ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 37ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಕಾದಾಡುತ್ತಿವೆ. ಮೊದಲು ಬ್ಯಾಟಿಂಗ್ ಮಾಡಿರುವ ಪಂಜಾಬ್ ಎದುರಾಳಿಗೆ 126 ರನ್ ಗುರಿ ನೀಡಿದೆ.
IPL 2021 Playoffs: ಪ್ಲೇಆಫ್ ಪ್ರವೇಶಿಸಲು ಎಲ್ಲಾ 8 ತಂಡಗಳು ಇಷ್ಟು ಪಂದ್ಯಗಳಲ್ಲಿ ಜಯ ಸಾಧಿಸಲೇಬೇಕಾಗಿದೆ!
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್, ಕೆಎಲ್ ರಾಹುಲ್ 21, ಮಯಾಂಕ್ ಅಗರ್ವಾಲ್ 5, ಕ್ರಿಸ್ ಗೇಲ್ 14, ಐಡೆನ್ ಮಾರ್ಕ್ರಮ್ 27, ನಿಕೋಲಸ್ ಪೂರನ್ 8, ದೀಪಕ್ ಹೂಡಾ 13, ಹರ್ಪ್ರೀತ್ ಬ್ರಾರ್ 18, ನಾಥನ್ ಎಲ್ಲಿಸ್ 12 ರನ್ನೊಂದಿಗೆ 20 ಓವರ್ಗೆ 7 ವಿಕೆಟ್ ಕಳೆದು 125 ರನ್ ಗಳಿಸಿತು.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI
ಕೆಎಲ್ ರಾಹುಲ್ (ನಾಯಕ, ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಹರಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ನಾಥನ್ ಎಲ್ಲಿಸ್
ಸನ್ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI
ಡೇವಿಡ್ ವಾರ್ನರ್, ವೃದ್ಧಿಮಾನ್ ಸಹಾ (w), ಕೇನ್ ವಿಲಿಯಮ್ಸನ್ (c), ಮನೀಶ್ ಪಾಂಡೆ, ಕೇದಾರ್ ಜಾಧವ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್.