್ ಯಾದವ್ 10, ಇಶಾನ್ ಕಿಶನ್ 12, ಕೀರನ್ ಪೊಲಾರ್ಡ್ 35 (22), ಹಾರ್ದಿಕ್ ಪಾಂಡ್ಯ 7 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 150 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್, ಡೇವಿಡ್ ವಾರ್ನರ್ 36, ಜಾನಿ ಬೇರ್ಸ್ಟೋವ್ 43, ವಿರಾಟ್ ಸಿಂಗ್ 11, ವಿಜಯ್ ಶಂಕರ್ 28, ಅಬ್ದುಲ್ ಸಮದ್ 7 ರನ್‌ ಸೇರ್ಪಡೆಯೊಂದಿಗೆ 19.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 137 ರನ್ ಗಳಿಸಿತು. ಹೈದರಾಬಾದ್‌ ತಂಡ ಈವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಮೂರರಲ್ಲೂ ಸೋಲು ಕಂಡಿದೆ.

ಮುಂಬೈ ಇನ್ನಿಂಗ್ಸ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್‌ನ ಖಲೀಲ್ ಅಹ್ಮದ್ 1, ಮುಜೀಬ್ ಉರ್ ರಹ್ಮಾನ್ 2, ವಿಜಯ್ ಶಂಕರ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರೆ, ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ಮುಂಬೈಯ ಟ್ರೆಂಟ್‌ ಬೌಲ್ಟ್‌ 3, ರಾಹುಲ್ ಚಾಹರ್ 3, ಜಸ್‌ಪ್ರೀತ್‌ ಬೂಮ್ರಾ 1, ಕೃನಾಲ್ ಪಾಂಡ್ಯ 1 ವಿಕೆಟ್ ಪಡೆದರು.

Story first published: Sunday, April 18, 2021, 0:24 [IST]
Other articles published on Apr 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+