ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್‌ಸಿಬಿಗೆ ಮುಂಬೈ ಎದುರಾಳಿ

ಬಹು ನಿರೀಕ್ಷಿತ ಐಪಿಎಲ್ 2021ರ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಗಿದೆ. ಏಪ್ರಿಲ್ 9 2021ರಿಂದ ಆರಂಭವಾಗಲಿರುವ ಈ ಟೂರ್ನಿ ಎರಡು ತಿಂಗಳುಗಳ ಕಾಲ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನು ನೀಡಲಿದೆ. ಮೇ 30 ರಂದು ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.
ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸೆಣೆಸಾಡಲಿದೆ. ಏಪ್ರಿಲ್ 9ರಂದು ನಡೆಯುವ ಈ ಪಂದ್ಯಕ್ಕೆ ಚೆನ್ನೈನಲ್ಲಿ ಎಂಎ ಚಿದಂಬರಂ ಕ್ರೀಡಾಂಗಣ ವೇದಿಕೆಯಾಗಲಿದೆ.
ಈ ಬಾರಿಯ ಐಪಿಎಲ್ ಆವೃತ್ತಿಯ ಲೀಗ್ ಹಂತದ 56 ಪಂದ್ಯಗಳಲ್ಲಿ ಪ್ರತಿ ತಂಡಗಳು 4 ಕ್ರೀಡಾಂಗಣಗಳಲ್ಲಿ ಆಡಲಿದೆ. ಚೆನ್ನೈ, ಮುಂಬೈ, ಕೊಲ್ಕತ್ತಾ ಮತ್ತು ಬೆಂಗಲೂರು ತಲಾ 10 ಪಂದ್ಯಗಳನ್ನು ಆಯೋಜನೆ ಮಾಡಲಿದೆ. ಅಹ್ಮದಾಬಾದ್ ಹಾಗೂ ಡೆಲ್ಲಿ ತಲಾ 8 ಪಂದ್ಯಗಳಿಗೆ ಆತಿಥ್ಯವನ್ನು ವಹಿಸಲಿದೆ.
"ಈ ಬಾರಿಯ ಎಲ್ಲಾ ಐಪಿಎಲ್‌ನ ಎಲ್ಲಾ ಪಂದ್ಯಗಳು ತಟಸ್ಥ ಕೇಂದ್ರದಲ್ಲಿಯೇ ನಡೆಯುತ್ತದೆ. ಯಾವುದೇ ತಂಡ ಕೂಡ ತವರು ಮೈದಾನದಲ್ಲಿ ಆಡುವುದಿಲ್ಲ. ಆರು ಕ್ರೀಡಾಂಗಣಗಳ ಪೈಕಿ ಪ್ರತಿ ತಂಡವೂ 4 ಕ್ರೀಡಾಂಗಣಗಳಲ್ಲಿ ಆಡಲಿದೆ" ಎಂದು ಬಿಸಿಸಿಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪ್ಲೇ ಆಫ್ ಹಂತದ ಮೂರು ಪಂದ್ಯಗಳು ಹಾಗೂ ಫೈನಲ್ ಪಂದ್ಯ ಅಹ್ಮದಾಬಾಡ್‌ನ ನೂತನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೇ 23ರಂದು ಲೀಗ್ ಹಂತದ ಅಂತಿಮ ಪಂದ್ಯ ನಡೆಯಲಿದ್ದು 25ರಿಂದ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿದೆ.
ಐಪಿಎಲ್‌ನ ಸಂಪೂರ್ಣ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications