ಕೊರೊನಾ ಕಂಟಕ, 2021ರ ಐಪಿಎಲ್ ರದ್ದುಗೊಳಿಸಿದ ಬಿಸಿಸಿಐ!

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿ ರದ್ದಾಗಿದೆ. ಐಪಿಎಲ್‌ನ ನಾಲ್ಕು ಫ್ರಾಂಚೈಸಿಗಳಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 14ನೇ ವೃತ್ತಿಯ ಐಪಿಎಲ್ ಅನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ರದ್ದುಗೊಳಿಸಿದೆ. 2020ರ ಐಪಿಎಲ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ಭಾರತದಲ್ಲೇ ನಡೆಸಲುದ್ದೇಶಿಸಿದ್ದ ಐಪಿಎಲ್ ಟೂರ್ಣಗೊಳ್ಳದೆ ಕೊನೆಗೊಂಡಿದೆ.
ಎಎನ್‌ಐ ನೀಡಿರುವ ಮಾಹಿತಿ ಪ್ರಕಾರ 2021ರ ಐಪಿಎಲ್ ವೃತ್ತಿ 29ನೇ ಪಂದ್ಯಕ್ಕೆ ಕೊನೆಗೊಂಡಿದೆ. ಭಾರತದಲ್ಲಿ ಕೊರೊನಾ ದ್ವಿತೀಯ ಅಲೆ ಸಂಕಷ್ಟ ಸೃಷ್ಟಿಸಿದ್ದು, ಐಪಿಎಲ್ ಬಯೋ ಬಬಲ್ ಒಳಗೂ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿವೆ. ಹೀಗಾಗಿ ನಗದು ಶ್ರೀಮಂತ ಟೂರ್ನಿ ಐಪಿಎಲ್ 2021ರ ಸೀಸನ್ ರದ್ದುಕೊಂಡಿದೆ.

ಕೆಕೆಆರ್‌ನಲ್ಲಿ ಸೋಂಕು ಪತ್ತೆ
ಟೂರ್ನಿ ಆರಂಭಗೊಂಡ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್‌ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಮೇ 3ರಂದು ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಮುಂದೂಡಲ್ಪಟ್ಟಿತ್ತು.

ಮತ್ತೆ 3 ಫ್ರಾಂಚೈಸಿಗಳಲ್ಲಿ ವೈರಸ್
ಕೋಲ್ಕತ್ತಾ ನೈಟ್ ರೈಡರ್ಸ್ ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿಗೂ ಕೋವಿಡ್-19 ಇರುವುದು ಕಂಡು ಬಂದಿತ್ತು. ಅದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಪಿನ್ನರ್ ಅಮಿತ್ ಮಿಶ್ರಾ ಮತ್ತು ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹಗೂ ಕೊರೊನಾ ಇರುವುದು ಖಾತ್ರಿಯಾಗಿತ್ತು.

ಈ ಬಾರಿಯ ಐಪಿಎಲ್ ಮತ್ತೆ ನಡೆಯುತ್ತಾ?!
ಐಪಿಎಲ್ ಆರಂಭಗೊಂಡ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಾರಿಯ ಐಪಿಎಲ್ ರದ್ದಾಗಿರುವುದನ್ನು ಖಾತರಿಪಡಿಸಿದ್ದಾರೆ. ಈ ಬಾರಿಯ ಐಪಿಎಲ್ ಸದ್ಯಕ್ಕಂತೂ ರದ್ದಾಗಿದೆ. ಈ ಸಾರಿ ಇನ್ನುಳಿದ ಪಂದ್ಯಗಳು ನಡೆಯೋದೇ ಇಲ್ಲವಾ ಅಥವಾ, ಸ್ವಲ್ಪ ದಿನಗಳ ಬಳಿಕ ಮುಂದುವರೆಯಲಿದೆಯಾ ಅನ್ನೋದು ಇನ್ನೂ ಸ್ಪಷ್ಟಗೊಂಡಿಲ್ಲ. ಆದರೆ ಮುಂದಿನ ಸೂಚನೆಯವರೆಗೂ ಐಪಿಎಲ್ ರದ್ದು ಎಂದಷ್ಟೇ ಬಿಸಿಸಿಐ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications