ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಆಟಗಾರನನ್ನು ಸಿಎಸ್‌ಕೆ ಪ್ಲೇಆಫ್‌ನಲ್ಲಿ ಕಣಕ್ಕಿಳಿಸಲೇಬೇಕು: ಸುನಿಲ್ ಗವಾಸ್ಕರ್

IPL 2021: Suresh Raina should play Qualifier 1 against DC said Sunil Gavaskar

ಈ ಬಾರಿಯ ಐಪಿಎಲ್‌ನಲ್ಲಿ ಟಾಪ್ 2 ತಂಡವಾಗಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಸುತ್ತಿಗೆ ಪ್ರವೇಶ ಪಡೆದಿದೆ. ಟೂರ್ನಿಯ ಆರಂಭದಿಂದಲೇ ಅದ್ಭುತ ಪ್ರದರ್ಶನ ನೀಡಲು ಆರಂಭಿಸಿದ ಧೊನಿ ಪಡೆ ಟೂರ್ನು ಅಂತ್ಯಕ್ಕಾಗುವ ವೇಳೆ ಕಳೆಗುಂದಿದಂತೆ ಭಾಸವಾಗಿತ್ತು. ಅದರಲ್ಲೂ ಕೆಲ ಪ್ರಮುಖ ಆಟಗಾರರು ಸತತವಾಗಿ ವೈಫಲ್ಯವನ್ನು ಅನುಭವಿಸಿದ್ದು ತಂಡಕ್ಕೆ ಹಿನ್ನಡೆಯಾಯ್ತು. ಈ ಮಧ್ಯೆ ಅನುಭವಿ ಸುರೇಶ್ ರೈನಾರನ್ನು ಗಾಯದ ಕಾರಣ ನೀಡಿ ಆಡುವ ಬಳಗದಿಂದ ಹೊರಗಿಡಲಾಗಿತ್ತು.

ಈ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್ ಪಂದ್ಯದಲ್ಲಿ ಅನುಭವಿ ಸುರೇಶ್ ರೈನಾ ಅವರನ್ನು ಆಡುವ ಬಳಗದಲ್ಲಿ ಸೇರ್ಪಡೆಗೊಳಿಸಬೇಕು ಎಂದು ಸುನಿಲ್ ಗವಾಸ್ಕರ್ ಒತ್ತಾಯಿಸಿದ್ದಾರೆ. ಸುರೇಶ್ ರೈನಾ ಓರ್ವ ಮ್ಯಾಚ್ ವಿನ್ನರ್ ಎಂದು ಗವಾಸ್ಕರ್ ಹೇಳಿದ್ದಾರೆ. "ಖಂಡಿತಾ ಸುರೇಶ್ ರೈನಾ ಕಳೆದ ಒಂದೆರಡು ವರ್ಷಗಳಲ್ಲಿ ವೇಗದ ಬೌಲಿಂಗ್ ಎದುರು ಹಿನ್ನಡೆಸ ಅನುಭವಿಸಿದ್ದಾರೆ. ಆದರೆ ಪಂದ್ಯದ ಗತಿಯನ್ನೇ ಬದಲಾಯಿಸುವ ಸಾಮರ್ಥ್ಯ ಅವರಲ್ಲಿ ಇದೆ" ಎಂದಿದ್ದಾರೆ ಸುರೇಶ್ ರೈನಾ.

ನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡಿಲ್ಲ: ಆರ್‌ಸಿಬಿ ಪ್ರದರ್ಶನದ ಬಗ್ಗೆ ಎಬಿಡಿನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡಿಲ್ಲ: ಆರ್‌ಸಿಬಿ ಪ್ರದರ್ಶನದ ಬಗ್ಗೆ ಎಬಿಡಿ

ಈ ಬಾರಿಯ ಆವೃತ್ತಿಯಲ್ಲಿಯೂ ಸುರೇಶ್ ರೈನಾ ಬ್ಯಾಟ್‌ನಿಂದ ಉತ್ತಮ ರನ್ ಹರಿದು ಬಂದಿಲ್ಲ. ಅದರಲ್ಲೂ ಅಂತಿಮ ಎರಡು ಪಂದ್ಯಗಳಲ್ಲಿ ರೈನಾ ಆಡುವ ಬಳಗದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ರೈನಾ ಬದಲಿಗೆ ಕಣಕ್ಕಿಳಿದ ರಾಬಿನ್ ಉತ್ತಪ್ಪ ಕೂಡ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಲು ವಿಫಲವಾದರು. ಈ ಕಾರಣದಿಂದಾಗಿ ಸುರೇಶ್ ರೈನಾಗೆ ಆಡುವ ಬಳಗದಲ್ಲಿ ಅವಕಾಶವನ್ನು ನೀಡಬೇಕಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಸುನಿಲ್ ಗವಾಸ್ಕರ್ ಅಂಕಣವಿಂದರಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. "ಕ್ವಾಲಿಫೈಯರ್ 1ರಲ್ಲಿ ಸುರೇಶ್ ರೈನಾ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡರೆ ಖಂಡಿತವಾಗಿಯೂ ಡೆಲ್ಲಿ ಬೌಲರ್‌ಗಳಾದ ಅವ್ರಿಚ್ ನಾರ್ಕಿಯಾ, ಕಗಿಸೋ ರಬಡಾ ಹಾಗೂ ಆವೇಶ್ ಖಾನ್ ಅವರನ್ನು ಕಠಿಣ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಆದರೆ ಅದು ಪರವಾಗಿಲ್ಲ, ಇಡೀ ತಂಡವನ್ನು ಫೈನಲ್ ಹಂತಕ್ಕೇರಿಸುವ ಸಾಮರ್ಥ್ಯ ಸುರೇಶ್ ರೈನಾ ಅವರಲ್ಲಿ ಇದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಎಂಐ ಪ್ಲೇ ಆಫ್ಸ್‌ ಅವಕಾಶ ಮುಗಿದ ಬಳಿಕ ಭಾವನಾತ್ಮಕ ಪೋಸ್ಟ್ ಹಾಕಿದ ರೋಹಿತ್ಎಂಐ ಪ್ಲೇ ಆಫ್ಸ್‌ ಅವಕಾಶ ಮುಗಿದ ಬಳಿಕ ಭಾವನಾತ್ಮಕ ಪೋಸ್ಟ್ ಹಾಕಿದ ರೋಹಿತ್

ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಳೆದ ನಾಲ್ಕು ಮುಖಾಮುಖಿಯಲ್ಲಿಯೂ ಸೋಲು ಕಂಡಿದ್ದಾರೆ. 2019ರ ಪ್ಲೇಆಫ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊನೆಯ ಬಾರಿ ಡೆಲ್ಲಿ ವಿರುದ್ಧ ಗೆಲುವು ಸಾಧಿಸಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಈ ಗೆಲುವಿನ ಸರಪಳಿಯನ್ನು ತುಂಡರಿಸಲು ಚೆನ್ನೈ ಸೂಪರ್ ಕಿಂಗ್ಸ್ ಇಂದು ಸರ್ವ ಪ್ರಯತ್ನವನ್ನು ನಡೆಸಲಿದೆ.

ಡೆಲ್ಲಿ ಬಳಿ ತಿರುಗು ಬೀಳುವ ಸಾಮರ್ಥ್ಯವಿದೆ: ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿನ ಸೋಲಿನ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ ಗವಾಸ್ಕರ್. " ಡೆಲ್ಲಿ ಹಾಗೂ ಬೆಂಗಳೂರು ಈ ಎರಡು ತಮಡಗಳು ಅದ್ಭುತವಾದ ಫಾರ್ಮ್‌ನಲ್ಲಿವೆ. ಬೆಂಗಳೂರು ವಿರುದ್ಧದ ಅಂತಿಮ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಡೆಲ್ಲಿ ಸೋಲು ಕಂಡರೂ ಬ್ಯಾಟಿಂಗ್ ಹಾಗೂ ಬೌಲಿಂಗ್‌ನ ಸಾಮರ್ಥ್ಯದೊಂದಿಗೆ ಅವರಲ್ಲಿ ತಿರುಗಿ ಬೀಳುವ ಅದ್ಭುತವಾದ ಸಾಮರ್ಥ್ಯವಿದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಎಸ್‌ಆರ್‌ಎಚ್ ವೇಗಿ ಉಮ್ರಾನ್ ಟಿ20 ವಿಶ್ವಕಪ್‌ಗೆ ನೆಟ್ ಬೌಲರ್ ಆಗಿ ಆಯ್ಕೆ?!ಎಸ್‌ಆರ್‌ಎಚ್ ವೇಗಿ ಉಮ್ರಾನ್ ಟಿ20 ವಿಶ್ವಕಪ್‌ಗೆ ನೆಟ್ ಬೌಲರ್ ಆಗಿ ಆಯ್ಕೆ?!

ಪಂತ್ ಬಗ್ಗೆ ಪ್ರಶಂಸೆಯ ಮಾತನಾಡಿದ ಗವಾಸ್ಕರ್: ಭಾರತೀಯ ಕ್ರಿಕೆಟ್‌ನ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. "ರಿಷಬ್ ಪಂತ್ ಓರ್ವ ತುಂಬಾ ಸಕಾರಾತ್ಮಕ ಮನೋಭಾವ ಹೊಂದಿರುವ ವ್ಯಕ್ತಿ. ಅವರೀಗ ತಂಡ ರನ್‌ ರಕ್ಷಿಸಿಕೊಳ್ಳುವ ಸಂದರ್ಭದಲ್ಲಿಯೂ ಯಾವ ರೀತಿಯಾಗಿ ತಂತ್ರಗಾರಿಕೆ ಮಾಡಿಕೊಳ್ಳಬೇಕು ಎಂಬುದನ್ನು ಅರ್ಥ ಮಾಡಿಕೊಂಡಿರುತ್ತಾರೆ. ಇಬ್ಬರು ಉತ್ತಮ ಬೌಲರ್‌ಗಳಿಗೆ ಅಂತಿಮ ಎರಡ ಓವರ್‌ಗಳನ್ನು ನೀಡುವುದು ಉತ್ತಮ" ಎಂದು ತಮ್ಮ ಅಂಕಣದಲ್ಲಿ ಸುನಿಲ್ ಗವಾಸ್ಕರ್ ಉಲ್ಲೇಖಿಸಿದ್ದಾರೆ.

ಡೆಲಿ ಕ್ಯಾಪಿಟಲ್ಸ್ ಸ್ಕ್ವಾಡ್: ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಶಿಮ್ರಾನ್ ಹೆಟ್ಮೇರ್, ರಿಪಾಲ್ ಪಟೇಲ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಚ್ ನಾರ್ಕಿಯಾ, ವಿಷ್ಣು ವಿನೋದ್, ಕುಲ್ವಂತ್ ಖೆಜ್ರೋಲಿಯಾ, ಲಲಿತ್ ಯಾದವ್, ಪ್ರವೀಣ್ ದುಬೆ, ಬೆನ್ ಡ್ವಾರಶುಯಿಸ್, ಟಾಮ್ ಕರನ್, ಲುಕ್ಮನ್ ಮೇರಿವಾಲಾ, ಮಾರ್ಕಸ್ ಸ್ಟೊಯಿನಿಸ್, ಸ್ಯಾಮ್ ಬಿಲ್ಲಿಂಗ್ಸ್, ಸ್ಟೀವನ್ ಸ್ಮಿತ್, ಉಮೇಶ್ ಯಾದವ್, ಅಮಿತ್ ಮಿಶ್ರಾ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ

ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್: ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಜೋಶ್ ಹಜಲ್‌ವುಡ್, ಸುರೇಶ್ ರೈನಾ, ಇಮ್ರಾನ್ ತಾಹಿರ್, ಜೇಸನ್ ಬೆಹ್ರೆಂಡಾರ್ಫ್, ಕೃಷ್ಣಪ್ಪ ಗೌತಮ್, ಲುಂಗಿ ಎನ್‌ಗಿಡಿ, ಮಿಚೆಲ್ ಸಾಂಟ್ನರ್, ರವಿಶ್ರೀನಿವಾಸನ್, ಸಾಯಿ ಕಿಶೋರ್, ಹರಿ ನಿಶಾಂತ್, ಎನ್ ಜಗದೀಶನ್, ಕೆಎಂ ಆಸಿಫ್, ಹರಿಶಂಕರ್ ರೆಡ್ಡಿ, ಡೊಮಿನಿಕ್ ಡ್ರೇಕ್ಸ್, ಭಗತ್ ವರ್ಮ, ಕರ್ಣ್ ಶರ್ಮಾ, ಚೇತೇಶ್ವರ ಪೂಜಾರ

Story first published: Sunday, October 10, 2021, 17:13 [IST]
Other articles published on Oct 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X