
ಚೆನ್ನೈ: ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್, ಶಹಬಾಝ್ ಅಹ್ಮದ್ ಬೌಲಿಂಗ್ ನೆರವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯ ಎರಡನೇ ಗೆಲುವು ದಾಖಲಿಸಿದೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 14) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 6ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ರೋಚಕ 6 ರನ್ ಜಯ ಗಳಿಸಿದೆ.
ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗೆ 8 ವಿಕೆಟ್ ಕಳೆದು 149 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 143 ರನ್ ಗಳಿಸಿ ತಲೆ ಬಾಗಿತು.
ಸನ್ ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂದ್ಯದ ಹೈಲೈಟ್ಸ್ ಇಲ್ಲಿದೆ
* ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗೆ 8 ವಿಕೆಟ್ ಕಳೆದು 149 ರನ್ ಗಳಿಸಿತ್ತು.
* ಆರ್‌ಸಿಬಿ ಪರ ರನ್ ಕೊಡುಗೆ: ನಾಯಕ ವಿರಾಟ್ ಕೊಹ್ಲಿ 33, ದೇವದತ್ ಪಡಿಕ್ಕಲ್ 11, ಸಹಬಾಝ್ ಅಹ್ಮದ್ 14, ಗ್ಲೆನ್ ಮ್ಯಾಕ್ಸ್‌ವೆಲ್ 59 (41), ವಾಷಿಂಗ್ಟನ್ ಸುಂದರ್ 8, ಕೈಲ್ ಜೇಮಿಸನ್ 12 ರನ್.
* ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 143 ರನ್ ಗಳಿಸಿತು.
* ಎಸ್‌ಆರ್‌ಎಚ್ ಪರ ರನ್ ಗಳಿಸಿದವರು: ನಾಯಕ ಡೇವಿಡ್ ವಾರ್ನರ್ 54 (37), ಮನೀಶ್ ಪಾಂಡೆ 38, ಜೇಸನ್ ಹೋಲ್ಡರ್ 4, ರಶೀದ್ ಖಾನ್ 17 ರನ್
* ಆರ್‌ಸಿಬಿ ಪರ ಬೆಸ್ಟ್ ಬೌಲಿಂಗ್: ಆರ್‌ಸಿಬಿಯ ಮೊಹಮ್ಮದ್ ಸಿರಾಜ್ 2, ಶಹಬಾಝ್ ಅಹ್ಮದ್ 3, ಕೈಲ್ ಜೇಮಿಸನ್ 1, ಹರ್ಷಲ್ ಪಟೇಲ್ 2 ವಿಕೆಟ್
* ಹೈದರಾಬಾದ್‌ನಿಂದ ಬೆಸ್ಟ್ ಬೌಲಿಂಗ್: ಹೈದರಾಬಾದ್‌ನ ಜೇಸನ್ ಹೋಲ್ಡರ್ 3, ಶಹಬಾಝ್ ನದೀಮ್ 1, ಭವನೇಶ್ವರ್ ಕುಮಾರ್ 1, ಟಿ ನಟರಾಜನ್ 1, ರಶೀದ್ ಖಾನ್ 2 ವಿಕೆಟ್