Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಹೈದರಾಬಾದ್ ವಿರುದ್ಧ ಬೆಂಗಳೂರಿಗೆ ರೋಚಕ ಜಯ

IPL 2021: Sunrisers Hyderabad vs Royal Challengers Bangalore, Match 6, Report

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 14) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 6ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ 6 ರನ್ ಜಯ ಗಳಿಸಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್, ಶಹಬಾಝ್ ಅಹ್ಮದ್ ಬೌಲಿಂಗ್‌ ನೆರವಿನೊಂದಿಗೆ ಆರ್‌ಸಿಬಿ ಟೂರ್ನಿಯ ಎರಡನೇ ಗೆಲುವು ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಾಯಕ ವಿರಾಟ್ ಕೊಹ್ಲಿ 33, ದೇವದತ್ ಪಡಿಕ್ಕಲ್ 11, ಸಹಬಾಝ್ ಅಹ್ಮದ್ 14, ಗ್ಲೆನ್ ಮ್ಯಾಕ್ಸ್‌ವೆಲ್ 59 (41), ವಾಷಿಂಗ್ಟನ್ ಸುಂದರ್ 8, ಕೈಲ್ ಜೇಮಿಸನ್ 12 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 149 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್‌ನಿಂದ, ನಾಯಕ ಡೇವಿಡ್ ವಾರ್ನರ್ 54 (37), ಮನೀಶ್ ಪಾಂಡೆ 38, ಜೇಸನ್ ಹೋಲ್ಡರ್ 4, ರಶೀದ್ ಖಾನ್ 17 ರನ್ ಸೇರಿಸಿದರು. ಎಸ್‌ಆರ್‌ಎಚ್ 20 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 143 ರನ್ ಗಳಿಸಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್‌ನಲ್ಲಿ ಹೈದರಾಬಾದ್‌ನ ಜೇಸನ್ ಹೋಲ್ಡರ್ 3, ಶಹಬಾಝ್ ನದೀಮ್ 1, ಭವನೇಶ್ವರ್ ಕುಮಾರ್ 1, ಟಿ ನಟರಾಜನ್ 1, ರಶೀದ್ ಖಾನ್ 2 ವಿಕೆಟ್ ಪಡೆದರೆ, ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ಆರ್‌ಸಿಬಿಯ ಮೊಹಮ್ಮದ್ ಸಿರಾಜ್ 2, ಶಹಬಾಝ್ ಅಹ್ಮದ್ 3, ಕೈಲ್ ಜೇಮಿಸನ್ 1, ಹರ್ಷಲ್ ಪಟೇಲ್ 2 ವಿಕೆಟ್‌ನಿಂದ ಗಮನ ಸೆಳೆದರು.

Story first published: Thursday, April 15, 2021, 0:53 [IST]
Other articles published on Apr 15, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+