ರೈನಾ ಸಿಎಸ್‌ಕೆ ಬಿಟ್ಟು ಬೇರೆ ಯಾವುದೇ ತಂಡದಲ್ಲಿದ್ದರೂ ಅವಕಾಶ ಸಿಗುತ್ತಿರಲಿಲ್ಲ ಎಂದ ಮಾಜಿ ಕ್ರಿಕೆಟಿಗ

ಕಳೆದ ವರ್ಷ ಇದೇ ಯುಎಇಯಲ್ಲಿ ನಡೆದಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತೀರಾ ಕಳಪೆ ಪ್ರದರ್ಶನವನ್ನು ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು.
ಆದರೆ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಾಲ್ಕನೇ ಆವೃತ್ತಿಯಲ್ಲಿ ಅಬ್ಬರದ ಪ್ರದರ್ಶನವನ್ನು ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವಿನ ಹಾದಿಗೆ ಮರಳಿದ್ದು ಈಗಾಗಲೇ ಪ್ಲೇಆಫ್ ಸುತ್ತನ್ನು ಪ್ರವೇಶಿಸಿದೆ. ಹೌದು ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇಆಫ್ ಸುತ್ತನ್ನು ಅಧಿಕೃತವಾಗಿ ಪ್ರವೇಶಿಸಿದ ಮೊಟ್ಟ ಮೊದಲ ತಂಡ ಎಂಬ ಕೀರ್ತಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾತ್ರವಾಗಿದೆ. ಟೂರ್ನಿಯಲ್ಲಿ ಇದುವರೆಗೂ 13 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 9 ಪಂದ್ಯಗಳಲ್ಲಿ ಜಯಗಳಿಸಿ, 4 ಪಂದ್ಯಗಳಲ್ಲಿ ಸೋತು, 18 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಸದ್ಯ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.
ಹೀಗೆ ಕಳೆದ ಬಾರಿ ಮಂಕಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನೇನೋ ನೀಡುತ್ತಿದೆ. ಆದರೆ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ಸುರೇಶ್ ರೈನಾ ಮಾತ್ರ ಸಾಲು ಸಾಲು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಮಂಕಾಗಿರುವುದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿತ್ತು. ಹೀಗೆ ಕಳಪೆ ಪ್ರದರ್ಶನ ನೀಡುತ್ತಿದ್ದ ಸುರೇಶ್ ರೈನಾರನ್ನು ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಿಂದ ಕೈಬಿಡಲಾಗಿತ್ತು. ಸುರೇಶ್ ರೈನಾರನ್ನು ತಂಡದಿಂದ ಕೈಬಿಡುತ್ತಾರೆ ಎಂಬ ಆಲೋಚನೆ ಯಾರಲ್ಲಿಯೂ ಕೂಡ ಇರಲಿಲ್ಲ ಆದರೆ ತಂಡ ತೆಗೆದುಕೊಂಡ ಆ ಒಂದು ನಿರ್ಧಾರ ಇದೀಗ ಸಾಕಷ್ಟು ಚರ್ಚೆಗಳಿಗೆ ಅನುವು ಮಾಡಿಕೊಟ್ಟಿದ್ದು, ಸುರೇಶ್ ರೈನಾ ಮತ್ತೆ ತಂಡದಲ್ಲಿ ಸ್ಥಾನ ಪಡೆಯುತ್ತಾರಾ, ಪಡೆದರೂ ಪುನಃ ಕಳಪೆ ಪ್ರದರ್ಶನ ನೀಡಿದರೆ ಪ್ಲೇ ಆಫ್ ಮತ್ತು ಫೈನಲ್ ಸುತ್ತಿನ ಪಂದ್ಯಗಳಲ್ಲಿ ತಂಡದಿಂದ ಹೊರಗುಳಿಯುತ್ತಾರಾ ಎಂಬುದರ ಕುರಿತು ಚರ್ಚೆಗಳು ಆರಂಭವಾಗಿವೆ.
ಈ ಕುರಿತಾಗಿ ಇದೀಗ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಕೂಡ ಪ್ರತಿಕ್ರಿಯಿಸಿದ್ದು ಈ ಕೆಳಕಂಡಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಖಂಡಿತವಾಗಿಯೂ ಇದು ಸುರೇಶ್ ರೈನಾ ಅಂತ್ಯವಲ್ಲ ಎಂದ ಮೈಕಲ್ ವಾನ್
ಇತ್ತೀಚೆಗಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಸುರೇಶ್ ರೈನಾರನ್ನು ಕೈಬಿಟ್ಟಿರುವುದರ ಕುರಿತು ಆಶ್ಚರ್ಯ ವ್ಯಕ್ತಪಡಿಸಿರುವ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಇದು ಖಂಡಿತವಾಗಿಯೂ ಸುರೇಶ್ ರೈನಾ ಅವರ ಅಂತ್ಯವಲ್ಲ ಎಂದಿದ್ದಾರೆ.

ಸುರೇಶ್ ರೈನಾ ಮತ್ತೆ ಚೆನ್ನೈ ತಂಡ ಸೇರುವ ಭರವಸೆ ನನಗಿದೆ ಎಂದ ಮೈಕಲ್ ವಾನ್
ಇನ್ನೂ ಮುಂದುವರೆದು ಸುರೇಶ್ ರೈನಾ ಕುರಿತಾಗಿ ಮಾತನಾಡಿರುವ ಮೈಕಲ್ ವಾನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಶಸ್ವಿಯಾಗಿ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಿರುವ ಕಾರಣ ಸುರೇಶ್ ರೈನಾರನ್ನು ತಂಡದಿಂದ ಕೈಬಿಡಲಾಗಿದೆಯೇ ಹೊರತು ಪ್ರಮುಖ ಪಂದ್ಯವಾಗಿದ್ದರೆ ಸುರೇಶ್ ರೈನಾರನ್ನು ಯಾವುದೇ ಕಾರಣಕ್ಕೂ ತಂಡದಿಂದ ಆಚೆ ಇಡುತ್ತಿರಲಿಲ್ಲ ಎಂದು ಮೈಕಲ್ ವಾನ್ ಹೇಳಿದ್ದು ಮುಂದಿನ ಪ್ರಮುಖ ಪಂದ್ಯಗಳಲ್ಲಿ ಸುರೇಶ್ ರೈನಾ ಮತ್ತೆ ತಂಡ ಸೇರಿಕೊಳ್ಳುವ ಭರವಸೆ ಇದೆ ಎಂದಿದ್ದಾರೆ.

ಬೇರೆ ತಂಡದಲ್ಲಿ ಸುರೇಶ್ ರೈನಾ ಇದ್ದಿದ್ದರೆ ಇಷ್ಟೊತ್ತಿಗೆ ಬೆಂಚ್ ಕಾಯಬೇಕಿತ್ತು
ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿರುವ ಕಾರಣದಿಂದಾಗಿ ಸಾಲುಸಾಲು ಕಳಪೆ ಪ್ರದರ್ಶನ ನೀಡಿದರೂ ಅವಕಾಶವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೇ ರೀತಿಯ ಪ್ರದರ್ಶನವನ್ನು ಬೇರೆ ಫ್ರಾಂಚೈಸಿ ತಂಡಗಳಲ್ಲಿ ಸುರೇಶ್ ರೈನಾ ತೋರಿದ್ದಿದ್ದರೆ ತುಂಬಾ ದಿನಗಳ ಹಿಂದೆಯೇ ತಮ್ಮ ಸ್ಥಾನವನ್ನು ಕಳೆದುಕೊಂಡು ಬೆಂಚ್ ಕಾಯುತ್ತಿದ್ದರು ಎಂದು ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications