ಐಪಿಎಲ್ 2021: ಅತಿ ಹೆಚ್ಚು ಬೆಲೆಗೆ ಸೇಲ್ ಆಗಬಲ್ಲ 5 ಕ್ರಿಕೆಟರ್ಸ್ ಯಾರು?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಗಾಗಿ ಫೆಬ್ರವರಿ 18ರಂದು ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಹರಾಜಿಗೆ ಸಿದ್ಧವಾಗಿರುವ ಆಟಗಾರರ ಅಂತಿಮ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫೆ.11ರಂದು ಪ್ರಕಟಿಸಿದೆ. ಅತಿ ಹೆಚ್ಚು ಬೆಲೆಗೆ ಮಾರಾಟವಾಗಬಲ್ಲ 5 ಕ್ರಿಕೆಟರ್ ಗಳ ಬಗ್ಗೆ ಮಾಹಿತಿ ಇಲ್ಲಿದೆ..
ಫೆಬ್ರವರಿ 18ರಂದು ಮಧ್ಯಾಹ್ನ 3 ಗಂಟೆಗೆ ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 8 ಫ್ರಾಂಚೈಸಿಗಳು ವಿವಿಧ ಸ್ಲಾಟ್ ಗಳಲ್ಲಿರುವ ಆಟಗಾರರನ್ನು ಆಯ್ಕೆ ಮಾಡಲಿವೆ.
2 ಕೋಟಿ ರು ಮೂಲ ಬೆಲೆಯಲ್ಲಿ ಹರ್ಭಜನ್ ಸಿಂಗ್, ಕೇದಾರ್ ಜಾಧವ್, ಗ್ಲೆನ್ ಮ್ಯಾಕ್ಸ್ ವೆಲ್, ಸ್ಟೀವ್ ಸ್ಮಿತ್, ಶಕೀಬ್ ಅಲ್ ಹಸನ್, ಮೋಯಿನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾನ್ ಪ್ಲಂಕೆಟ್, ಜಾಸನ್ ರಾಯ್ ಹಾಗೂ ಮಾರ್ಕ್ ವುಡ್.
1.5 ಕೋಟಿ ರು ಮೂಲ ಬೆಲೆಯಲ್ಲಿ 12 ಆಟಗಾರರಿದ್ದಾರೆ.1 ಕೋಟಿ ರು ಮೂಲ ಬೆಲೆಯಲ್ಲಿ ಹನುಮ ವಿಹಾರಿ, ಉಮೇಶ್ ಯಾದವ್ ಸೇರಿದಂತೆ 11 ಆಟಗಾರರಿದ್ದಾರೆ.

1. ಡೇವಿಡ್ ಮಲಾನ್ (ಮೂಲ ಬೆಲೆ 1.5 ಕೋಟಿ ರು)
ಇಂಗ್ಲೆಂಡ್ ಆಟಗಾರ ಡೇವಿಡ್ ಮಲಾನ್ ಅವರು ಟಿ20ಐ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇಲ್ಲಿ ತನಕ ಐಪಿಎಲ್ ನಲ್ಲಿ ಆಡದಿರುವುದು ಅಚ್ಚರಿಯಾದರೂ ಸತ್ಯ. 50-60 ಎಸೆತಗಳಲ್ಲೇ ಶತಕ ಸಿಡಿಸಬಲ್ಲ ಸ್ಫೋಟಕ ಬ್ಯಾಟ್ಸ್ ಮನ್ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಕಣ್ಣಿಟ್ಟಿದ್ದು, ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ಬದಲಿಗೆ ಮಲಾನ್ ಅವರನ್ನು ಆರಂಭಿಕನಾಗಿ ಆಯ್ಕೆ ಮಾಡಲು ಮುಂದಾಗಿದೆ. ಇದೇ ರೀತಿ ಓಪನರ್ ಸಮಸ್ಯೆ ಇರುವ ಇತರೆ ತಂಡಗಳು ಕೂಡಾ ಮಲಾನ್ ಗಾಗಿ ಬಿಡ್ ಮಾಡಲು ಸಿದ್ಧವಾಗಿವೆ. ಹೀಗಾಗಿ, ಮಲಾನ್ ಮೌಲ್ಯ ಹೆಚ್ಚಾಗಿದೆ.

2. ಅಲೆಕ್ಸ್ ಹೇಲ್ಸ್ (ಮೂಲ ಬೆಲೆ 1.5 ಕೋಟಿ ರು)
ಇಂಗ್ಲೆಂಡ್ ಬಲಗೈ ಬಾಟ್ಸ್ ಮನ್ ಅಲೆಕ್ಸ್ ಹೇಲ್ಸ್ ಅವರು ಬಿಗ್ ಬ್ಯಾಶ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 161.60 ಸ್ಟ್ರೈಕ್ ರೇಟ್ ನಂತೆ 543ರನ್ ಕಲೆ ಹಾಕಿದ್ದರು. ಪವರ್ ಪ್ಲೇನಲ್ಲಿ ಹೆಚ್ಚು ರನ್ ಗಳಿಸಬಲ್ಲ ಚಾಣಕ್ಯತನ ಹೊಂದಿರುವ ಹೇಲ್ಸ್ ಅವರು ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಯಾವುದೇ ತಂಡಕ್ಕಾದರೂ ಆಧಾರವಾಗಬಲ್ಲರು. ಹೀಗಾಗಿ, ವಿವಿಧ ತಂಡಗಳು ಹೇಲ್ಸ್ ಗಾಗಿ ಬಿಡ್ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ.

3. ಅಲೆಕ್ಸ್ ಕ್ಯಾರಿ (ಮೂಲ ಬೆಲೆ 1.5 ಕೋಟಿ ರು)
ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಅಲೆಕ್ಸ್ ಕ್ಯಾರಿ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕೈ ಬಿಟ್ಟಿದೆ. ಐಪಿಎಲ್ 2020ರಲ್ಲಿ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಬಿಬಿಎಲ್ ನಲ್ಲಿ ಇತ್ತೀಚೆಗೆ ಬ್ರಿಸ್ಬೇನ್ ಹೀಟ್ ವಿರುದ್ಧ 62 ಎಸೆತಗಳಲ್ಲಿ ಶತಕ ಬಾರಿಸಿರುವ ಎಡಗೈ ಬ್ಯಾಟ್ಸ್ ಮನ್ ಗಾಗಿ ಆರ್ ಸಿಬಿ ಕೂಡಾ ಬಿಡ್ ಸಲ್ಲಿಸುವ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕದಲ್ಲಿ ಆಧಾರವಾಗಬಲ್ಲ ಬ್ಯಾಟ್ಸ್ ಮನ್ ಆಗಿ ಕ್ಯಾರಿ ಮಿಂಚುತ್ತಿದ್ದಾರೆ.

4. ಮೊಹಮ್ಮದ್ ಅಜರುದ್ದೀನ್ (ಮೂಲ ಬೆಲೆ 20 ಲಕ್ಷ ರು)'
ಕೇರಳ ಬ್ಯಾಟ್ಸ್ ಮನ್ ಮೊಹಮ್ಮದ್ ಅಜರುದ್ದೀನ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 37 ಎಸೆತಗಳಲ್ಲಿ ಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಮೂಲ ಬೆಲೆ ಕಡಿಮೆ ಇರುವುದರಿಂದ ಹೆಚ್ಚಿನ ತಂಡಗಳು ಬಿಡ್ ಮಾಡುವ ಸಾಧ್ಯತೆಯಿದೆ. ಓಪನಿಂಗ್ ಬ್ಯಾಟ್ಸ್ ಮನ್ ಗಾಗಿ ಹುಡುಕಾಟ ನಡೆಸುತ್ತಿರುವ ತಂಡಗಳಿಗೆ ಅಜರುದ್ದೀನ್ ಮೊದಲ ಆಯ್ಕೆಯಾಗುವ ನಿರೀಕ್ಷೆಯಿದೆ.

5. ಶಾರುಖ್ ಖಾನ್ (ಮೂಲ ಬೆಲೆ 20 ಲಕ್ಷ ರು)
ತಮಿಳುನಾಡಿನ ಬ್ಯಾಟ್ಸ್ ಮನ್ ಶಾರುಖ್ ಖಾನ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಅಂತಿಮ ಹಣಾಹಣಿಯಲ್ಲಿ 7 ಎಸೆತಗಳಲ್ಲಿ 18 ರನ್ ಚೆಚ್ಚಿ ತಂಡದ ಗೆಲುವಿಗೆ ಕಾರಣರಾದರು. ಸ್ಲ್ಯಾಗ್ ಓವರ್ ಗಳಲ್ಲಿ ಹೆಚ್ಚಿನ ರನ್ ಗಳಿಸುವಲ್ಲಿ ಶಾರುಖ್ ಯಶಸ್ವಿಯಾಗಿದ್ದಾರೆ. ಚೆನ್ನೈ ತಂಡ ಶಾರುಖ್ ಖರೀದಿಸಲು ಉತ್ಸುಕವಾಗಿದೆ. ಆದರೆ, ಇತರೆ ತಂಡಗಳು ಕೂಡಾ ಬಿಡ್ ಮಾಡುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications